ಕ್ರೀಡಾ ಸುದ್ದಿ

ಕ್ರಿಕೆಟ್ ದೇವರ ವಿಶ್ವ ದಾಖಲೆ ಮುರಿದ ಕಿಂಗ್ ವಿರಾಟ್ ಕೊಹ್ಲಿ

Published

on

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ವಿಶ್ವಕಪ್‌ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದಾಖಲೆಯ ಶತಕ ಸಿಡಿಸಿ ಮಿಂಚಿದ್ದಾರೆ. ಇದು ಏಕದಿನ ಕ್ರಿಕೆಟ್‌ನಲ್ಲಿ ಕಿಂಗ್ ಕೊಹ್ಲಿ ಅವರ 50ನೇ ಶತಕವಾಗಿದ್ದು, ಈ ಮೂಲಕ ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರ ಎನಿಸಿಕೊಂಡಿದ್ದಾರೆ.

ಇದುವರೆಗೆ ಏಕದಿನ ಮಾದರಿಯಲ್ಲಿ ಕದರಿಕೆಟ್ ದಂತಕತೆ, ಕ್ರಿಕೆಟ್ ದೇವರು ಮಾಜಿ ಸಚಿನ್ ತೆಂಡೂಲ್ಕರ್ 49 ಶತಕ ಸುಡಿಸಿರುವುದು ದಾಖಲೆಯಾಗಿತ್ತು.

ಈಗ ಕಿವೀಸ್ ವಿರುದ್ಧ 50ನೇ ಶತಕ ಪೂರ್ಣಗೊಳಿಸಿರುವ ವಿರಾಟ್ ವಿಶ್ವಕ್ರಿಕೆಟ್ನಲ್ಲಿ 50 ಏಕದಿನ ಶತಕ ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.

ರನ್ ಗಳಿಕೆಯಲ್ಲೂ ಸಚಿನ್ ದಾಖಲೆ ಉಡೀಸ್

ಅಮೋಘ ಫಾರ್ಮ್‌ ನಲ್ಲಿರುವ ಕೊಹ್ಲಿ, ವಿಶ್ವಕಪ್ ನಲ್ಲಿ 600ಕ್ಕಿಂತ ಹೆಚ್ಚು ರನ್ ಗಳಿಸಿದ ಮೂರನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಅವರು ಈ ವಿಶ್ವಕಪ್ ‌ನಲ್ಲಿ ಇದುವರೆಗೆ ಒಟ್ಟು 711 ರನ್ ಗಳಿಸಿದ್ದು, 2003ರ ವಿಶ್ವಕಪ್‌ನಲ್ಲಿ ಸಚಿನ್ ತೆಂಡುಲ್ಕರ್ ಸಿಡಿಸಿದ 673 ರನ್ ದಾಖಲೆ ಮುರಿದಿದೆ.

ಹಾಗೆಯೇ ಈ ವಿಶ್ವಕಪ್‌ನಲ್ಲಿ 8 ಅರ್ಧಶತಕ ಸಿಡಿಸಿದ್ದು, ಇದು ಕೂಡ ದಾಖಲೆಯಾಗಿದೆ.

Leave a Reply

Your email address will not be published. Required fields are marked *

Trending

Exit mobile version