ಶ್ರೀ ವೀರಾಂಜನೇಯ ಯುವಕ ಸಂಘ (ರಿ.) ಉಳ್ಳಾಲ ತಾಲೂಕು, ದ. ಕ. ಸಜೀಪನಡು
34ನೇ ವರ್ಷದ ಸಜೀಪ ಮೊಸರು ಕುಡಿಕೆ ಉತ್ಸವ.
ಉಳ್ಳಾಲ, (ZoomKarnataka) Aug, 24 : ಶ್ರೀ ವೀರಾಂಜನೇಯ ಯುವಕ ಸಂಘ (ರಿ.) ಸಜೀಪನಡು ಇದರ ವತಿಯಿಂದ ನಡೆಯುವ 34ನೇ ವರ್ಷದ ಸಜೀಪ ಮೊಸರು ಕುಡಿಕೆ ಉತ್ಸವವು ಇದೇ 27-08-2024 (ಮಂಗಳವಾರ) ರಂದು ನಡೆಯಲಿದೆ.
ದಿನಾಂಕ 26-08-2024ನೇ ಸೋಮವಾರ
ರಾತ್ರಿ ಗಂಟೆ 8.00ರಿಂದ ಶ್ರೀ ಶಕ್ತಿ ಮಹಾಗಣಪತಿ ಷಣ್ಮುಖಸುಬ್ರಹ್ಮಣ್ಯ ಭಜನಾ ಮಂಡಳಿ ಮತ್ತು ಶ್ರೀ ಶಕ್ತಿ ಮಹಾಗಣಪತಿ ಷಣ್ಮುಖ ಸುಬ್ರಹ್ಮಣ್ಯ ಮಹಿಳಾ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ.
ಶೋಭಾಯಾತ್ರೆ ಮೆರವಣಿಗೆ
27-08-2024 (ಮಂಗಳವಾರ)ರಂದು ಮಧ್ಯಾಹ್ನ 1:30ಕ್ಕೆ ಶ್ರೀ ಕೃಷ್ಣ ದೇವರ ಭವ್ಯ ಶೋಭಾಯಾತ್ರೆ ನಡೆಯುತ್ತದೆ. ಈ ಶೋಭಾಯಾತ್ರೆಯು ಗೊಂಬೆ ಕುಣಿತ, ವಾದ್ಯ ಸಂಗೀತ ಮತ್ತು ವಿಶೇಷ ಆಕರ್ಷಣೆಯ ಟ್ಯಾಬ್ಲೊಗಳೊಂದಿಗೆ ಸಜೀಪನಡು ಶ್ರೀ ಷಣ್ಮುಖಸುಬ್ರಹ್ಮಣ್ಯ ದೇವಸ್ಥಾನದಿಂದ ಹೊರಟು ಮಿತ್ತಪಡ್ಡು ಬಸ್ ನಿಲ್ದಾಣದವರೆಗೆ ಹೋಗುವುದು. ಅಲ್ಲಿಂದ ಹಿಂತಿರುಗಿ ಕೊಳಕೆ ಬಸ್ ನಿಲ್ದಾಣದವರೆಗೆ ಹೋಗಿ, ಬಳಿಕ ಸಜೀಪನಡು ಶ್ರೀ ಷಣ್ಮುಖಸುಬ್ರಹ್ಮಣ್ಯ ದೇವಸ್ಥಾನಕ್ಕೆ ತಲುಪುತ್ತದೆ.
ಧಾರ್ಮಿಕ ಸಭೆಕಾರ್ಯಕ್ರಮ
ಸಂಜೆ 5:45ಕ್ಕೆ ಅಡಿಕೆ ಮರ ಏರುವ ಕಾರ್ಯಕ್ರಮ ಇರುತ್ತದೆ. ನಂತರ, 7:00 ಗಂಟೆಗೆ ಮಡಕೆ ಒಡೆಯುವುದು ನಡೆಯುತ್ತದೆ. ರಾತ್ರಿ 8:00 ಗಂಟೆಗೆ ದ. ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀಮತಿ ಗುರುಪ್ರಿಯಾ ಕಾಮತ್ ಮೆಲ್ಕಾರ್ ಅವರ ನಿರ್ದೇಶನದಲ್ಲಿ ಪ್ರಖ್ಯಾತ GIRLS ಪುರುಷರಕಟ್ಟೆ, ಪುತ್ತೂರಿನ ಗಾನ ನೃತ್ಯ ವೈಭವ ನಡೆಯಲಿದೆ.