ಕರಾವಳಿ

ಮಂಗಳೂರು ಹೋಬಳಿ ಮಟ್ಟದ ಕಬ್ಬಡ್ಡಿ ಪಂದ್ಯಾಟ

Published

on

ಮಂಗಳೂರು ZoomKarnataka, Aug 30 : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ಉತ್ತರ ವಲಯ ಹಾಗೂ ದ. ಕ. ಜಿ. ಪಂ. ಹಿ. ಪ್ರಾ. ಶಾಲೆ ಕಾವೂರು ಇವುಗಳ ಸಂಯುಕ್ತ ಆಶ್ರಯದಲ್ಲಿ 2024-2025 ನೇ ಸಾಲಿನ ಮಂಗಳೂರು ಹೋಬಳಿ ಮಟ್ಟದ ಕಬ್ಬಡ್ಡಿ ಪಂದ್ಯಾಟ ದಿನಾಂಕ 28ರಂದು ಶಾಲಾ ಮೈದಾನದಲ್ಲಿ ನಡೆಯಿತು.
ಸ್ಥಳೀಯ ಕಾರ್ಪೋರೇಟರ್ ಸುಮಂಗಲಾ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜೇಮ್ಸ್ ಕುಟಿನೋ, ದೈಹಿಕ ಶಿಕ್ಷಣಾಧಿಕಾರಿಗಳಾದ ಭರತ್, ಕರ್ನಾಟಕ ರಾಜ್ಯ ಸರಕಾರದ ಆಹಾರ ಆಯೋಗದ ಸದಸ್ಯ ಸುಮಂತ್ ರಾವ್, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿ ನಿತೇಶ್ ಕೊಂಡೆ, ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ವಾಣಿ, CRP ದೀಪಿಕಾ, ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಅಧ್ಯಕ್ಷರಾದ ಚೆಲುವಮ್ಮ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಲಕ್ಷ್ಮಣ ಛಲವಾದಿ, ಶಾಲಾ ಹಳೆ ವಿದ್ಯಾರ್ಥಿ ಹಸನಬ್ಬ, ಪ್ರವೀಣ್ ಲೋಬೊ, ನಿವೃತ್ತ ಮುಖ್ಯ ಶಿಕ್ಷಕಿ ಚಂದ್ರಾವತಿ, ಮುಖ್ಯ ಶಿಕ್ಷಕಿ ಸೀತಮ್ಮ. ಜೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಈ ಕಬಡ್ಡಿ ಪಂದ್ಯಾಟದಲ್ಲಿ 28 ಶಾಲೆಗಳು ಭಾಗವಹಿಸಿದ್ದವು. ಬಾಲಕರ ವಿಭಾಗ- MGC ಬೋಂದೆಲ್( ಪ್ರಥಮ.)
ವಿದ್ಯಾಜ್ಯೋತಿ ಕಾವೂರು( ದ್ವಿತೀಯ)
ಬಾಲಕಿಯರ ವಿಭಾಗ – B.E. M ಕಾರ್ ಸ್ಟ್ರೀಟ್ (ಪ್ರಥಮ ) ವಿದ್ಯಾ ಆಂಗ್ಲ ಮಾಧ್ಯಮ ಹಿ. ಪ್ರಾಥಮಿಕ ಶಾಲೆ ಕೊಂಚಾಡಿ (ದ್ವಿತೀಯ ) ಶಾಲಾ ಮುಖ್ಯ ಶಿಕ್ಷಕಿ ಸೀತಮ್ಮ. ಜೆ ಸ್ವಾಗತಿಸಿದರು. ಸುನೀತಾ ಪ್ಲಾವಿಯಾ ಡಿಕೋಸ್ತಾ ನಿರೂಪಿಸಿದರು. ಕೋಕಿಲವಾಣಿ ವಂದಿಸಿದರು. ಶಿಕ್ಷಕಿ ಆಶಾ ಮತ್ತು ದೈಹಿಕ ಶಿಕ್ಷಕಿ ವಿಜಯಲಕ್ಷ್ಮಿ ಹಾಗೂ SDMC ಸದಸ್ಯರು ಸಹಕರಿಸಿದರು.

Leave a Reply

Your email address will not be published. Required fields are marked *

Trending

Exit mobile version