ಕ್ರೈಂ ನ್ಯೂಸ್

ದಪ್ಪ ಇದ್ದೀನಿ.. ನೋಡೋಕೆ ಚೆನ್ನಾಗಿ ಕಾಣ್ತಿಲ್ಲ ಅಂತ MBBS ವಿದ್ಯಾರ್ಥಿನಿ ಆತ್ಮಹತ್ಯೆ

Published

on

ದಪ್ಪ ಇದ್ದೀನಿ. ನೋಡೋಕೆ ಚೆನ್ನಾಗಿ ಕಾಣ್ತಿಲ್ಲ ಎಂದು ಬೇಸರಗೊಂಡು ಎಂಬಿಬಿಎಸ್‌ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಎಂಬಿಬಿಎಸ್ ವಿದ್ಯಾರ್ಥಿನಿ ಪ್ರಕೃತಿ ಶೆಟ್ಟಿ (20) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿ. ಈಕೆ ಮಂಗಳೂರಿನ ಮೆಡಿಕಲ್ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಜೀವನದಲ್ಲಿ ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆಂದು ಡೆತ್‌ನೋಟ್ ಬರೆದಿಟ್ಟಿದ್ದಳು. ನಂತರ ಹಾಸ್ಟೆಲ್‌ನ 6ನೇ ಮಹಡಿಯಿಂದ ಜಿಗಿದು ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಡೆತ್‌ನೋಟ್‌ನಲ್ಲೇನಿತ್ತು?
ದಪ್ಪ ಇದ್ದೀನಿ.. ನೋಡೋಕೆ ಚೆನ್ನಾಗಿ ಕಣ್ತಾ ಇಲ್ಲ. ಎಂಬಿಬಿಎಸ್ ಮುಗಿಸಬೇಕು ಅಂತಾ ತುಂಬಾ ಆಸೆ ಇತ್ತು. ಆದರೆ ನನ್ನ ಸೌಂದರ್ಯಕ್ಕೆ ದಪ್ಪ ಅನ್ನೋದು ಅಡ್ಡಿಯಾಗಿದೆ. ತೂಕ ಇಳಿಸಲು ಸಾಕಷ್ಟು ಪ್ರಯತ್ನ ಪಟ್ಟರೂ ಆಗಲಿಲ್ಲ. ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡಿದ್ದೇನೆ ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದಳು ಎನ್ನಲಾಗಿದೆ.

ಪ್ರಕೃತಿ ಶೆಟ್ಟಿ ಬೆಳಗಾವಿಯ ಅಥಣಿ ಮೂಲದವಳು. ಕಾಲೇಜಿಗೆ ರಜೆ ಸಿಕ್ಕಿದ್ದರೂ ಊರಿಗೆ ತೆರಳದೆ ಹಾಸ್ಟೆಲ್‌ನಲ್ಲೇ ಇದ್ದಳು. ಇಂದು (ಸೋಮವಾರ) ಮುಂಜಾನೆ 3 ಗಂಟೆಗೆ ಹಾಸ್ಟೆಲ್‌ನಲ್ಲಿ 6 ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬAಧ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Trending

Exit mobile version