ತಾಜಾ ಸುದ್ದಿ

ಭಕ್ತರಿಗೆ ದರ್ಶನ ನೀಡಿದ ಶ್ರೀ ಅನಂತಪುರ ದೇವಸ್ಥಾನದ ಮೊಸಳೆ ಬಬಿಯಾ-3

Published

on

ಕಾಸರಗೋಡು, ಜೂ. 18(Zoom Karnataka): ಸರೋವರ ಕ್ಷೇತ್ರ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ತಿಂಗಳ ಹಿಂದೆ ಪ್ರಥಮ ಬಾರಿಗೆ ಕಾಣಿಸಿಕೊಂಡ ಬಬಿಯಾ-3 ಹೆಸರಿನ ಮೊಸಳೆ ಮರಿ ಜೂನ್ 14ರ ಸಂಜೆ ಇಲ್ಲಿನ ಎತ್ತರದ ಜಾಗದಲ್ಲಿ ಭಕ್ತರಿಗೆ ಮೊದಲ ಸಲ ಸಂಪೂರ್ಣ ದರ್ಶನ ನೀಡಿತು.

ದೇವಾಲಯದ ಕೊಳದಲ್ಲಿ ಸುಮಾರು 80 ವರ್ಷಗಳ ಕಾಲ ವಾಸಿಸುತ್ತಿದ್ದ ಮೂಲ ಬಬಿಯಾ ಮೊಸಳೆ 2022ರ ಅಕ್ಟೋಬರ್ 9 ರಂದು ಸಾವನ್ನಪ್ಪಿತು. ಬಬಿಯಾ ಸಾವನ್ನಪ್ಪಿದ ಒಂದು ವರ್ಷದ ನಂತರ, ದೇವಾಲಯದ ಕೊಳದಲ್ಲಿ ಈ ಮೊಸಳೆ ಮರಿ ಕಾಣಿಸಿಕೊಂಡಿದೆ. ಆದರೆ, ಇದುವರೆಗೆ ಯಾವುದೇ ಭಕ್ತರು ಈ ಮೊಸಳೆ ಮರಿಯ ಸಂಪೂರ್ಣ ದರ್ಶನ ಪಡೆದಿರಲಿಲ್ಲ.

ಶುಕ್ರವಾರ ಬಬಿಯಾ-3 ಹೆಸರಿನ ಮೊಸಳೆ ಮರಿ ದೇವಸ್ಥಾನದ ಗರ್ಭಗುಡಿಯ ಮುಂಭಾಗದ ಕಲ್ಲಿನ ಮೇಲೆ ವಿಶ್ರಮಿಸುತ್ತಿದ್ದ ದೃಶ್ಯ ಕಂಡು ಬಂದಿತ್ತು. ಈ ವೇಳೆ ದೇವಸ್ಥಾನ ಬಂದ್ ಆಗಿದ್ದು, ಸಂಜೆ ವೇಳೆಗೆ ಆಗಮಿಸಿದ ದೇವಸ್ಥಾನದ ಅರ್ಚಕರು ಫೋಟೋ ತೆಗೆದು ಸಾರ್ವಜನಿಕರೊಂದಿಗೆ ಹಂಚಿಕೊಂಡಿದ್ದಾರೆ.

ಈ ಮೊಸಳೆಯು ದೇವರಿಂದ ಕಳುಹಿಸಲ್ಪಟ್ಟಿದೆ ಎಂದು ಇಲ್ಲಿನ ಭಕ್ತರು ನಂಬುತ್ತಾರೆ. ಜೊತೆಗೆ ದೇವಸ್ಥಾನದ ಒಂದು ಮೊಸಳೆ ಸಾವನ್ನಪ್ಪಿದಾಗ ಮತ್ತೊಂದು ಮೊಸಳೆ ಆಗಮಿಸುತ್ತದೆ ಎನ್ನುವುದು ಇಲ್ಲಿನ ನಂಬಿಕೆಯಾಗಿದೆ.

WhatsAppTelegramFacebookTwitterEmailMessageShare

Leave a Reply

Your email address will not be published. Required fields are marked *

Trending

Exit mobile version