ರಾಜಕೀಯ

ಜೆಪಿಸಿಯಲ್ಲಿ ಬೊಮ್ಮಾಯಿ ಏನಾದರೂ ಸದಸ್ಯರಾಗಿದ್ದಾರಾ? ಸೋಮಣ್ಣ ಮೆಂಬರ್ ಆಗಿದ್ದಾರಾ? – ಡಿಸಿಎಂ ಡಿ.ಕೆ.ಶಿವಕುಮಾರ್​

Published

on

ಹುಬ್ಬಳ್ಳಿ ನ.07, Zoom Karnataka): ಸಂಸದೀಯ ಜಂಟಿ ಸಮಿತಿ ಒಂದು ನಾಟಕ ಕಂಪನಿ. ಜೆಪಿಸಿಗೆ ಒಂದು ನಿಯಮ ಇದೆ. ಸಮಿತಿ ಅಧ್ಯಕ್ಷರು ಭೇಟಿ ನೀಡುವ ಮೊದಲು ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ತಿಳಿಸಬೇಕು. ಅದರಲ್ಲಿರುವ ಸದಸ್ಯರೆಲ್ಲರೂ ಬರಬೇಕು. ಒಬ್ಬರು ಅಧ್ಯಕ್ಷರು ಮಾತ್ರ ಭೇಟಿ ನೀಡಿದ್ದಾರೆ. ಒಬ್ಬ ಸಂಸದನನ್ನು ಕರೆದುಕೊಂಡು ಬಂದಿದ್ದಾರೆ. ಅವರ ಪಕ್ಷದ ಕೆಲಸಕ್ಕೆ ಬಂದಿದ್ದಾರೆ ಎನಿಸುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್​ ವ್ಯಂಗ್ಯವಾಡಿದರು.

“ಜೆಪಿಸಿಯಲ್ಲಿ ಬೊಮ್ಮಾಯಿ ಏನಾದರೂ ಸದಸ್ಯರಾಗಿದ್ದಾರಾ? ಸೋಮಣ್ಣ ಮೆಂಬರ್ ಆಗಿದ್ದಾರಾ? ಸೋಮಣ್ಣ ಒಬ್ಬರು ಮಂತ್ರಿ. ಒಬ್ಬ ಮಂತ್ರಿ ಜೆಪಿಸಿಯಲ್ಲಿ ಇರಲು ಆಗಲ್ಲ. ಅವರು ಬಂದು ಜನರ ಹತ್ತಿರ ಅರ್ಜಿ ಸ್ವೀಕರಿಸಿದ್ದಾರೆ. ಜನರೆದುರು ಪ್ರಚಾರ ಮಾಡ್ಬೇಕು ಅಂತ ಬಂದಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.

ಧಾರವಾಡದ ಜಿಲ್ಲಾಧಿಕಾರಿಗಳಿಗೆ ಕೇಳಿ ಬೊಮ್ಮಾಯಿ ಸರ್ಕಾರ ಇದ್ದಾಗಲೇ ನೋಟಿಸ್ ಕೊಟ್ಟು ದಾಖಲೆ ತಿದ್ದಲಾಗಿದೆ. ಮುಖ್ಯಮಂತ್ರಿ ಈಗಾಗಲೇ ಆ ಬಗೆಗಿನ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ. ನಮ್ಮ ಕಂದಾಯ ಸಚಿವರೂ ದಾಖಲೆಗಳನ್ನು ಬಿಡುಗಡೆ ಮಾಡುತ್ತಾರೆ. ಯಾವ ರೈತನ ಜಮೀನನ್ನೂ ಕಬಳಿಸಿಕೊಳ್ಳುವಂಥ ಪ್ರಶ್ನೆ ಬರೋದೇ ಇಲ್ಲ. ರೈತರನ್ನು ಉಳಿಸುತ್ತೇವೆ, ತಾಂತ್ರಿಕವಾಗಿ ಏನೋ ಕೆಲವು ಅಧಿಕಾರಿಗಳು ತಪ್ಪುಗಳನ್ನು ಮಾಡಿರಬಹುದು. ಎಲ್ಲ ರೈತರಿಗೆ ರಕ್ಷಣೆ ಕೊಡುವಂಥ ಕೆಲಸ ನಮ್ಮ ಸರ್ಕಾರ ಮಾಡುತ್ತದೆ” ಎಂದು ಭರವಸೆ ನೀಡಿದರು.

ಅನುದಾನ ಕೇಳಬೇಕಾದರೆ ಡಿಕೆಶಿ ತಗ್ಗಿ ಬಗ್ಗಿ ನಡೆಯಬೇಕು ಎಂದಿದ್ದಾರೆ ಎಂಬ ಆರ್​.ಅಶೋಕ್​ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿದ ಅವರು, “ನಾನು ಹೇಳಿದ್ದು ತೇಜಸ್ವಿ ಸೂರ್ಯಗೆ. ನಾನು ಎಂಎಲ್ಎ ಆದ್ಮೇಲೆ ಬೆಂಗಳೂರು ಅಧೋಗತಿ ಆಗಿದೆ ಅಂದ್ರು. ಏನು ಅಧೋಗತಿ ಆಗಿದೆ ಎಂದು ಲೆಕ್ಕ ಕೊಡಿ ಅಂತ ಹೇಳಿದೆ. ಲೋಕಾಯುಕ್ತ ಮ್ಯಾಚ್ ಫಿಕ್ಸಿಂಗ್ ಅಂತ ಅಶೋಕ್​ ಹೇಳ್ತಿದ್ದಾರೆ. ಸಂಸ್ಥೆ ಸಂವಿಧಾನದ ಒಂದು ಭಾಗ. ಇವರು ಸಂವಿಧಾನದಲ್ಲಿ ವಿರೋಧ ಪಕ್ಷದ ನಾಯಕ. ಹಾಗಾದರೆ ಇವರ ಮಾತುಗಳೆಲ್ಲ ಮ್ಯಾಚ್ ಫಿಕ್ಸಿಂಗಾ?” ಎಂದು ಪ್ರಶ್ನಿಸಿದರು.

ಬಿಜೆಪಿಯಿಂದ ಜೆಪಿಸಿ ದುರ್ಬಳಕೆ: “ಚುನಾವಣೆಗಾಗಿ ಇಡಿ, ಸಿಬಿಐ ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಬಿಜೆಪಿ ಇದೀಗ ಜೆಪಿಸಿಯನ್ನು ಸಹ ದುರ್ಬಳಕೆ ಮಾಡಿಕೊಳ್ಳುತ್ತಿದೆ” ಎಂದು ಸಚಿವ ಎಚ್.ಕೆ.ಪಾಟೀಲ್ ಆರೋಪಿಸಿದ್ದಾರೆ.

WhatsAppTelegramFacebookTwitterEmailMessageShare

Leave a Reply

Your email address will not be published. Required fields are marked *

Trending

Exit mobile version