ಮನೋರಂಜನೆ

ರಾಕಿಭಾಯ್​ನ ವಾಕಿಂಗ್​ ಸ್ಟೈಲ್​ಗೆ ಫ್ಯಾನ್ಸ್ ಫಿದಾ

Published

on

ಕೆಜಿಎಫ್​​ ಸಿನಿಮಾಗಳ ಮೂಲಕ ವಿಶ್ವದಾದ್ಯಂತ ಜನಪ್ರಿಯರಾಗಿರುವ ಯಶ್​​ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್​​’. ಕಳದ ಕೆಜಿಎಫ್​​ 2 ತೆರೆಕಂಡು 2ವರ್ಷಗಳೇ ಸಮೀಪಿಸುತ್ತಿದೆ. ಮುಂದಿನ ಏಪ್ರಿಲ್​ಗೆ ‘ಟಾಕ್ಸಿಕ್’​ ಚಿತ್ರಮಂದಿರ ಪ್ರವೇಶಿಸಲಿದೆ ಎಂದು ಚಿತ್ರತಂಡ ಈಗಾಗಲೇ ಘೋಷಿಸಿದ್ದು, ಅಭಿಮಾನಿಗಳ ಕಾತರ ಹೆಚ್ಚಿದೆ. ಕಳೆದ ಕೆಲ ದಿನಗಳಿಂದ ಮುಂಬೈನಲ್ಲಿರುವ ನಾಯಕ ನಟ ಯಶ್​ ಅವರ ಹೊಸ ವಿಡಿಯೋ ವೈರಲ್​​ ಆಗಿದ್ದು, ರಾಕಿಭಾಯ್​ನ ವಾಕಿಂಗ್​ ಸ್ಟೈಲ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

‘ಕೆಜಿಎಫ್​​’ನಲ್ಲಿನ ಅಮೋಘ ಅಭಿನಯದ ಮೂಲಕ ಸಾಕಷ್ಟು ಹೆಸರು ಸಂಪಾದಿಸಿರುವ ಕನ್ನಡ ಚಿತ್ರರಂಗದ ರಾಕಿಂಗ್​ ಸ್ಟಾರ್​ ಯಶ್​ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ನಟನ ವೃತ್ತಿಜೀವನದ ಜೊತೆ ಜೊತೆಗೆ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಉತ್ಸುಕರಾಗಿರುತ್ತಾರೆ. ಅದರಂತೆ ಅವರ ಹೊಸ ಫೋಟೋ ವಿಡಿಯೋಗಳಿಗಾಗಿ ಅಭಿಮಾನಿಗಳು ಕಾತರರಾಗಿರುತ್ತಾರೆ. ಅದರಂತೆ ಇದೀಗ ಮುಂಬೈನಿಂದ ನಟನ ವಿಡಿಯೋ ಹೊರಬಿದ್ದಿದೆ.

ಮುಂಬೈ ಮತ್ತು ಹೈದರಾಬಾದ್​ನಲ್ಲಿ ಪಾಪರಾಜಿ (ಛಾಯಾಗ್ರಹಣ) ಸಂಸ್ಕೃತಿ ಹೆಚ್ಚಿದೆ. ಸೆಲೆಬ್ರಿಟಿಗಳು ಹೊರಗೆ ಕಂಡೊಡನೆ ಅವರ ಫೋಟೋ ವಿಡಿಯೋಗಳನ್ನು ಸೆರೆಹಿಡಿದು ಪಾಪರಾಜಿಗಳು ಹಂಚಿಕೊಳ್ಳುತ್ತಾರೆ. ಈ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳ ಮೊಗದಲ್ಲಿ ನಗು ತರಿಸುತ್ತಾರೆ. ಅದರಂತೆ ಇದೀಗ ಯಶ್​ ಅವರ ಮುಂಬೈ ವಿಡಿಯೋ ಶೇರ್ ಆಗಿದೆ. ಇದು ಏರ್​ಪೋರ್ಟ್ ಬಳಿ ಕ್ಲಿಕ್ಕಿಸಿದಂತೆ ತೋರುತ್ತಿದೆ. ನಟನ ವಾಕಿಂಗ್​ ಸ್ಟೈಲ್​ಗೆ ಫ್ಯಾನ್ಸ್ ಫಿದಾ ಆಗಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅದೆಷ್ಟೇ ದೊಡ್ಡ ಸ್ಟಾರ್​ ಆಗಿದ್ರೂ ಕೂಡಾ ಯಶ್​​ ಪಕ್ಕಾ ಫ್ಯಾಮಿಲಿ ಮ್ಯಾನ್​​ ಅನ್ನೋದು ನಿಮಗೆ ತಿಳಿದಿರುವ ವಿಚಾರವೇ. ಸಿನಿಮಾ ಹೊರುತುಪಡಿಸಿದರೆ ತಮ್ಮ ಬಹುತೇಕ ಸಮಯವನ್ನು ಕುಟುಂಬಕ್ಕೆ ಮೀಸಲಿಡುತ್ತಾರೆ. ಸರಿಸುಮಾರು ಕಳೆದೊಂದು ತಿಂಗಳಿನಿಂದ ಮುಂಬೈನಲ್ಲಿ ತಮ್ಮ ಅಪ್​ಕಮಿಂಗ್ ಬಿಗ್​ ಪ್ರಾಜೆಕ್ಟ್​​ ‘ಟಾಕ್ಸಿಕ್​’ ಶೂಟಿಂಗ್​​ನಲ್ಲಿ ನಿರತರಾಗಿರುವ ಇಂಡಿಯನ್​ ಸೂಪರ್​ ಸ್ಟಾರ್​ ಇತ್ತೀಚೆಗಷ್ಟೇ ತಮ್ಮ ಕಂಪ್ಲೀಟ್​ ಫ್ಯಾಮಿಲಿಯೊಂದಿಗೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದರು. ಪತ್ನಿ ರಾಧಿಕಾ ಪಂಡಿತ್​, ಮುದ್ದು ಮಕ್ಕಳಾದ ಯಥರ್ವ್​​, ಐರಾ ಜೊತೆ ಇದ್ದ ನಟನ ಸುತ್ತ ಅಭಿಮಾನಿಗಳು ಬಂದು ಸೇರಿದ್ದರು. ಓರ್ವ ಕಟ್ಟಾ ಅಭಿಮಾನಿಯೊಂತು ನಟನ ಕಾಲು ಮುಟ್ಟಿ ಆಶೀರ್ವಾದ ಪಡೆದಿದ್ದರು. ಆದ್ರೆ ಹೀಗೆಲ್ಲಾ ಮಾಡದಂತೆ ಯಶ್​ ಸನ್ನೆ ಮಾಡಿದ್ದರು.

Leave a Reply

Your email address will not be published. Required fields are marked *

Trending

Exit mobile version