ಉಡುಪಿ Jun 1 (ZoomKarnataka) :ಉಡುಪಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಮತ್ತು ಕರ್ನಾಟಕ ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಶ್ರೀ ರಘುಪತಿ ಭಟ್ ಅವರು ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಆಗಮಿಸಿ ಶ್ರೀದೇವಿಯಲ್ಲಿ ಪ್ರಾರ್ಥಿಸಿ ಜಿರ್ಣೋದ್ಧಾರಕ್ಕೆ 9 ಶಿಲಾಸೇವೆಯನ್ನು ನೀಡಿದ್ದಲ್ಲದೆ ಇನ್ನು ಹೆಚ್ಚಿನ ಶಿಲಾಸೇವೆಯನ್ನು ನೀಡಲಿದ್ದೇನೆ ಮುಂದಿನ ದಿನಗಳಲ್ಲಿ ಅಮ್ಮನ ಸೇವೆಯನ್ನು ಮಾಡಲು ಬದ್ಧನಾಗಿದ್ದೇನೆ ಎಂದು ಹೇಳಿದರು, ನಂತರ ಶಿಲಾಪುಷ್ಪ ಸಮರ್ಪಿಸಿ ಕಾಪುವಿನ ಅಮ್ಮನ ಮಕ್ಕಳು” ತಂಡಕ್ಕೆ ಸೇರ್ಪಡೆಯಾದರು.
ಅವರಿಗೂ ಅವರ ಕುಟುಂಬ ಸಂಸಾರಕ್ಕೂ ಶ್ರೀದೇವಿಯು ಸಂಪೂರ್ಣ ಅನುಗ್ರಹವನ್ನು ಕರುಣಿಸಲಿ. ಆಯುರಾರೋಗ್ಯ ಭಾಗ್ಯವನ್ನೂ, ಸಕಲ ಸಿರಿ ಸಂಪದವನ್ನು ಶ್ರೀ ಮಾರಿಯಮ್ಮ ದಯಪಾಲಿಸಲಿ ಎಂದು ದೇವಿಯ ಪದತಲದಲ್ಲಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪ್ರಾರ್ಥನೆ.
ಈ ಸಂದರ್ಭದಲ್ಲಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಕೆ. ವಾಸುದೇವ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀ ರಮೇಶ್ ಹೆಗ್ಡೆ ಕಲ್ಯಾ ಉಪಸ್ಥಿತರಿದ್ದರು