ತಾಜಾ ಸುದ್ದಿ

ಅಂಬಾನಿ ಮದುವೆಯಲ್ಲಿ ಮೋಡಿ ಮಾಡಿದ ಮಂಗಳೂರಿನ ಕೊಳಲು ವಾದಕ ರೂಬನ್ ಮಚಾಡೊ

Published

on

ಮಂಗಳೂರು, ಜು. 18(Zoom Karnataka): ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಸಮಾರಂಭದಲ್ಲಿ ಕೊಳಲು ವಾದಕರಾಗಿ  ಭಾಗವಹಿಸಿ ಮೋಡಿ ಮಾಡಿದ  ಮಂಗಳೂರಿನ ದೇರೆಬೈಲ್ ನಿವಾಸಿ ರೂಬನ್ ಮಚಾಡೊ.

ವಿಶೇಷ ಅಂದ್ರೆ ರೂಬನ್ ಅಂಬಾನಿ ಮದುವೆ ಸಮಾರಂಭಕ್ಕೆ ಆಹ್ವಾನ ಪಡೆದ ಕರ್ನಾಟಕದ ಏಕೈಕ ಕೊಳಲು ವಾದಕರಾಗಿದ್ದರು. ಖ್ಯಾತ ಫ್ಲೂಟಿಸ್ಟ್ ಅಶ್ವಿನ್ ಶ್ರೀನಿವಾಸನ್ ನೇತೃತ್ವದ 25 ಭಾರತೀಯ ಕೊಳಲು ವಾದಕರ ತಂಡದಲ್ಲಿ ರೂಬೆನ್ ಮಚಾಡೊ ಅವಕಾಶ ಪಡೆದರು.ರೂಬೆನ್‌ ಕಳೆದ 10 ವರ್ಷಗಳಿಂದ ಕೊಳಲು ಮತ್ತು ವಿವಿಧ ಪ್ರಕಾರಗಳಲ್ಲಿ ಮತ್ತು ತರಗತಿಗಳನ್ನು ನಡೆಸುತ್ತಿದ್ದಾರೆ. ಅಶ್ವಿನ್ ಶ್ರೀನಿವಾಸನ್ ಅವರನ್ನು ಭೇಟಿ ಮಾಡಿ ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಅವರು ನನಗೆ ಭಾಗವಹಿಸಲು ಅವಕಾಶ ನೀಡಿದರು.

ಅಂಬಾನಿ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮುಂಚಿತವಾಗಿ ಮುಂಬೈನಲ್ಲಿ ಒಂದು ವಾರ ನಿರಂತರ ಅಭ್ಯಾಸದ ಮಾಡಿ ಜುಲೈ 13 ರ ಸಂಜೆ ಅಂಬಾನಿ ಮಗನ ಆರತಕ್ಷತೆಯಲ್ಲಿ ಪ್ರದರ್ಶನ ಕೊಟ್ಟಿದ್ದಾರೆ. ಇಂತಹ ಪ್ರತಿಷ್ಠಿತ ಕಾರ್ಯಕ್ರಮದ ಭಾಗವಹಿಸುವ ಮೂಲಕ ರೂಬೆನ್ ಮಹತ್ವದ ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version