ತಾಜಾ ಸುದ್ದಿ

ಜಾತಿ ಆಧಾರದ ಮೇಲೆ ನಾನು ಸ್ಪೀಕರ್‌ ಆಗಿಲ್ಲ : ಸಚಿವ ಜಮೀರ್‌ ಹೇಳಿಕೆಗೆ ಯು.ಟಿ ಖಾದರ್‌ ಅಸಮಾಧಾನ

Published

on

ಮಂಗಳೂರು,ನ 19(Zoom Karnataka): ಜಮೀರ್ ಅಹ್ಮದ್ ಹೇಳಿಕೆಗೆ ಅಸಮಾಧಾನ ಹೊರಹಾಕಿರುವ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಜಾತಿ ಆಧಾರದ ಮೇಲೆ ನಾನು ಸ್ಪೀಕರ್‌ ಆಗಿಲ್ಲ. ನನ್ನ ಅರ್ಹತೆಗೆ ಅನುಗುಣವಾಗಿ ಕೆಲಸ ನಿರ್ವಹಿಸುತ್ತೇನೆ ಎಂದು ಸ್ಪೀಕರ್ ಸ್ಥಾನವನ್ನು ನೀಡಿದ್ದಾರೆ ಎಂದರು.

ಮುಸ್ಲಿಂ ಸ್ಪೀಕರ್‌ಗೆ ಬಿಜೆಪಿ ಶಾಸಕರು ನಮಸ್ಕರಿಸುವಂತೆ ಮಾಡಿದ್ದೇವೆ ಎಂದು ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಸ್ಪೀಕರ್ ಯು.ಟಿ .ಖಾದರ್ ಪ್ರತಿಕ್ರಿಯಿಸಿದ್ದು,

ನಾನು ಎಲ್ಲರ ಸ್ಪೀಕರ್. ಈ ಸ್ಥಾನವನ್ನು ಯಾವುದೇ ರಾಜಕೀಯ ಜಾತಿ ಧರ್ಮದ ಆಧಾರದಲ್ಲಿ ನೋಡುವಂತಿಲ್ಲ. ಇದು ಎಲ್ಲವನ್ನೂ ಮೆಟ್ಟಿ ಮೇಲೆ ನಿಂತು ನೋಡಬೇಕಾದ ಸಂವಿಧಾನ ಬದ್ಧವಾದ ಸ್ಥಾನ. ಎಲ್ಲರೂ ಗೌರವ ಕೊಡುವುದು ನನಗಲ್ಲ. ಸಂವಿಧಾನ ಪೀಠಕ್ಕೆ, ಸಭಾಧ್ಯಕ್ಷ ಸ್ಥಾನಕ್ಕೆ ಎಂದರು.

ಸ್ಪೀಕರ್ ಸ್ಥಾನದಲ್ಲಿ ಕುಳಿತುಕೊಳ್ಳುವವರು ಸ್ಥಾನದ ಗೌರವ ಉಳಿಸಬೇಕು. ಜಮೀರ್ ಅವರ ಹೇಳಿಕೆಗೆ ನಾನು ಯಾವುದೇ ಕಮೆಂಟ್ ಮಾಡಲ್ಲ. ಜಾತಿಯ ಆಧಾರದಲ್ಲಿ ನನ್ನನ್ನು ಪೀಠದಲ್ಲಿ ಕುಳಿತುಕೊಳ್ಳಲಿಲ್ಲ. ಅರ್ಹತೆಗೆ ಅನುಗುಣವಾಗಿ ಕೆಲಸ ನಿರ್ವಹಿಸುತ್ತೇನೆ ಎಂದು ಸ್ಪೀಕರ್ ಸ್ಥಾನವನ್ನು ನೀಡಿದ್ದಾರೆ. ಎಲ್ಲರಿಗೆ ಗೌರವ ನೀಡಿ ಸರ್ವರ ಸ್ಪೀಕರ್ ಆಗಿ ಕೆಲಸ ನಿರ್ವಹಿಸುತ್ತೇನೆ. ಆದ್ದರಿಂದ ಸ್ಪೀಕರ್ ಸ್ಥಾನವನ್ನು ಪಕ್ಷ ಮೀರಿ ನೋಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಜಮೀರ್ ಹೇಳಿಕೆ ಏನು?

ಬಿಜೆಪಿಯ ದೊಡ್ಡದೊಡ್ಡ ನಾಯಕರು ಮುಸ್ಲಿಂ ಸ್ಪೀಕರ್‌ ಮುಂದೆ ಕೈ ಮುಗಿದು ನಿಲ್ಲುವಂತೆ ಮಾಡುವ ತಾಕತ್ತು ಕಾಂಗ್ರೆಸ್‌ ಪಕ್ಷಕ್ಕಿದೆ ಎಂದು ಬಿ.ಝಡ್‌. ಜಮೀರ್‌ ಅಹ್ಮದ್‌ ಖಾನ್‌ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ತೆಲಂಗಾಣ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಜಮೀರ್‌ , ‘‘ಕರ್ನಾಟಕ ವಿಧಾನಸಭಾ ಚುನಾವಣೆಧಿಯಲ್ಲಿಕಾಂಗ್ರೆಸ್‌ 17 ಮಂದಿ ಮುಸ್ಲಿಮರಿಗೆ ಟಿಕೆಟ್‌ ನೀಡಿತ್ತು. 7 ಮಂದಿ ಗೆದ್ದಿದ್ದೇವೆ, ನಾನು ಸೇರಿದಂತೆ ಮೂವರಿಗೆ ಅಧಿಕಾರ ಲಭಿಸಿದೆ. ರಾಜ್ಯ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಮುಸ್ಲಿಂ ವ್ಯಕ್ತಿಯನ್ನು ವಿಧಾನಸಭೆ ಸ್ಪೀಕರ್‌ ಮಾಡಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ. ಈಗ ಬಿಜೆಪಿ ನಾಯಕರು ನಮ್ಮ ಮುಸ್ಲಿಂ ಸ್ಪೀಕರ್‌ ಯು.ಟಿ. ಖಾದರ್‌ ಮುಂದೆ ಕೈ ಮುಗಿದು ನಿಲ್ಲುವಂತೆ ಮಾಡಿದ್ದೇವೆ ಎಂದಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version