ಕರಾವಳಿ

ಹೆಣ್ಣು ಮಕ್ಕಳಿಗೆ ರಕ್ಷಣೆ‌ ನೀಡಬೇಕು: ಅತ್ಯಾಚಾರಿಗಳಿಗೆ ಮರಣದಂಡನೆ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಮಂಗಳೂರು ಟು ದಿಲ್ಲಿ ಪ್ರಧಾನಿ ಕಚೇರಿಗೆ ಪಾದಯಾತ್ರೆ

Published

on

ಹೆಣ್ಣು ಮಕ್ಕಳಿಗೆ ರಕ್ಷಣೆ‌ ನೀಡಬೇಕು: ಅತ್ಯಾಚಾರಿಗಳಿಗೆ ಮರಣದಂಡನೆ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಮಂಗಳೂರು ಟು ದಿಲ್ಲಿ ಪ್ರಧಾನಿ ಕಚೇರಿಗೆ ಪಾದಯಾತ್ರೆ

ಮಂಗಳೂರು, ನ.06, Zoom Karnataka):ಪ್ರವೀಣ್ ಮಂಗಳೂರು, ಮೂಸಾ ಶರೀಫ್ ರವರ ನಾಯಕತ್ವದಲ್ಲಿ ಭೇಟಿ ಬಚಾವೋ ಎಂಬ ಧ್ಯೇಯವಾಕ್ಯದಡಿಯಲ್ಲಿ “ದಕ್ಷಿಣದಿಂದ ಉತ್ತರಕ್ಕೆ” – (ಮಂಗಳೂರಿನಿಂದ ದೆಹಲಿ) ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.

