ತಾಜಾ ಸುದ್ದಿ

ಹೈವೇ ಪಕ್ಕದಲ್ಲಿ ಇರುವ ಎಸ್ ಆರ್ ಗ್ರಾಂಡ್ ಎಂಬ ಹೋಟೆಲ್ ನಲ್ಲಿ ಕಳಪೆ ಆಹಾರ ನೀಡಿ ಗ್ರಾಹಕರಿಗೆ ವಂಚನೆ

Published

on

Jun 01 (ZoomKarnataka) : ಬೆಂಗಳೂರಿನಿಂದ ಚಿತ್ರದುರ್ಗ, ದಾವಣಗೆರೆ ಹೊಸಪೇಟೆ, ಹುಬ್ಬಳ್ಳಿ ರಾಯಚೂರು, ಹೀಗೆ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಚಲಿಸುವ ಎಲ್ಲಾ ಕೆ ಎಸ್ ಆರ್ ಟಿ ಸಿ ಬಸ್ಸುಗಳು ಶಿರದಿಂದ ಮುಂದೆ ಹೈವೇ ಪಕ್ಕದಲ್ಲಿ ಇರುವ ಎಸ್ ಆರ್ ಗ್ರಾಂಡ್ ಎಂಬ ಹೋಟೆಲ್ ನಲ್ಲಿ ನಿಲ್ಲಿಸಿಯೇ ಹೋಗಬೇಕಾಂತೆ. ಸರಿ ಊಟಕ್ಕೆ ಮತ್ತು ಕಾಫಿ ತಿಂಡಿಯ ಸಲುವಾಗಿ ‌ನಿಲ್ಲುಸುತ್ತಾರೆ ಅದರಲ್ಲಿ ಏನು ವಿಷೇಶ ಎಂದು ನೀವು ಕೇಳಿದರೆ.


ಹೌದು ನೀವು ಹೇಳಿದ್ದು ಸರಿ ,‌ಆದರೆ ಇಲ್ಲಿನ ಹೋಟೆಲ್ ಅವ್ಯವಸ್ಥೆ ಹೇಳಲಾಗದು ಇಲ್ಲಿನ ಊಟ, ತಿಂಡಿ‌, ಕಾಫಿ ಎಲ್ಲಾವು ಮೂರರಷ್ಟು ಹೆಚ್ಚು ಬೆಲೆ.. ಸರಿ ಐವೇ ಅಲ್ವ ಅದಕ್ಕೆ ಅಂದು ಕೊಂಡು ಬೆಲೆ ಕೊಡುವ ಕೊಟ್ಟ ಬೆಲೆಗೆ ತಿನ್ನುವ ತಿನ್ನಿಸಿನ ಮೌಲ್ಯ ವಾಗಿದೆಯೇ ಅಂದರೆ ಇಲ್ಲ .. ಸರಿ ರುಚಿಯ ವಿಚಾರಕ್ಕೆ ಬಂದರೆ ಒಂದು ತುತ್ತು ತಿಂದವರ ಗಂಟಲಿಗೆ ಇನ್ನೊಂದು ತುತ್ತು ಇಳಿಯಲಾರದು.. ಇನ್ನೂ ಇಲ್ಲಿ ಹೋಟೆಲ್ ನ ಸ್ವಚ್ಚತೆ ಕಸದ ಬುಟ್ಟಿಗಳೆ ವಾಸಿ..

ಮಾಲಿಕರು ಅಲ್ಲಿ ಕೆಲಸ ಮಾಡುವವರೆಲ್ಲಾ ಒಂದೆ ಕೊಮಿನವರು ಯುವಕರು ಅದರಲ್ಲಿ ಏನು ಮಾಡಲಿ ಬೀಡಿ ಅಂದರೆ ಅವರ ಮಾತುಗಳಿಗೆ ಏನ್ ಹೇಳುವುದು, ಜನರಿಗೆ ತುಸು ಮರ್ಯಾದೆ ಕೊಡುವುದಿಲ್ಲ.. ಇಷ್ಟೆಲ್ಲಾ ಇದ್ದಾಗೆ ಡ್ರೈವರ್ ಗಳ ಪ್ರಶ್ನೆ ಮಾಡಿದರೆ, ಅವರು ಹೇಳುವುದು ನಿಮಗೆ ಅಲ್ಲ ಸಾರ್ ನಮಗೂ ಇಲ್ಲಿ ಬಂದು ತಿನ್ನಲು ಆಗದು ನಾವು ನಾಯಿಗಳಿಗೆ

ಧನಗಳಿಗೆ ಹಾಕುವ ಆಹಾರವೇ ತುಂಬಾ ಚೆನ್ನಾಗಿ ಇರುತ್ತದೆ ನಾವು ಇಲ್ಲಿಗೆ ಬಂದು ಹೋಗಿಲ್ಲ ಎಂದರೆ, ಡಿಪೋದಲ್ಲಿ ಮೆಮೂ ಕೊಡುತ್ತಾರೆ ಅಂದರು… ಗೂಗಲ್ ರೇಟಿಂಗ್ ತೆಗೆದು ನೋಡಿದರೆ ಈ ಹೋಟೆಲ್ ಬಗ್ಗೆ ಒಬ್ಬನು ಒಳ್ಳೆಯ ರೀವ್ಯು ಕೊಟ್ಟಿಲ್ಲ.. ಇದು ಯಾವ ರಾಜಕಾರಣಿಯ ಕಡೆಯವರದ್ದೆ ಆಗಿರುತ್ತದೆ.

Leave a Reply

Your email address will not be published. Required fields are marked *

Trending

Exit mobile version