ತಾಜಾ ಸುದ್ದಿ

170ಕ್ಕೂ ಹೆಚ್ಚು ಪ್ರಕರಣಗಳ ಪತ್ತೆಗೆ ಸಹಕರಿಸಿದ್ದ ಶ್ವಾನ ಸಿರಿ ಸಾವು

Published

on

ರಾಯಚೂರು,ನ12(Zoom Karnataka): ನಗರದ ಪೊಲೀಸ್ ಶ್ವಾನದಳದ ಕ್ರೈಂ ಡಾಗ್ ಸಿರಿ (ಡಾಬರ್ಮಾನ್) ಮೃತಪಟ್ಟಿದ್ದು, ನಗರದ ಪೊಲೀಸ್ ಪರೇಡ್ ಮೈದಾನದ ಪಕ್ಕದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಪುಟ್ಟಮಾದಯ್ಯ ನೇತೃತ್ವದಲ್ಲಿ ಪೊಲೀಸ್ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

2016ರಲ್ಲಿ ಜನಿಸಿದ್ದ ಈ ಶ್ವಾನ 2017ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿತ್ತು. ಬೆಂಗಳೂರಿನ ಆಡುಗೋಡಿಯ ಸಿಎಆರ್ ಸೌತ್‌ನಲ್ಲಿ ಹ್ಯಾಂಡ್ಲರಾಗಿ ಜಯಕುಮಾರ್ ಮತ್ತು ಶರಣಬಸವ ತರಬೇತಿ ನೀಡಿದ್ದರು. ಜಿಲ್ಲೆಯಲ್ಲಿ ನಡೆದ ಹಲವು ಕಳ್ಳತನ ಪ್ರಕರಣಗಳು, ಕೊಲೆ, ದರೋಡೆ ಸೇರಿದಂತೆ 171 ಪ್ರಕರಣಗಳಲ್ಲಿ ಆರೋಪಿಗಳ ಪತ್ತೆಗೆ ಸಿರಿ ಸಹಕರಿಸಿತ್ತು. ಅದರಲ್ಲೂ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2022ರಲ್ಲಿ ಪೋಸ್ಟ್ ಆಫೀಸ್ ಕಳ್ಳತನ ಪ್ರಕರಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿತ್ತು.

ಕಳೆದ ಹಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿತ್ತು. ಎರಡು ದಿನಗಳಿಂದ ಊಟ ಮಾಡಿರಲಿಲ್ಲ. ಅಂತ್ಯಸಂಸ್ಕಾರದ ವೇಳೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಿವಕುಮಾರ್ ಮತ್ತು ಹರೀಶ್, ಡಿವೈಎಸ್ಪಿ(ಡಿಎಆರ್) ಪ್ರಮಾನಂದ ಘೋಡ್ಕೆ ಸೇರಿದಂತೆ ಡಿಎಆರ್ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Trending

Exit mobile version