ಕಾರ್ತಿಕ್ ಆರ್ಯನ್ ಹಾಗೂ ಶ್ರೀಲೀಲಾ ಜೋಡಿಯ ಮುಂಬರುವ ‘ತು ಮೇರಿ ಜಿಂದಗಿ ಹೈ’ (ಆಶಿಕಿ 3) ಸಿನಿಮಾದ ಶೂಟಿಂಗ್ ಸೆಟ್‌ನಿಂದ ಹಲವು ಫೋಟೋ, ವಿಡಿಯೋಗಳು ವೈರಲ್ ಆಗಿ, ಇಂಟರ್ನೆಟ್‌ನಲ್ಲಿ ಭಾರಿ ಸಂಚಲನ ಮೂಡಿಸಿವೆ. ಈ ತೆರೆಮರೆಯ ದೃಶ್ಯಗಳು ಚಿತ್ರದ ಪ್ರಮುಖ ಭಾಗಗಳನ್ನು ಒಳಗೊಂಡಿರುವ ಹಿನ್ನೆಲೆ, ಅಪಾರ ಸಂಖ್ಯೆಯ ಅಭಿಮಾನಿಗಳು ಕೂಡಲೇ ಪ್ರತಿಕ್ರಿಯಿಸಲು ಪ್ರಾರಂಭಿಸಿದರು. ಪ್ರತಿಕ್ರಿಯೆಗಳು ಎಷ್ಟರ ಮಟ್ಟಿಗಿತ್ತೆಂದರೆ, ಲೀಕ್ ಆದ ವಿಡಿಯೋಗಳಲ್ಲಿ ಈಗಾಗಲೇ ಹಲವನ್ನು ವಿವಿಧ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಿಂದ ತೆಗೆದುಹಾಕಲಾಗಿದೆ.
ಅನುರಾಗ್ ಬಸು ನಿರ್ದೇಶನದ ‘ತು ಮೇರಿ ಜಿಂದಗಿ ಹೈ’ ಚಿತ್ರ ಈಗಾಗಲೇ ಸಖತ್ ಸದ್ದು ಮಾಡಿದೆ. ಕಾನೂನು ಅಡೆತಡೆಗಳಿಂದಾಗಿ ಚಿತ್ರ ತನ್ನ ಮೊದಲ ಟೈಟಲ್ ‘ಆಶಿಕಿ 3’ ಅನ್ನು ಕೈಬಿಡಬೇಕಾಯಿತು ಎಂದು ವರದಿಗಳು ಬಹಿರಂಗಪಡಿಸಿವೆ. ಅದಾಗ್ಯೂ, ಇತ್ತೀಚಿನ ಸುದ್ದಿಗಳು ತೆರೆಮರೆಯ ವಿಷಯಕ್ಕೆ ಸಂಬಂಧಿಸಿದ್ದಾಗಿವೆ. ಸದ್ಯ ಅಭಿಮಾನಿಗಳಿಗೆ ಚಿತ್ರದ ಪ್ರಮುಖ ಕ್ಷಣಗಳು ಸಿಕ್ಕಿದ್ದು, ಸಿನಿಮಾ ಮೇಲಿನ ಕುತೂಹಲ ಹೆಚ್ಚಾಗಿದೆ.
