ಕರಾವಳಿ

ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ನೇತೃತ್ವದ ಸರಕಾರವು ಅಭಿವೃದ್ಧಿಗೆ ಅನುದಾನ ನೀಡದೆ ಒಂದೆಡೆ ಸತಾಯಿಸುತ್ತಿದ್ದರೆ,- ಡಾ. ಭರತ್ ಶೆಟ್ಟಿ

Published

on

ಸುರತ್ಕಲ್: ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ನೇತೃತ್ವದ ಸರಕಾರವು ಅಭಿವೃದ್ಧಿಗೆ ಅನುದಾನ ನೀಡದೆ ಒಂದೆಡೆ ಸತಾಯಿಸುತ್ತಿದ್ದರೆ,
ಇನ್ನೊಂದೆಡೆ ಸಾಲವನ್ನು ಎತ್ತಲು ರಾಜ್ಯದ ಜಿಡಿಪಿಯನ್ನು ಸುಳ್ಳು ಲೆಕ್ಕದ ಮೂಲಕ ತೋರಿಸಲು ಮುಂದಾಗಿದೆ ಎಂದು ಡಾ. ಭರತ್ ಶೆಟ್ಟಿ ಗಂಭೀರ ಆರೋಪ ಮಾಡಿದ್ದಾರೆ.
ಸುರತ್ಕಲ್ ನ ಗೋವಿಂದದಾಸ ಕಾಲೇಜಿನಲ್ಲಿ ಶಿಕ್ಷಕರ ಹಾಗೂ ಪದವೀಧರ ಚುನಾವಣೆಯ ಪ್ರಚಾರಾರ್ಥ ಅವರು ಮಾತನಾಡಿದರು.


ರಾಜ್ಯದ ಮೇಲ್ಮನೆಯಲ್ಲಿ ಅಸಂಬದ್ಧ ಕಾನೂನು ತರುವುದನ್ನು ತಡೆಯಲು ಬಿಜೆಪಿಗೆ ಬೆಂಬಲದ ಅಗತ್ಯವಿದೆ.
ಶಿಕ್ಷಕರ ಪದವೀಧರ ಸಮಸ್ಯೆಗಳನ್ನ ಸಂಪೂರ್ಣ ಬಗೆಹರಿಸಲು ಒಂದೇ ಬಾರಿಗೆ ಸಾಧ್ಯವಿಲ್ಲವಾದರೂ,
ಹಂತ ಹಂತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ನಡೆಸಲಾಗುವುದು ಎಂದು ಭರವಸೆಯನ್ನು ನೀಡಿದರು.
ಇದೇ ಸಂದರ್ಭ ಏಕಾಏಕಿ ಅನುಮತಿಯನ್ನು ಪಡೆಯದೆ ರಸ್ತೆಯಲ್ಲಿ ಕುಳಿತು ನಮಾಜ್ ಮಾಡುವವರ ಮೇಲೆ ಕಾನೂನು ಕ್ರಮ ಕೈಗೊಂಡರೆ ವಂತಹ ಅಧಿಕಾರಿಗಳನ್ನೇ ಅಮಾನತಿನಲ್ಲಿಡುವ ಅಮಾನುಷ ಕೃತ್ಯವನ್ನು ಸರಕಾರ ಮಾಡುತ್ತಿದೆ


ವಿರುದ್ಧ ಮಾತನಾಡಿದರೆ ಬಿಜೆಪಿ ಶಾಸಕರನ್ನ ಕೇಸು ದಾಖಲಿಸಿ ಬಾಯಿಮುಚ್ಚಿಸುವ ತುಘಲಕ್ ನಿರ್ಧಾರವನ್ನು ಕಾಂಗ್ರೆಸ್ ನೆಡೆಸುತ್ತಿದೆ ಎಂದು ಆಪಾದಿಸಿದರು.
ಈ ಸಂದರ್ಭ ಬಿಜೆಪಿ ಮುಖಂಡರು ,ಮಹಾನಗರ ಪಾಲಿಕೆಯ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Trending

Exit mobile version