ಬೆಂಗಳೂರು ಡಿ. 10 (zoomkarnataka) ಈಗಾಗಲೇ ನಿರ್ದೇಶಕನಾಗಿ ಗುರುತಿಸಿ ಕೊಂಡಿರುವ ನವಿಲುಗರಿ ನವೀನ್ ಪಿ ಬಿ ಯವರು ಈಗ ನಾಯಕ ನಟನಾಗಿ ಬಣ್ಣ ಹಚ್ಚುತ್ತಿದ್ದಾರೆ.
ಇತ್ತೀಚೆಗೆ ಅಷ್ಟೇ ರಾಮೋಹಳ್ಳಿಯ ರಾಮ ದೇವರ ದೇವಾಲಯದಲ್ಲಿ ಮುಹೂರ್ತ ನೆರವೇರಿಸಿದರು. ಚುಂಚನಕುಪ್ಪೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಾಮು ಆರ್ ಗೌಡ ರವರು ಕ್ಲಾಪ್ ಮಾಡಿದರೆ, ಕ್ಯಾಮೆರಾ ಚಾಲನೆಯನ್ನು ಚೇತನ್ ದುರ್ಗ ಮಾಡಿದರು, ಕೆ ಸಿ ಸಿಂಗ್ ರವರು ಮೊದಲ ದೃಶ್ಯಕ್ಕೆ ಚಾಲನೆ ನೀಡಿದರು.
ಲೆಜೆಂಡ್ ಡೈರೆಕ್ಟರ್ ಚಲನಚಿತ್ರವು ನವಿಲುಗರಿ ಸಿನಿಮಾಸ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಈ ಚಿತ್ರಕ್ಕೆ ಲಲಿತ್ ಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ.
ನವಿಲುಗರಿ ನವೀನ್ ಪಿ ಬಿ ನಟನೆಯ ಜೊತೆಗೆ ಕಥೆ ಚಿತ್ರ ಕಥೆ ಸಂಭಾಷಣೆ ಕೂಡ ಬರೆದಿದ್ದಾರೆ. ರೀತ್ಯಾ ರಾಘವೇಂದ್ರ ನಟಿಯಾಗಿ ಅಭಿನಯಸುತ್ತಿದ್ದಾರೆ ಹಾಗೂ ಸಂಗೀತ ನಿರ್ದೇಶನವನ್ನು ಪ್ರಣವ್ ಸತೀಶ್ ಮಾಡುತ್ತಿದ್ದಾರೆ. ಸಾಹಿತ್ಯ ಪೃಥ್ವಿರಾಜ್ ಸಂಕಿ, ಭುವನ್ ಹಾಗೂ ಉದಯ ಲೇಖ ಬರೆದಿದ್ದಾರೆ. ಚಿತ್ರೀಕರಣ ರಭಸದಿಂದ ಸಾಗುತ್ತಿದೆ ಎಂದು ಚಿತ್ರ ತಂಡದವರು ತಿಳಿಸಿದರು.