ಮನೋರಂಜನೆ

ಲಿಪ್ ಲಾಕ್ ಮಾಡುವುದಾದ್ರೆ ಅದು ನನ್ನ ಭಾವಿ ಪತಿಯೊಂದಿಗೆ ಮಾತ್ರ – ನಟಿ ಶ್ರೀಲೀಲಾ

Published

on

ಮುಂಬೈ, ಅ 26 (Zoom Karnataka): ಕನ್ನಡದ ನಟಿ ಶ್ರೀಲೀಲಾ ನಟನೆಯ ತೆಲುಗು ಸಿನಿಮಾ ‘ಭಗವಂತ್ ಕೇಸರಿ’ ಬಿಡುಗಡೆ ಆಗಿದೆ. ಈ ವೇಳೆಯಲ್ಲಿ ನಡೆದ ಸಂದರ್ಶನದಲ್ಲಿ ಶ್ರೀಲೀಲಾ ಅಚ್ಚರಿಯ ಹೇಳಿಕೆಯನ್ನು ಕೊಟ್ಟಿದ್ದಾರೆ.

ತೆರೆಯ ಮೇಲೆ ಯಾವುದೇ ಕಾರಣಕ್ಕೂ ತಾವು ಲಿಪ್ ಲಾಕ್ ಮಾಡಿಕೊಳ್ಳುವುದಿಲ್ಲ. ಲಿಪ್ ಲಾಕ್ ಮಾಡುವುದಾದರೆ ಅದು ನನ್ನ ಭಾವಿ ಪತಿ ಆಗಿರಬೇಕು ಎಂದೂ ಅವರು ಹೇಳಿಕೆ ನೀಡಿದ್ದಾರೆ. ಇದು ತೆಲುಗು ಚಿತ್ರೋದ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಇಷ್ಟೇ ಅಲ್ಲ ಸೂಪರ್‌ ಸ್ಟಾರ್‌ ನಟನ ಮಗನೊಂದಿಗೆ ಶ್ರೀಲೀಲಾ ಮದುವೆಗೆ ರೆಡಿಯಾಗುತ್ತಿದ್ದಾರೆ ಎಂದು ಸುದ್ದಿ ವೈರಲ್‌ ಆಗಿದೆ. ’ಭಗವಂತ ಕೇಸರಿ’ ಸಿನಿಮಾದಲ್ಲಿ ಟಾಲಿವುಡ್ ಟಾಪ್ ಸ್ಟಾರ್ ಬಾಲಕೃಷ್ಣನ ಮಗಳಾಗಿ ನಟಿಸಿದ್ದಾರೆ. ಬಾಲಯ್ಯನ ಮಗ ಮೋಕ್ಷಗಣನ ಜೊತೆ ಶ್ರೀಲೀಲಾ ಹೆಸರು ಓಡಾಡುತ್ತಿದೆ. ನಟಿ ಶ್ರೀಲೀಲಾ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅದ್ರೇ ಇದು ನಿಜನಾ, ಗಾಳಿಸುದ್ದಿಯ ಅನ್ನುವುದು ನೋಡಬೇಕಿದೆ.

Leave a Reply

Your email address will not be published. Required fields are marked *

Trending

Exit mobile version