ಇಡೀ ವಿಶ್ವಕ್ಕೆ ಸಂಸ್ಕೃತಿ ಮತ್ತು ಸಂಸ್ಕಾರಗಳ ಪಾಠ ಹೇಳಿಕೊಟ್ಟ ನಮ್ಮ ಭವ್ಯ ಭಾರತದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ. ಒಂದು ಹೆಣ್ಣು ಓದಿನ ವಿಚಾರವಾಗಿಯೋ, ಅಥವಾ ಕೆಲಸದ ವಿಚಾರವಾಗಿಯೋ ಅಥವಾ ಒಂದು ವ್ಯಾಪಾರದ ವಿಚಾರವಾಗಿಯೋ ಅಥವಾ ಇನ್ನ್ಯಾವುದೋ ವಿಚಾರವಾಗಿಯೋ ಮನೆಯಿಂದ ಹೊರಗಡೆ ಹೋದರೆ ಆಕೆ ಕ್ಷೇಮವಾಗಿ ಮತ್ತೆ ಮನೆಗೆ ಬರುತ್ತಾಳೆ ಎಂಬ ನಂಬಿಕೆ ಹಾಗೂ ಭರವಸೆ ಆ ಕುಟುಂಬಗಳಿಗೆ ಇಲ್ಲ. ಯಾಕೆ ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿದವನಿಗೆ ಯಾಕೆ ನಮ್ಮ ದೇಶದ ಕಾನೂನು ಸುವ್ಯವಸ್ಥೆಯಲ್ಲಿ ಕಠಿಣವಾದ ಶಿಕ್ಷೆ ಇಲ್ಲ. ದೇಶದಲ್ಲಿ ಸಮಾನತೆ ಇಲ್ವ. ಈ ನಮ್ಮ ಭಾರತ ದೇಶದಲ್ಲಿ ಒಬ್ಬ ಪುರುಷ ಎಷ್ಟು ಸ್ವತಂತ್ರವಾಗಿ ಜೀವನ ಮಾಡುತ್ತಾನೋ ಹಾಗೆಯೇ ಮಹಿಳೆಯೂ ಕೂಡ ಘನತೆ ಮತ್ತು ಗೌರವದಿಂದ ಹಾಗೂ ಪ್ರತಿಷ್ಠೆಯಿಂದ ಸಮಾಜದಲ್ಲಿ ಬದುಕುವಂತ ವ್ಯವಸ್ಥೆಯನ್ನು ನಿರ್ಮಾಣ ಮಾಡಿ ಕೊಡುವುದು ಸರ್ಕಾರದ ಜವಾಬ್ದಾರಿಯಲ್ಲವೇ. ಹೆಸರಿಗಷ್ಟೇ ಈ ಭೇಟಿ ಬಚಾವೋ ಎಂಬ ಯೋಜನೆ ಈ ಯೋಜನೆ ದೇಶದ ಯಾವುದೇ ಹೆಣ್ಣು ಮಕ್ಕಳಿಗೆ ನೆರವಾಗುತ್ತಿಲ್ಲ. ವಿದೇಶಗಳಲ್ಲಿ ಹೆಣ್ಣು ಮಕ್ಕಳಿಗೆ ಇರುವಂತಹ ರಕ್ಷಣೆ ನಮ್ಮ ದೇಶದಲ್ಲಿ ಯಾಕೆ ಇಲ್ಲ? ಪ್ರತಿವರ್ಷ 35 ಸಾವಿರಕ್ಕೂ ಅಧಿಕ ಹೆಣ್ಣುಮಕ್ಕಳು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ ಇದೇ ರೀತಿ ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಅತ್ಯಾಚಾರಗಳು ಮುಂದುವರೆದರೆ ಕೊನೆಗೆ ನಾವು ಹೆಣ್ಣು ಮಕ್ಕಳನ್ನು ಮ್ಯೂಸಿಯಂನಲ್ಲಿ ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಈ ಹಿನ್ನೆಲೆಯಲ್ಲಿ ನಮ್ಮ ದೇಶದ ಪ್ರಧಾನ ಮಂತ್ರಿಗಳನ್ನು ದೆಹಲಿಯಲ್ಲಿ ಅವರನ್ನು ಕಚೇರಿಯಲ್ಲಿ ಭೇಟಿಯಾಗಿ ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳ ರಕ್ಷಣೆಗಾಗಿ ಈ “ಬೇಟಿ ಬಚಾವೋ” ಎಂಬ ಯೋಜನೆಯನ್ನು ಹೆಚ್ಚು ಬಲಿಷ್ಠ ಗೊಳಿಸಿ ದೇಶದ ಯಾವುದೇ ಒಂದು ಹೆಣ್ಣು ಅತ್ಯಾಚಾರಕ್ಕೆ ಒಳಗಾಗದೆ ಸಮಾಜದಲ್ಲಿ ಘನತೆ, ಗೌರವ ಮತ್ತು ಪ್ರತಿಷ್ಠೆಯಿಂದ ಬದುಕುವಂತೆ ಹಾಗೂ ಹೆಣ್ಣನ್ನು ಹೆತ್ತ ತಂದೆ ತಾಯಿಯು ಕೂಡ ನೆಮ್ಮದಿಯಿಂದ ಹಾಗೂ ಇಡೀ ದೇಶವೇ ಒಂದು ಹೆಣ್ಣನ್ನು ಗೌರವದಿಂದ ಕಾಣುವಂತೇ ಈ ಯೋಜನೆಯನ್ನು ರೂಪಿಸಬೇಕೆಂದು ದೇಶಕ್ಕೆ ತಾಯಿ ಸ್ಥಾನದಲ್ಲಿರುವಂತಹ ಪ್ರಧಾನಮಂತ್ರಿಗಳನ್ನು ಮನವಿ ಮಾಡಿಕೊಳ್ಳುತ್ತೇವೆ.

ಪ್ರವೀಣ್ ಮಂಗಳೂರು, ಮೂಸ ಷರೀಫ್ ನಾಯಕತ್ವದಲ್ಲಿ ನೌಫಲ್ ಅಬ್ಬಾಸ್,ಆರಿಫ್, ಶುಕೂರ್, ಬಾಲಕೃಷ್ಣ, ಹಂಝ ಈ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version