ಮನೋರಂಜನೆ

ಮತ್ತೆ ಜೋಡಿಯಾದ ಡಾಲಿ ಧನಂಜಯ್-ಅಮೃತಾ ಅಯ್ಯಂಗಾರ್

Published

on

ಧನಂಜಯ್ ಮತ್ತು ಅಮೃತಾ ಅಯ್ಯಂಗಾರ್ ಅವರು ಮತ್ತೊಮ್ಮೆ ಒಂದೇ ಸಿನಿಮಾದಲ್ಲಿ ನಟಿಸಿದ್ದಾರೆ. ತೆಲುಗು ಚಿತ್ರವಾಗಿರುವ ‘ಜಿಬ್ರಾ’ ನವೆಂಬರ್ 22ರಂದು ಬಿಡುಗಡೆಯಾಗಲಿದೆ. ಧನಂಜಯ್ ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಇದರಲ್ಲಿ ಅಮೃತಾ ಕೂಡ ಕಾಣಿಸಿಕೊಂಡಿದ್ದಾರೆ.

ನಟ ಧನಂಜಯ್ ಹಾಗೂ ಅಮೃತಾ ಅಯ್ಯಂಗಾರ್ ಅವರದ್ದು ಸೂಪರ್ ಹಿಟ್ ಜೋಡಿ. ಇವರು ಮೊದಲು ಒಟ್ಟಾಗಿ ನಟಿಸಿದ್ದು ‘ಪಾಪರ್ಕಾರ್ನ್ ಮಂಕಿ ಟೈಗರ್’ ಚಿತ್ರದಲ್ಲಿ. ಆ ಬಳಿಕ ‘ಬಡವ ರಾಸ್ಕಲ್’ ಸಿನಿಮಾ ಮಾಡಿದರು. ‘ಗುರುದೇವ ಹೊಯ್ಸಳ’ ಚಿತ್ರದಲ್ಲಿಯೂ ಇವರು ಒಟ್ಟಾಗಿ ತೆರೆ ಹಂಚಿಕೊಂಡಿದ್ದರು. ವಿಶೇಷ ಎಂದರೆ ಈಗ ಈ ಜೋಡಿ ಮತ್ತೆ ಒಂದಾಗಿದೆ. ಆ ಚಿತ್ರದ ಹೆಸರೇ ‘ಜಿಬ್ರಾ’. ಈಗಾಗಲೇ ಶೂಟಿಂಗ್ ಪೂರ್ಣಗೊಳಿಸಿರುವ ತಂಡ ನವೆಂಬರ್ 22ಕ್ಕೆ ಸಿನಿಮಾನ ರಿಲೀಸ್ ಮಾಡುತ್ತಿದೆ.

‘ಜಿಬ್ರಾ’ ಪಕ್ಕಾ ತೆಲುಗು ಸಿನಿಮಾ. ಈ ಚಿತ್ರದಲ್ಲಿ ಕೆಲಸ ಮಾಡಿರುವ ಬಹುತೇಕರು ತೆಲುಗಿನವರೇ. ಕನ್ನಡದ ಡಾಲಿ ಧನಂಜಯ್ ಅವರು ಈ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ಧನಂಜಯ್ ಜೊತೆ ಅಮೃತಾ ಅಯ್ಯಂಗಾರ್ ಕೂಡ ಒಂದು ಪಾತ್ರ ಮಾಡಿದ್ದಾರೆ. ಅವರು ಟ್ರೇಲರ್​ನಲ್ಲಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಆದರೆ, ಸಿನಿಮಾದಲ್ಲಿ ಇವರ ಪಾತ್ರ ಇರಲಿದೆ. ಆರಾದಿಯಾ ಅನ್ನೋದು ಅವರ ಮಾಡಿದ ಪಾತ್ರದ ಹೆಸರು ಎಂಬ ಮಾಹಿತಿ ವಿಕಿಪೀಡಿಯಾದಲ್ಲಿ ಇದೆ.

‘ಜಿಬ್ರಾ’ ಸಿನಿಮಾ ಬ್ಯಾಂಕ್​​ಗೆ ಸಂಬಂಧಿಸಿದ ಕಥೆ ಹೊಂದಿದೆ. ಇದರಲ್ಲಿ ಧನಂಜಯ್ ಅವರು ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಇವರ ಪಾತ್ರ ಗಮನ ಸೆಳೆಯುತ್ತಿದೆ. ಟ್ರೇಲರ್ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಚಿತ್ರದಲ್ಲಿ ಧನಂಜಯ್ ಹಾಗೂ ಅಮೃತಾ ಒಟ್ಟಾಗಿ ಕಾಣಿಸಿಕೊಳ್ಳುತ್ತಾರಾ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡಿದೆ. ಇದಕ್ಕೆ ಸಿನಿಮಾದಲ್ಲೇ ಉತ್ತರ ಸಿಗಬೇಕಿದೆ.

ತೆರೆಮೇಲೆ ಧನಂಜಯ್ ಹಾಗೂ ಅಮೃತಾ ಅವರನ್ನು ಪ್ರೇಕ್ಷಕರು ಸಖತ್ ಇಷ್ಟಪಟ್ಟರು. ಇವರು ನಿಜ ಜೀವನದಲ್ಲೂ ಒಂದಾಗುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅದು ಸುಳ್ಳಾಗಿದೆ. ಧನಂಜಯ್ ಅವರು ಇತ್ತೀಚೆಗೆ ತಮ್ಮ ಮನದರಸಿಯ ಹೆಸರು ಹಾಗೂ ಫೋಟೋನ ರಿವೀಲ್ ಮಾಡಿದ್ದರು. ಧನಂಜಯ್ ಅವರು ಮದುವೆ ಆಗುತ್ತಿರುವ ಹುಡುಗಿಯ ಹೆಸರು ಧನ್ಯಾತಾ ಎಂದು. ಇವರು ವೃತ್ತಿಯಲ್ಲಿ ವೈದ್ಯೆ. ಫೆಬ್ರವರಿ 16ರಂದು ಇವರ ಮದುವೆ ನೆರವೇರಲಿದೆ.

Leave a Reply

Your email address will not be published. Required fields are marked *

Trending

Exit mobile version