ಬೆಂಗಳೂರು,ಅ 27(Zoom Karnataka): ‘ಹೆಬ್ಬುಲಿ’ ನಟಿ ಅಮಲಾ ಪೌಲ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ನಟಿ ತಮ್ಮ ಜನ್ಮ ದಿನಾಚರಣೆ ಸಂಭ್ರಮದ ದಿನವೇ ತಮ್ಮ 2ನೇ ಮದುವೆ ವಿಚಾರವಾನ್ನು ಅಭಿಮಾನಿಗಳ ಎದುರು ಪ್ರಸ್ತಾಪ ಮಾಡಿದ್ದಾರೆ.
ಜಗತ್ ದೇಸಾಯಿ ಎನ್ನುವವರ ಜೊತೆ ಅಮಲಾ ಡೇಟಿಂಗ್ ನಲ್ಲಿದ್ದರು. ಅವರೇ ಹೋಟೆಲ್ ವೊಂದರಲ್ಲಿ ಅಮಲಾ ಅವರ ಹುಟ್ಟು ಹಬ್ಬಕ್ಕೆ ಸಿದ್ಧತೆ ಮಾಡಿದ್ದಾರೆ. ನೃತ್ಯ ಮಾಡುತ್ತಲೇ ನಟಿಗೆ ಪ್ರಪೋಸ್ ಮಾಡಿದ್ದಾರೆ. ಅಚ್ಚರಿಯಿಂದಲೇ ಅಮಲಾ ಕೂಡ ಬಾಯ್ ಫ್ರೆಂಡ್ ತುಟಿಗೆ ಮುತ್ತಿಡುತ್ತಾ ಉಂಗುರು ತೊಡಿಸಿದ್ದಾರೆ.
ಅಮಲಾ ಪೌಲ್ಗೆ ಟಾಲಿವುಡ್ ಇಂಡಸ್ಟ್ರಿಯಲ್ಲಿ ಸಾಲು ಸಾಲು ಅವಕಾಶಗಳು ಬಂದರೂ ನಿರೀಕ್ಷಿತ ಸ್ಟಾರ್ ಪಟ್ಟ ಸಿಗಲಿಲ್ಲ. ಕೆಲ ವರ್ಷಗಳ ಕಾಲ ತೆಲುಗಿನಲ್ಲಿ ಮಿಂಚಿದ್ದ ಈ ಚೆಲುವೆ ನಂತರ ತಮಿಳು, ಕನ್ನಡ ಚಿತ್ರಗಳನ್ನು ಮಾಡಿದರು. ತಮಿಳು ನಿರ್ದೇಶಕ ಎ.ಎಲ್. ವಿಜಯ್ ಅವರನ್ನು ಪ್ರೀತಿಸಿ ಅಮಲಾ ಪೌಲ್ ಅವರು 2014ರಲ್ಲಿ ಮದುವೆ ಆದರು. ಆದರೆ ಇವರ ಸಂಬಂಧ ಹೆಚ್ಚು ಸಮಯ ಉಳಿಯಲಿಲ್ಲ. ಮೂರೇ ವರ್ಷಕ್ಕೆ ಇವರು ವಿಚ್ಛೇದನ ಪಡೆದರು. ವಿಚ್ಛೇದನದ ನಂತರವೂ ಅಮಲಾ ಪೌಲ್ ಒಂಟಿಯಾಗಿದ್ದರು. ಆದರೆ ಇದೀಗ ಅಮಲಾ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ.