ಕರಾವಳಿ

ಆಲ್ಕೋಹಾಲ್ ಬೆಲೆ ಏರಿಸಿರುವ ಕಾಂಗ್ರೆಸ್ ಸರ್ಕಾರವು ರಾಜ್ಯದ ಜನರನ್ನು ನರಕದ ಕೂಪಕ್ಕೆ ಇಳಿಸುತ್ತಿದೆ – ಶಾಸಕ ಡಾ. ಭರತ್ ಶೆಟ್ಟಿ

Published

on

⭕ಬೆಲೆ ಏರಿಕೆ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ
⭕ಶಾಸಕರ ಸಹಿತ ಬಿಜೆಪಿಗರ ಬಂಧಿಸಿದ ಪೊಲೀಸ್ ಬೆಲೆ ಏರಿಕೆ ವಿರುದ್ಧ ಗುಡುಗಿದ ಶಾಸಕ ಡಾ. ಭರತ್ ಶೆಟ್ಟಿ
⭕ ಸಿದ್ದರಾಮಯ್ಯರದ್ದು ಸ್ಕ್ಯಾಮ್ ಸರ್ಕಾರ : ಡಾ. ಭರತ್ ಶೆಟ್ಟಿ ಲೇವಡಿ

Jul 08 (Zoomkarnataka) ಗುರುಪುರ : ಸಿದ್ದರಾಮಯ್ಯನವರದ್ದು ಸ್ಕ್ಯಾಮ್‌ಗಳ(ಹಗರಣ) ಸರ್ಕಾರ. ಭ್ರಚ್ಟಾಚಾರ ಅತಿರೇಕಕ್ಕೇರಿದೆ. ಮೂಡಾ, ವಾಲ್ಮೀಕಿ ನಿಗಮದಲ್ಲೂ ಭ್ರಷ್ಟಾಚಾರ. ಈ ಸರ್ಕಾರ ನಡೆಸುತ್ತಿರುವ ಭ್ರಷ್ಟಾಚಾರ ಹೇಳುತ್ತ ಹೋದರೆ ದಿನಕ್ಕೊಂದು ಪ್ರತಿಭಟನೆ ನಡೆಸಬಹುದು. ಹಾಲು, ಪೆಟ್ರೋಲ್, ಡೀಸೆಲ್, ಮುದ್ರಾಂಕ ದರ, ಆಲ್ಕೋಹಾಲ್ ಬೆಲೆ ಏರಿಸಿರುವ ಕಾಂಗ್ರೆಸ್ ಸರ್ಕಾರವು ರಾಜ್ಯದ ಜನರನ್ನು ನರಕದ ಕೂಪಕ್ಕೆ ಇಳಿಸುತ್ತಿದೆ ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಗುಡುಗಿದರು.

ಗುರುಪುರ ಕೈಕಂಬ ಜಂಕ್ಷನ್‌ನಲ್ಲಿ ಜು. 5ರಂದು ಮಂಗಳೂರು ನಗರ ಉತ್ತರ ಮಂಡಲ ಬಿಜೆಪಿ ಮಹಿಳಾ ಮೋರ್ಚಾವು ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ಆಯೋಜಿಸಿದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿ, ರೈತ ವಿರೋಧಿಯಾಗಿರುವ ಸಿದ್ದರಾಮಯ್ಯ ಸರ್ಕಾರ ರಸಗೊಬ್ಬರ ಮತ್ತು ಕೃಷಿ ಬೀಜದ ಬೆಲೆ ಏರಿಸಿದೆ. ಗ್ಯಾರಂಟಿಗಾಗಿ ಕಾಂಗ್ರೆಸ್ ಭ್ರಷ್ಟಾಚಾರದ ಮಾರ್ಗ ಹಿಡಿದಿದೆ. ಬೆಲೆ ಏರಿಕೆ ವಿರುದ್ಧ ಬಿಜೆಪಿ ಹೋರಾಟ ತೀವ್ರಗೊಳಿಸಲಿದೆ ಎಂದರು.

ಮoಗಳೂರು ನಗರ ಉತ್ತರ ಮಂಡಲ ಬಿಜೆಪಿ ಅಧ್ಯಕ್ಷ ರಾಜೇಶ್ ಕೊಟ್ಟಾರಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಮೂಲಕ ಜನರ ರಕ್ತ ಕುಡಿಯುತ್ತಿದೆ. ಅಧಿಕಾರ ತ್ಯಜಿಸುವುಕ್ಕಿಂತ ಮುಂಚೆ ಸಾಕಷ್ಟು ಸೈಟು ಮಾಡುವ ಗುರಿ ಇಟ್ಟುಕೊಂಡಿರುವ ಸಿದ್ದರಾಮಯ್ಯ ಮತ್ತು ಅವರ ಸರ್ಕಾರಕ್ಕೆ ಶೀಘ್ರ ಜನರು ಉತ್ತರ ಕೊಡಲಿದ್ದಾರೆ ಎಂದರು.

ಬಿಜೆಪಿ ನಾಯಕಿ ಅಮೃತಲಾಲ್ ಡಿ’ಸೋಜ ಮಾತನಾಡಿ, ಹಾಲಿನ ದರ ಏರಿಸಿ ಮಹಿಳೆಯರ ಪಾಲಿಗೆ ವಿಲನ್ ಆಗಿರುವ ಕಾಂಗ್ರೆಸ್ ಸರ್ಕಾರವು ಅಭಿವೃದ್ಧಿ ವಿಷಯದಲ್ಲಿ ಮೌನವಾಗಿದೆ.
ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಮುಖಂಡರಾದ ಉಪಮೇಯರ್ ಸುನೀತಾ ಸಾಲಿಯಾನ್, ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ್ ಪಚ್ಚನಾಡಿ, ರಣದೀಪ್ ಕಾಂಚನ್, ಮಹಿಳಾ ಮೋರ್ಚಾ ಅಧ್ಯಕ್ಷೆ ರೇಖಾ, ಪ್ರಧಾನ ಕಾರ್ಯದರ್ಶಿಗಳಾದ ಪವಿತ್ರಾ,ಸ್ವಪ್ನಾ, ಉಪಾಧ್ಯಕ್ಷ ರಾದ ಆನಂದ ಪಾಂಗಳ,ಸೋಹನ್ ಅತಿಕಾರಿ,ಮಹಾಶಕ್ತಿ ಕೇಂದ್ರ ಪ್ರಮುಖರಾದ ಶೋಧನ್ ಆದ್ಯಪಾಡಿ, ತಮ್ಮಯ್ಯ ಪೂಜಾರಿ, ವಿವಿಧ ಪಂಚಾಯತ್‌ಗಳ ಬಿಜೆಪಿ ಬೆಂಬಲಿದ ಅಧ್ಯಕ್ಷರು ಮತ್ತು ಸದಸ್ಯರು, ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

Leave a Reply

Your email address will not be published. Required fields are marked *

Trending

Exit mobile version