ತಾಜಾ ಸುದ್ದಿ

ಚಿನ್ನ ಕಳ್ಳಸಾಗಣೆ ಆರೋಪ-ರನ್ಯಾ ರಾವ್​​ ಜಾಮೀನು ಅರ್ಜಿ ವಜಾ

Published

on

ಬೆಂಗಳೂರು, ಮಾ.14(Zoom Karnataka) : ಚಿನ್ನದ ಕಳ್ಳಸಾಗಣೆ ಆರೋಪದ ಮೇಲೆ ಕಳೆದ ವಾರ ಬಂಧಿಸಲ್ಪಟ್ಟ ಕನ್ನಡ ನಟಿ ರನ್ಯಾ ರಾವ್ ಅವರ ಜಾಮೀನು ಅರ್ಜಿಯನ್ನು ಇಲ್ಲಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿದೆ . ವಾದ ಮತ್ತು ಪ್ರತಿವಾದಗಳ ನಂತರ ನ್ಯಾಯಾಲಯವು ಬುಧವಾರ ಆದೇಶಗಳನ್ನು ಕಾಯ್ದಿರಿಸಿತ್ತು ನಂತರ ಇದೀಗ ಅರ್ಜಿ ವಜಾಗೊಳಿಸಲಾಗಿದೆ.

ರನ್ಯಾ ಅವರನ್ನು ಹೈಪ್ರೊಫೈಲ್ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿಸಲಾಯಿತು. ಮೊದಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಲಾಯಿತು. ಆದರೆ ಅವರ ವಿನಂತಿಯನ್ನು ತಿರಸ್ಕರಿಸಲಾಯಿತು. ನಂತರ ಅವರು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯವನ್ನು ಸಂಪರ್ಕಿಸಿದರು, ಅಲ್ಲಿ ಅವರ ಅರ್ಜಿಯನ್ನು ಮತ್ತೆ ವಜಾಗೊಳಿಸಲಾಯಿತು.

ರನ್ಯಾ ಅವರ ಜಾಮೀನು ಅರ್ಜಿ ತಿರಸ್ಕೃತಗೊಂಡ ನಂತರ, ಅವರ ಕಾನೂನು ತಂಡವು ಪರಿಹಾರಕ್ಕಾಗಿ ಸೆಷನ್ಸ್ ನ್ಯಾಯಾಲಯವನ್ನು ಸಂಪರ್ಕಿಸಲು ಸಿದ್ಧತೆ ನಡೆಸಿದೆ. ಅವರ ಜಾಮೀನು ಅರ್ಜಿಯ ತೀರ್ಪು ಬರುವವರೆಗೆ, ಅವರು ನ್ಯಾಯಾಂಗ ಬಂಧನದಲ್ಲಿಯೇ ಇರುತ್ತಾರೆ.

12 ಕೋಟಿ ರೂ. ಮೌಲ್ಯದ 14.8 ಕಿಲೋಗ್ರಾಂಗಳಷ್ಟು ಚಿನ್ನವನ್ನು ಭಾರತಕ್ಕೆ ಕಳ್ಳಸಾಗಣೆ ಮಾಡಲು ಯತ್ನಿಸಿದ ಆರೋಪದ ಮೇಲೆ ರನ್ಯಾ ರಾವ್ ಅವರನ್ನು ಮಾರ್ಚ್ 4, 2025 ರಂದು ಬಂಧಿಸಲಾಯಿತು. ದುಬೈನಿಂದ ಹಿಂತಿರುಗುತ್ತಿದ್ದಾಗ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು.

Leave a Reply

Your email address will not be published. Required fields are marked *

Trending

Exit mobile version