ಕರಾವಳಿ

ಎಸ್ ಡಿ ಪಿ ಐ ಯಾರ ಬಿ ಟೀಂ ಎಂದು ರುಜುವಾತು ಆಗಿದೆ – ಡಾ ಭರತ್ ಶೆಟ್ಟಿ ವೈ

Published

on

ಎಸ್ ಡಿ ಪಿ ಐ ಯಾರ ಬಿ ಟೀಂ ಎಂದು ರುಜುವಾತು ಆಗಿದೆ ಡಾ.ಭರತ್ ಶೆಟ್ಟಿ ವೈ

ಬಂಟ್ವಾಳ ಸ್ಥಳೀಯ ಚುನಾವಣೆಯಲ್ಲಿ ಎಸ್‌ಡಿಪಿಐ ಕಾಲು ಹಿಡಿದು ಅಧಿಕಾರ ಹಿಡಿಯುವ ದುಸ್ಥಿತಿಗೆ ಬಂದಿದೆ

ಆಧಿಕಾರಕ್ಕೇರಲು ತಾನು ಯಾವುದೇ ಕೀಳು ಮಟ್ಟಕ್ಕೂ ಇಳಿಯಲು ಸಿದ್ದ ಎಂಬುದನ್ನು ಕಾಂಗ್ರೆಸ್ ತೋರಿಸಿದೆ.

ಮಂಗಳೂರು, (ZoomKarnataka) Aug 23 ಕಾವೂರು: ಎಸ್ ಡಿ ಪಿ ಐ ಪಕ್ಷವನ್ನು ಬಿಜೆಪಿಯ ಬಿ ಟೀಂ ಎಂದು ಕರೆದ ಕಾಂಗ್ರೆಸ್ ಇಂದು ಬಂಟ್ವಾಳ ಸ್ಥಳೀಯ ಚುನಾವಣೆಯಲ್ಲಿ ಎಸ್‌ಡಿಪಿಐ ಕಾಲು ಹಿಡಿದು ಅಧಿಕಾರ ಹಿಡಿಯುವ ದುಸ್ಥಿತಿಗೆ ಬಂದಿದೆ.ಈ ಮೂಲಕ ಎಸ್ ಡಿ ಪಿ ಐ
ಹಿಂದಿನಿಂದಲೂ ತನ್ನದೇ ಬಿ ಟೀಂ ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಂಡಿದೆ ಎಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ ಟೀಕಿಸಿದ್ದಾರೆ.

ಆಧಿಕಾರಕ್ಕೇರಲು ತಾನು ಯಾವುದೇ ಕೀಳು ಮಟ್ಟಕ್ಕೂ ಇಳಿಯಲು ಸಿದ್ದ ಎಂಬುದನ್ನು ಕಾಂಗ್ರೆಸ್ ತೋರಿಸಿದೆ.
ಅಧಿಕಾರವಿಲ್ಲದಿದ್ದರೆ ನೀರಿನಿಂದ ಹೊರ ತೆಗೆದ ಮೀನಿನಂತೆ ಕಾಂಗ್ರೆಸ್ ಚಡಪಡಿಸಲು ಆರಂಭಿಸುತ್ತದೆ.ಹೀಗಾಗಿ ಎಸ್ ಡಿಪಿಐನಂತಹ ಕೋಮುವಾದಿ ಪಕ್ಷದ ಜತೆ ಮೈತ್ರಿ ಮಾಡಿಕೊಂಡು ತನ್ನ ನಿಜ ಬಣ್ಣ ಬಯಲು ಮಾಡಿದೆ.ಅದೃಷ್ಟದಿಂದ ರಾಜ್ಯದಲ್ಲಿ ಅಧಿಕಾರ ಹಿಡಿದ ಕಾಂಗ್ರೆಸ್ ಪಕ್ಷವನ್ನು ಜನ ಮತ್ತೆ ವಿರೋಧ ಪಕ್ಷದಲ್ಲಿ ಕೂರಿಸುವ ದಿನಗಳು ದೂರವಿಲ್ಲ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version