ಬೆಂಗಳೂರು, ಜೂ13(Zoom Karnataka) ಕಳೆದ ವಾರವಷ್ಟೇ ಸಹನಾ ಆರ್ಟ್ಸ್ ವಿಡಿಯೋ ಒಟಿಟಿ ನಲ್ಲಿ ಬಿಡುಗಡೆ ಯಾದ ಸಿನಿಮಾ ಬಾರಿಸು ಕನ್ನಡ ಡಿಂಡಿಮವ ಇದು ಮಕ್ಕಳಿಗೆ ಒಂದು ಉತ್ತಮ ಸಂದೇಶ ನೀಡುವ ಚಿತ್ರವಾಗಿದ್ದು ಎಲ್ಲರ ಜನ ಮನ ಗೆದ್ದ ಚಿತ್ರವಾಗಿ ಹೊರಹೊಮ್ಮಿದೇ ಈ ಸಿನಿಮಾ ಬಿಡುಗಡೆಗೆ ಮೊದಲೇ ಬಾರಿ ಸುದ್ದಿ ಮಾಡಿದ್ದ ಸಿನಿಮಾ ಸಾಕಷ್ಟು ದೇಶ ವಿದೇಶಗಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಗಳನ್ನು ಪಡೆದಿದ್ದು ಹಿರಿಯ ನಿರ್ದೇಶಕರ ಮನಸ್ಸು ಗೆದ್ದ ಚಿತ್ರವಿದು ಅಷ್ಟೇ ಅಲ್ಲದೆ ಈ ಸಿನಿಮಾ ನ್ಯಾಷಿನಲ್ ರೆಕಾರ್ಡ್ ಕೂಡ ಮಾಡಿದೆ ಈ ಯಶಸ್ಸುನನ್ನು ಮೈಸೂರು ಪ್ರೆಸ್ ಕ್ಲಬ್ ನಲ್ಲಿ ಚಿತ್ರ ತಂಡ ಆಚರಿಸಿಕೊಂಡಿತು, ಸಿನಿಮಾದ ನಿರ್ಮಾಪಕರು ಹಾಗೂ ನಿರ್ದೇಶಕರಾದ ನವಿಲುಗರಿ ನವೀನ್ ಪಿ ಬಿ ಹಾಗೂ ಸಹ ನಿರ್ಮಾಪಕಿ ಅಶ್ವಿಕ ಮೈಸೂರು, ಸ್ವಾಮಿ ವಿವೇಕಾನಂದ ಸೋಷಿಯಲ್ ಸರ್ವೀಸ್ ಟ್ರಸ್ಟ್ ನ ಅಧ್ಯಕ್ಷರಾದ ರಾಜಶೇಖರ್, ಪುಣ್ಯಕೋಟಿ ಹಾಗೂ ಗೀತಾ ಶ್ರೀಧರ್ ವೇದಿಕೆ ಮೇಲೆ ಉಪಸ್ಥಿತರಿದ್ದರು,
ಖುಷಿ ಹೆಚ್,ಲೇಖನ ಚಿಕ್ಕಹಳ್ಳಿ, ನಿರಂತ್ ಸೂರ್ಯ, ವರ್ಷ ವಿ ಮೇಟಿ, ಪ್ರತೀಕ್ಷಾ, ರಿಷಿರಾಜ್, ಮಣಿ, ಸಂದೀಪ್ ಮಾಲನಿ, ಹರಿಣಿ ನಟರಾಜ್, ಹೆಚ್ ಎನ್ ಸ್ವಾಮಿ, ಶರತ್, ಶೋಭಾ, ಕಮಲ ಕಣ್ಣನ್, ಮಹಿಮಾ ಕುಂದಾಪುರ, ಡಾ. ಅಪ್ಪಾಜೀ ಗೌಡ, ರಾಜ್ ಮನೀಶ್ ಹಾಗೂ ಇನ್ನೂ ಆನೇಕರು ಈ ಸಿನಿಮಾ ವಿಜಯೋತ್ಸವಕ್ಕೆ ಸಾಕ್ಷೀ ಆದರೂ. ಇಂತಹ ಪ್ರಯೋಗಾತ್ಮಕ ಚಲನಚಿತ್ರವನ್ನು ಯಶಸ್ಸು ಮಾಡಿಸಿದ ಎಲ್ಲ ಸಿನಿಮಾ ಅಭಿಮಾನಿಗಳಿಗೆ ಧನ್ಯವಾದಗಳನ್ನು ಚಿತ್ರ ತಂಡ ತಿಳಿಸಿದರು