ಬೆಂಗಳೂರು,ಮಾ.20(Zoom Karnataka): 2024-25ರ ಸಾಲಿಗೆ 13,823.47 ಕೋಟಿ ರೂ. ಮೊತ್ತದ ಅಂತಿಮ ಪೂರಕ ಅಂದಾಜನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ.
13,823.47 ಕೋಟಿ ರೂ.ಗಳಲ್ಲಿ 71.98 ಕೋಟಿ ರೂ.ಗಳು ಪ್ರಭುತ್ವ ವೆಚ್ಚ ಮತ್ತು 13,751.49 ಕೋಟಿ ರೂ. ಪುರಸ್ಕೃತ ವೆಚ್ಚ ಸೇರಿರುತ್ತದೆ. ಇದರಲ್ಲಿ ಮೀಸಲು ನಿಧಿಯಿಂದ ಭರಿಸಲಾಗುವ 1512.21 ಕೋಟಿ ರೂ. ಸಹ ಪುರಸ್ಕೃತವಾಗಬೇಕಿದೆ. ಸಂಚಿತ ನಿಧಿಯಿಂದ ಹೊರಹೋಗುವ ನಿವ್ವಳ ಮೊತ್ತ 12,311.26 ಕೋಟಿ ರೂ., 1187.73 ಕೋಟಿ ರೂ. ಕೇಂದ್ರ ಸಹಾಯಕ್ಕೆ ಸಂಬಂಧಿಸಿವೆ.
ಪೂರಕ ಅಂದಾಜಿನಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆೆ ರಾಜಸ್ವ ಖಾತೆಗೆ 475.98 ಕೋಟಿ ರೂ. ಹಾಗೂ ಬಂಡವಾಳ ಖಾತೆಗೆ 15 ಕೋಟಿ ರೂ., ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ ರಾಜಸ್ವ ಖಾತೆಗೆ 257.20 ಕೋಟಿ ರೂ. ಹಾಗೂ ಬಂಡವಾಳ ಖಾತೆಗೆ 10.69 ಕೋಟಿ ರೂ., ಆರ್ಥಿಕ ಇಲಾಖೆೆ ರಾಜಸ್ವ ಖಾತೆಗೆ 27.55 ಕೋಟಿ ರೂ. ಹಾಗೂ ಬಂಡವಾಳ ಖಾತೆಗೆ 766.85 ಕೋಟಿ ರೂ., ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ರಾಜಸ್ವ ಖಾತೆಗೆ 52.40 ಕೋಟಿ ರೂ., ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಗೆ ರಾಜಸ್ವ ಖಾತೆಗೆ 71.71 ಕೋಟಿ ರೂ. ಮಂಜೂರು ಮಾಡಲು ಕೋರಲಾಗಿದೆ.
ಸಮಾಜ ಕಲ್ಯಾಣ ಇಲಾಖೆಗೆ ರಾಜಸ್ವ ಖಾತೆಗೆ 447.79 ಕೋಟಿ ರೂ. ಹಾಗೂ ಬಂಡವಾಳ ಖಾತೆಗೆ 113.99 ಕೋಟಿ ರೂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆೆ ರಾಜಸ್ವ ಖಾತೆಗೆ 57.84 ಕೋಟಿ ರೂ., ವಾರ್ತಾ, ಪ್ರವಾಸೋದ್ಯಮ ಮತ್ತು ಯುವ ಜನ ಸೇವೆಗಳು ಇಲಾಖೆ ರಾಜಸ್ವ ಖಾತೆಗೆ 157.21 ಕೋಟಿ ರೂ., ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ 36.01 ಲಕ್ಷ ರೂ., ಕಂದಾಯ ಇಲಾಖೆೆ ರಾಜಸ್ವ ಖಾತೆಗೆ 282.84 ಕೋಟಿ ರೂ. ಹಾಗೂ ಬಂಡವಾಳ ಖಾತೆಗೆ 96 ಕೋಟಿ ರೂ., ಶಿಕ್ಷಣ ಇಲಾಖೆೆ ರಾಜಸ್ವ ಖಾತೆಗೆ 29.12 ಕೋಟಿ ರೂ. ಪೂರಕ ಅಂದಾಜು ಮಾಡಲಾಗಿದೆ.