ಮನೋರಂಜನೆ

ಗಾಯಕ ಎಆರ್ ರೆಹಮಾನ್ ದಾಂಪತ್ಯದಲ್ಲಿ ಬಿರುಕು

Published

on

ಮುಂಬೈ, ನ.21(Zoom Karnataka): ಸಂಗೀತ ಸಂಯೋಜಕ, ಗಾಯಕ ಎಆರ್ ರೆಹಮಾನ್ ಹಾಗೂ ಪತ್ನಿ ಸೈರಾ ಬಾನು ಅವರ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿದ್ದು, ಅವರು ತಮ್ಮ ಪತ್ನಿಗೆ ವಿಚ್ಛೇದನ ನೀಡಿದ್ದಾರೆ.

ಎಆರ್ ರೆಹಮಾನ್ ದಂಪತಿ ಇನ್ನೇನು ಮೂರು ದಶಕಗಳ ದಾಂಪತ್ಯ ಸಂಭ್ರಮ ಆಚರಿಸಬೇಕಿತ್ತು. ಆದರೀಗ ಅವರಿಬ್ಬರ 29 ವರ್ಷಗಳ ದಾಂಪತ್ಯ ಕೊನೆ ಆಗಿದೆ. ವಿಚ್ಛೇದನ ಪಡೆಯುವ ಸೈರಾ ಬಾನು ಅವರು ಖಚಿತಪಡಿಸಿದ್ದರು. ಇದೀಗ ಎಆರ್ ರೆಹಮಾನ್ ವಿಚ್ಛೇದನ ನೀಡುವ ಬಗ್ಗೆ ಬಹಿರಂಗಗೊಳಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಅವರು, ‘ನಾವು ಇನ್ನೇನು 30 ವರ್ಷಗಳ ದಾಂಪತ್ಯಕ್ಕೆ ಕಾಲಿಡಬೇಕಿತ್ತು. ಆದರೆ, ಯಾರೂ ಊಹಿಸದ ಅಂತ್ಯ ಸಿಕ್ಕಿದೆ. ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನವೂ ನಡುಗಬಹುದು. ಆದರೂ, ಈ ಚೂರಾದ ಸಂಬಂಧದಲ್ಲೂ ನಾವು ಅರ್ಥವನ್ನು ಹುಡುಕುತ್ತೇವೆ. ಒಡೆದ ತುಣುಕುಗಳು ಮತ್ತೆ ಎಂದಿಗೂ ಒಂದಾಗಲಾರದು. ನಮ್ಮ ಖಾಸಗಿತನ ಗೌರವಿಸಿದ ಗೆಳೆಯರಿಗೆ ಧನ್ಯವಾದ’ ಎಂದು ಪೋಸ್ಟ್ ಮಾಡಿದ್ದಾರೆ.

1995ರಲ್ಲಿ ಎ.ಆರ್. ರೆಹಮಾನ್ ಹಾಗೂ ಸೈರಾ ಮದುವೆ ಆಗಿದ್ದರು. ಈ ದಂಪತಿಗೆ ಮೂವರು ಮಕ್ಕಳು ಕೂಡ ಇದ್ದಾರೆ.

Leave a Reply

Your email address will not be published. Required fields are marked *

Trending

Exit mobile version