ಮನೋರಂಜನೆ

ಕಡಲ ತೀರದಲ್ಲಿ ಮುದ್ದಿನ ಮಡದಿಗೆ ಮುತ್ತಿಟ್ಟ ಕಾಂತಾರ ಸ್ಟಾರ್

Published

on

ಕಾಂತಾರ ಎಂಬ ಬ್ಲಾಕ್​ಬಸ್ಟರ್ ಚಿತ್ರದ ಮೂಲಕ ಭಾರತದಾದ್ಯಂತ ಹೆಸರು ಗಳಿಸಿರುವ ರಿಷಬ್​ ಶೆಟ್ಟಿ ಅವರ ದಾಂಪತ್ಯ ಜೀವನಕ್ಕೀಗ 9 ವರ್ಷಗಳ ಸಂಭ್ರಮ. ಇತ್ತೀಚೆಗಷ್ಟೇ ರಿಷಬ್​ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು. ಇಂದು ತಮ್ಮ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ಮುದ್ದಾದ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಜನಪ್ರಿಯ ದಂಪತಿ ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾಗಳಲ್ಲಿ 8 ಫೋಟೋಗಳನ್ನು ಶೇರ್ ಮಾಡಿದ್ದಾರೆ. ಕಡಲ ತೀರದಲ್ಲಿ ರೊಮ್ಯಾನ್ಸ್​ ಮಾಡಿದ್ದು, ಫೋಟೋಗಳು ಬಹಳ ಮುದ್ದಾಗಿವೆ.ಮೊದಲ ಫೋಟೋದಲ್ಲಿ ರಿಷಬ್​, ಪ್ರಗತಿ ಪ್ರೀತಿಯ ಬಾಹು ಬಂಧನದಲ್ಲಿರುವುದನ್ನು ಕಾಣಬಹುದು. ಪ್ರಗತಿ ಬ್ಲ್ಯೂ ಆ್ಯಂಡ್​ ವೈಟ್​ ಫ್ರಾಕ್​ ಧರಿಸಿದ್ದರೆ, ರಿಷಬ್​ ಶೆಟ್ಟಿ ವೈಟ್​ ಶರ್ಟ್​, ಬ್ಲ್ಯಾಕ್​ ಪ್ಯಾಂಟ್​​, ಸನ್‌ಗ್ಲಾಸ್​ ಧರಿಸಿ ಇಬ್ಬರೂ ಮಾಡರ್ನ್‌ ಲುಕ್​ ಕೊಟ್ಟಿದ್ದಾರೆ. ನಟನ ಬಿಯರ್ಡ್ ಲುಕ್​ ಅವರ ಮುಂದಿನ ಚಿತ್ರಗಳ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ. ಎರಡನೇ ಫೋಟೋದಲ್ಲಿ ತಮ್ಮ ಇಬ್ಬರು ಮುದ್ದಾದ ಮಕ್ಕಳ ಕೈ ಹಿಡಿದು ಕಡಲ ತೀರದಲ್ಲಿ ನಡೆದು ಬರುತ್ತಿರುವುದನ್ನು ಕಾಣಬಹುದು. ಸಿನಿಮಾ ಸಾಧಕ ಓರ್ವ ಪಕ್ಕಾ ಫ್ಯಾಮಿಲಿ ಮ್ಯಾನ್​ ಅನ್ನೋದನ್ನೂ ಈ ಫೋಟೋ ತಿಳಿಸಿದೆ.ಮುಂದಿನ ಫೋಟೋದಲ್ಲಿ ಕಡಲ ತೀರ, ಪುಷ್ಪಾಲಂಕಾರದ ಹಿನ್ನೆಲೆಯಲ್ಲಿ ನಿಂತಿರುವ ದಂಪತಿ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ. ಮುದ್ದಿನ ಮಡದಿ ಪ್ರಗತಿಗೆ ಪ್ರೀತಿಯ ಮುತ್ತಿಟ್ಟಿದ್ದು, ಸೂರ್ಯನ ಕಿರಣ ತಾಕಿರುವ ಅವರ ಫೋಟೋ ಬಹಳ ಸುಂದರವಾಗಿ ಮೂಡಿಬಂದಿದೆ. ವಿವಾಹ ವಾರ್ಷಿಕೋತ್ಸವದ ಕೇಕ್​ ಅನ್ನೂ ಇಲ್ಲಿ ಕಾಣಬಹುದು. ದಂಪತಿಯ ಕ್ಯೂಟ್​ ಫೋಟೋವನ್ನು ಕೇಕ್​ ಮೇಲೆ ಚಿತ್ರಿಸಲಾಗಿದ್ದು, ಹಂಚಿಕೊಂಡಿರುವ ಪ್ರತೀ ಫೋಟೋಗಳೂ ಪ್ರೀತಿಯನ್ನು ಹೊರಸೂಸುತ್ತಿವೆ.

ಚಿತ್ರಮಂದಿರವೊಂದರಲ್ಲಿ ರಿಷಬ್​ ಹಾಗೂ ಪ್ರಗತಿ ಮೊದಲು ಭೇಟಿ ಆದರು. ರಿಷಬ್​ ಅವರ ಸಿನಿಮಾಗೆ ಅಭಿಮಾನಿಯಾಗಿ ಪ್ರಗತಿ ಆಗಮಿಸಿದ್ದರು. ಆರಂಭದ ದಿನಗಳಾದ ಹಿನ್ನೆಲೆಯಲ್ಲಿ ರಿಷಬ್​​ ಅಷ್ಟೊಂದು ಜನಪ್ರಿಯರಾಗಿರಲಿಲ್ಲ. ಪ್ರೇಕ್ಷಕರು ನಾಯಕ, ನಾಯಕಿಯನ್ನು ಸುತ್ತುವರೆದಿದ್ದರು. ಆದರೆ ಪ್ರಗತಿ ಅವರು ನಿರ್ದೇಶಕ ರಿಷಬ್​​ ಅವರನ್ನು ಗುರುತಿಸಿ ನಿಮ್ಮ ಅಭಿಮಾನಿ ಎಂದು ಪರಿಚಯಿಸಿಕೊಂಡರು. ಅಲ್ಲಿಂದ ಇಬ್ಬರ ಸ್ನೇಹ ಶುರುವಾಯಿತು. ಪ್ರೀತಿಗೆ ತಿರುಗಿ ಹಸೆಮಣೆ ಏರಿದರು. ಜನಪ್ರಿಯ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version