ಅತ್ತಿಬೆಲೆ ಪಟಾಕಿ ದುರಂತದ ಬಳಿಕ ಮಹತ್ವದ ನಿರ್ಧಾರ ಪ್ರಕಟಿಸಿರುವ ಸರ್ಕಾರ, ