ಮಂಗಳೂರು: 29 – “ಒಲವಿನ ಪಯಣ ಒಂದು ಹಳ್ಳಿಯ ಮಧ್ಯಮವರ್ಗದ ಕುಟುಂಬದ ಯುವಕನ ಬದುಕಿನ ಪಯಣದ ಕಥೆ. ಗೊತ್ತು ಗುರಿಯಿಲ್ಲದೆ ಪ್ರೀತಿ ಪ್ರೇಮ ಎಂದು ಓಡಾಡುತ್ತಿರುವ ಹುಡುಗನೊಬ್ಬ ತಾನು ಪ್ರೀತಿಸಿದ ಶ್ರೀಮಂತ ಹುಡುಗಿಯನ್ನು ಬಾಳಸಂಗಾತಿಯಾಗಿ ಪಡೆಯಲು ಅವಳ
ತಂದೆಗೆ ಸವಾಲು ಹಾಕಿ ಕೊನೆಗೆ ಆ ಸವಾಲನ್ನು ಗೆದ್ದು ಮದುವೆಯಾಗಿ ಸುಖವಾಗಿ ಜೀವನ ಸಾಗಿಸಬೇಕೆನ್ನುವಾಗ ಅವನ ಜೀವನದಲ್ಲಿ ವಿಧಿಯಾಟದಿಂದ ನಡೆಯುವ ತಿರುವುಗಳನ್ನು ಹೊಂದಿದೆ“ ಎಂದು ಚಿತ್ರದ ನಿರ್ದೇಶಕ ಕಿಶನ್ ಬಲ್ನಾಡ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. ”ಒಲವಿನ ಪಯಣ ಸಿನಿಮಾ ಫೆ.21ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ಫ್ಯಾಮಿಲಿ ಒರಿಯೆಂಟೆಡ್ ಸಿನಿಮಾ ಇದಾಗಿದ್ದು ಕನ್ನಡ ಸಿನಿಮಾ ಪ್ರೇಮಿಗಳನ್ನು ರಂಜಿಸುವ ಎಲ್ಲ ಅಂಶಗಳು ಸಿನಿಮಾದಲ್ಲಿ ಇರಲಿವೆ“ ಎಂದರು. ನಾಯಕನಟ ಸುನಿಲ್ ಮಾತಾಡಿ, ”ಸಿನಿಮಾದಲ್ಲಿ ಒಳ್ಳೆಯ ಕಥಾ ಸಾರಾಂಶವಿದೆ. ಇಬ್ಬರು ನಾಯಕಿಯರಿದ್ದು ಇಬ್ಬರೂ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಸಿನಿಮಾ ಕತೆಯನ್ನು ಸಂಕ್ಷಿಪ್ತವಾಗಿ ಜನರ ಮುಂದಿಡುವ ಪ್ರಯತ್ನ ಮಾಡಿದ್ದೇವೆ. ಎಲ್ಲರೂ ಸಿನಿಮಾ ನೋಡಿ“ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಟಿಯರಾದ ಖುಷಿ, ಪ್ರಿಯಾ ಹೆಗ್ಡೆ, ನಾಗೇಶ್ ಮಯ್ಯ ಮತ್ತಿತರರು ಉಪಸ್ಥಿತರಿದ್ದರು. ಸಿನಿಮಾ ಕುರಿತು: ನಿರ್ಮಾಣ ಸಂಸ್ಥೆ – ಮುಳಗುಂದ ಕ್ರಿಯೇಷನ್ಸ್ ನಿರ್ಮಾಪಕರು – ನಾಗರಾಜ್ ಎಸ್ ಮುಳಗುಂದ ಛಾಯಗ್ರಾಹಕ – ಜೀವನ್ ಗೌಡ ಸಂಕಲನ – ಕೀರ್ತಿರಾಜ್ ಕಲರಿಸ್ಟ್ – ಗುರುಪ್ರಸಾದ್ ಎಸ್ ಎಪ್ ಎಕ್ಸ್ – ನವೀನ್ ಸಂಗೀತ – ಸಾಯಿ ಸರ್ವೇಶ್ ನಾಯಕ – ಸುನೀಲ್ ನಾಯಕಿಯರು – ಖುಷಿ, ಪ್ರಿಯ ಹೆಗ್ಡೆ ಪೊಷಕ ಕಲಾವಿದರು – ಪದ್ಮಜಾ ರಾವ್, ಬಲ ರಾಜ್ವಾಡಿ, ನಾಗೇಶ್ ಮಯ್ಯ, ಪೃಥ್ವಿರಾಜ್, ಸುಧಾಕರ್ ಬನ್ನಂಜೆ, ಸೂರ್ಯಕಿರಣ್, ಧನಂಜಯ್, ಸಮೀಕ್ಷಾ, ಬೇಬಿ ರಿಧಿ.