ನಿರ್ದಿಷ್ಟ ವಿಡಿಯೋವೊಂದರಲ್ಲಿ, ಕಾರ್ತಿಕ್ ಆರ್ಯನ್ ತಮ್ಮ ಮ್ಯೂಸಿಕ್ ಪ್ರೋಗ್ರಾಮ್ ನಡೆಸಿಕೊಡುತ್ತಿದ್ದಾರೆ. ಪ್ರೇಕ್ಷಕರೊಬ್ಬರು ವೇದಿಕೆ ಮೇಲೆ ಹಾರಿ ಆರ್ಯನ್‌ಗೆ ಸವಾಲು ಹಾಕಿದಂತೆ ತೋರಿದೆ. ಗ್ರೀನ್ ಶರ್ಟ್ನಲ್ಲಿ ನಟ ಕಾಣಿಸಿಕೊಂಡಿದ್ದು, ಸಿಗರೇಟನ್ನೂ ಹಿಡಿದಿದ್ದರು. ನಟಿ ಶ್ರೀಲೀಲಾ ಪಕ್ಕದಲ್ಲೇ ಇದ್ದರೂ ಅವರ ಮುಖ ಸ್ಪಷ್ಟವಾಗಿ ಗೋಚರಿಸಿಲ್ಲ. ವೇದಿಕೆ ಮೇಲೆ ಬಂದ ವ್ಯಕ್ತಿಗೆ ನಟ (ಗಾಯಕ) ತಮ್ಮ ಗಿಟಾರ್‌ನಿಂದ ಹೊಡೆದು ಸೇಡು ತೀರಿಸಿಕೊಂಡತ್ತಿತ್ತು ದೃಶ್ಯ. ಅಭಿಮಾನಿಗಳು ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಶೂಟಿಂಗ್ ಸೀನ್ಗಳು ಹೇಗೆ ವೈರಲ್ ಆಗುತ್ತಿವೆ ಎಂದು ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು ಪ್ರತಿಕ್ರಿಯಿಸಿ, “ಐ ಗೆಸ್, ಐಸೆ ತೋ ಸಾರಿ ಕಿ ಸಾರಿ ಮೂವಿ ರೀಲ್ಸ್ ಪರ್ ಹೆ ದೇಖಿ ಜಾಯೇಗಿ (ಸಿನಿಮಾದ ಎಲ್ಲಾ ದೃಶ್ಯಗಳನ್ನು ಈ ರೀಲ್ಸ್ಗಳಲ್ಲೇ ಸಿಗುತ್ತದೆ ಎಂದು ನನಗನಿಸುತ್ತಿದೆ)” ಎಂದು ತಿಳಿಸಿದ್ದಾರೆ. ಇನ್ನೊಂದು ಕಾಮೆಂಟ್ನಲ್ಲಿ “ಆಧಾ ಪಿಕ್ಚರ್ ತೊ ರೀಲ್ ಪರ್ ಹಿ ದಿಖಾ ರಹೇ ಹೋ ಯಾರ್ (ನೀವು ರೀಲ್ಸ್ನಲ್ಲೇ ಅರ್ಧದಷ್ಟು ಸಿನಿಮಾವನ್ನು ತೋರಿಸುತ್ತಿದ್ದೀರಿ)” ಎಂದು ಬರೆಯಲಾಗಿದೆ. ಅಭಿಮಾನಿಯೋರ್ವರು ಪ್ರತಿಕ್ರಿಯಿಸಿ, “ಅದನ್ನು ಬೇಗ ಡಿಲಿಟ್ ಮಾಡಿ!” ಎಂದು ತಿಳಿಸಿದ್ದಾರೆ.
‘ತು ಮೇರಿ ಜಿಂದಗಿ ಹೈ’ ಒಂದು ರೊಮ್ಯಾಂಟಿಕ್ ಮ್ಯೂಸಿಕಲ್ ಡ್ರಾಮಾ ಆಗಿದ್ದು, ಕಾರ್ತಿಕ್ ಆರ್ಯನ್ ಹಾಗೂ ಶ್ರೀಲೀಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಟೀಸರ್ ಈಗಾಗಲೇ ಸಖತ್ ಸದ್ದು ಮಾಡಿದೆ. ಕಾರ್ತಿಕ್ ‘ತು ಮೇರಿ ಜಿಂದಗಿ ಹೈ’ ಎಂಬ ಟೈಟಲ್ ಸಾಂಗ್ ಅನ್ನೂ ಹಾಡಿದ್ದಾರೆ ಮತ್ತು ಶ್ರೀಲೀಲಾ ಜೊತೆ ಕೆಲ ರೊಮ್ಯಾಂಟಿಕ್ ಕ್ಷಣಗಳನ್ನು ಸಹ ಶೇರ್ ಮಾಡಿದ್ದಾರೆ. ಇತ್ತೀಚೆಗೆ, ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದ ಶೂಟಿಂಗ್ನ ಫೋಟೋ ವಿಡಿಯೋಗಳು ಸಹ ವೈರಲ್ ಆಗಿವೆ. ಜೋಡಿ ಒಟ್ಟಿಗೆ ಬೈಕ್ ರೈಡ್ ಮಾಡುತ್ತಿರುವುದು ಕಂಡುಬಂದಿದೆ.