ಕರಾವಳಿ

ಕೆನರಾ ನಂದಗೋಕುಲ್ ಕೊಡಿಯಾಲ್ ಬೈಲ್, ಪದವಿಂನಗಡಿ ಹಾಗೂ ಕೆನರಾ ಇಂಟರ್ನ್ಯಾಷನಲ್ ಶಾಲೆ ಆಶ್ರಯದಲ್ಲಿ ಅಷ್ಟಮಿ ಕಾರ್ಯಕ್ರಮ

Published

on

ಕೆನರಾ ನಂದಗೋಕುಲ್ ಕೊಡಿಯಾಲ್ ಬೈಲ್, ಪದವಿಂನಗಡಿ ಹಾಗೂ ಕೆನರಾ ಇಂಟರ್ನ್ಯಾಷನಲ್ ಶಾಲೆ ಆಶ್ರಯದಲ್ಲಿ ಅಷ್ಟಮಿ ಕಾರ್ಯಕ್ರಮ

ಮಂಗಳೂರು,(ZoomKarnataka) Aug 24 – ಕೆನರಾ ನಂದಗೋಕುಲ್ ಕೊಡಿಯಾಲ್ ಬೈಲ್ ಮತ್ತು ಪದವಿಂನಗಡಿ ಶಾಖೆ ಹಾಗೂ ಕೆನರಾ ಇಂಟರ್ನ್ಯಾಷನಲ್ ಶಾಲೆಯ ಆಶ್ರಯದಲ್ಲಿ ಶ್ರೀ ಸುಧೀಂದ್ರ ಸಭಾಂಗಣದಲ್ಲಿ ಅಷ್ಟಮಿ ಉತ್ಸವದ ಶುಭಕಾಮನೆಯೊಂದಿಗೆ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯು ಮನಮುಟ್ಟಿದ ಭಜನೆಯೊಂದಿಗೆ ಪ್ರಾರಂಭಗೊಂಡು, ಮಕ್ಕಳು ಮುದ್ದು ಕೃಷ್ಣ ಮತ್ತು ರಾಧೆಯ ವೇಷದಲ್ಲಿ ಕಣ್ಮನಸಿಗೆ ಹತ್ತಿದ ನೃತ್ಯ ಪ್ರದರ್ಶಿಸಿದರು. ಇದಕ್ಕೆ ಹೆಚ್ಚಾಗಿ ಮಕ್ಕಳಿಂದ ಕೃಷ್ಣನ ಹಾಡುಗಳ ಮೇಲೆ ನೃತ್ಯ ಪ್ರದರ್ಶನ ನಡೆಯಿತು. ನಂತರ, ಕೃಷ್ಣ ಕಥೆಯ ಕುರಿತು ಹನಿಗವನದ ಮೂಲಕ ಮಕ್ಕಳಿಂದ ಸುಂದರವಾದ ಪರಿಚಯವಾಯಿತು. ಕಾರ್ಯಕ್ರಮವು ಆರತಿ ಮತ್ತು ಪ್ರಸಾದ ವಿತರಣೆಯೊಂದಿಗೆ ಸಾಂಪ್ರದಾಯಿಕವಾಗಿ ಮುಕ್ತಾಯವಾಯಿತು.

ಕಾರ್ಯಕ್ರಮದ ವಿಶೇಷ ಆಕರ್ಷಣೆಗಾಗಿ ಮಕ್ಕಳನ್ನು ಪ್ರೇರೇಪಿಸಲು, ಪುಟಾಣಿ ಕೃಷ್ಣ ಹಾಗೂ ರಾಧೆಯೊಂದಿಗೆ ಮಕ್ಕಳಿಗೆ ಪುಟ್ಟ ಕರುಗಳನ್ನು ತಂದು ಅವರ ಮನಸ್ಸನ್ನು ಆನಂದಿಸಿದವು. ಈ ದೃಶ್ಯವು ತಾಯಂದಿರು, ಪೋಷಕರು ಹಾಗೂ ಸಭಿಕರನ್ನು ಆಕರ್ಷಿಸಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆನರಾ ಹೈಸ್ಕೂಲ್ ಸಂಸ್ಥೆ ಅಧ್ಯಕ್ಷರಾದ ಶ್ರೀ ವಾಸುದೇವ ಕಾಮತ್, ಉಪಾಧ್ಯಕ್ಷ ಶ್ರೀ ಸುರೇಶ್ ಕಾಮತ್, ಕೆನರಾ ನಂದಗೋಕುಲ್ ಮತ್ತು ಕೆನರಾ ಇಂಟರ್ನ್ಯಾಷನಲ್ ಶಾಲೆ ಸಂಚಾಲಕರು ಶ್ರೀ ನರೇಶ ಶೆಣೈ, ಕೆನರಾ ಹೈಸ್ಕೂಲ್ ಸಂಸ್ಥೆ ಸದಸ್ಯರು ಕುಮಾರಿ ಅಶ್ವಿನಿ, ಶ್ರೀ ಪುರುಷೋತ್ತಮ ಶೆಣೈ, ಕೆನರಾ ನಂದಗೋಕುಲ್ ಮತ್ತು ಕೆನರಾ ಇಂಟರ್ನ್ಯಾಷನಲ್ ಶಾಲೆ ನಿರ್ದೇಶಕರಾದ ಶ್ರೀಮತಿ ಅಂಜನಾ ಕಾಮತ, ಕೆನರಾ ಹೈಸ್ಕೂಲ್ ಸಂಸ್ಥೆ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಮತಿ ಉಜ್ವಲ ಮಲ್ಲ್ಯ, ಕೆನರಾ ನಂದಗೋಕುಲ್ ಶಾಲೆಯ ಸಂಯೋಜಕಿ ಕುಮಾರಿ ವಂದನಾ, ಶ್ರೀಮತಿ ಪೂರ್ಣಿಮಾ ನಾಯಕ್ ಮತ್ತು ಶಾಲೆಯ ಶಿಕ್ಷಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶ್ರೀಮತಿ ಮರೋಳಿ ಸಬಿತಾ ಕಾಮತ ಸೇರಿದಂತೆ ವಿದ್ಯಾರ್ಥಿಗಳ ಪೋಷಕರು ಭಾರೀ ಸಂಖ್ಯೆಯಲ್ಲಿ ಪಾಲ್ಗೊಂಡರು.

Leave a Reply

Your email address will not be published. Required fields are marked *

Trending

Exit mobile version