ಮೂಡುಶೆಡ್ಡೆ ಗ್ರಾಮದ ಶಿವನಗರ ಸಾರ್ವಜನಿಕ ಕೊರಗಜ್ಜ ದೈವದ ಗುಡಿ ನಿರ್ಮಾಣದ ಶಿಲನ್ಯಾಸ ಕಾರ್ಯಕ್ರಮವು ತಾರೀಕು 1-05-2024 ನೇ ಬುಧವಾರ 9-00 ಗಂಟೆಗೆ ಕುಡುಪು ಶ್ರೀ ಕೃಷ್ಣರಾಜ ತಂತ್ರಿಗಳ ಮಾರ್ಗದರ್ಶನದಂತೆ ದೈವಜ್ಞ ಮನೋಜ್ ಶಾಂತಿ ಪೌರೋಹಿತ್ಯದಲ್ಲಿ ಶಿಲನ್ಯಾಸ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಕ್ಷೇತ್ರದ ಅರ್ಚಕರಾದ ನವೀನ್ ಪೂಜಾರಿ, ಸಹೋದರ ಧನಂಜಯ ಪೂಜಾರಿ, ಆದಿ ಕ್ಷೇತ್ರ ಜಾರ ಶ್ರೀ ಜಾರಂದಾಯ ದೈವಸ್ಥಾನದ ಜತ್ತಿ ಪೂಜಾರಿ( ಪ್ರಕಾಶ್ ಪೂಜಾರಿ) ಸಾಗರ್ ಕನ್ಸ್ಟ್ರಕ್ಷನ್ ಮಾಲೀಕರಾದ ಗಿರಿಧರ್ ಶೆಟ್ಟಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶಿವರಾಮ ಮಲ್ಲಿ, ಉದ್ಯಮಿ ದಿನೇಶ್ ಟಿಂಬರ್, ಶಕ್ತಿನಗರ
ಸಂಘ ಚಾಲಕ್ ಜಯರಾಮ್ ಕೊಟ್ಟಾರಿ, ಉದಯಶಂಕರ್ ಜಾರ, ವಿಠಲ ಪೂಜಾರಿ ಕುಕ್ಕುದಡಿ, ಸಮಿತಿಯ ಗೌರವಾಧ್ಯಕ್ಷರುಗಳಾದ ಮೋಹನ್ ದಾಸ್ ವಾಮಂಜೂರ್ ಹಾಗೂ ಪ್ರಕಾಶ್ ಗಟ್ಟಿ ಹಾಗೂ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ರಿತೇಶ್ ಸಾಲಿಯಾನ್, ಪದಾಧಿಕಾರಿಗಳು, ಸದಸ್ಯರು, ಮಹಿಳಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.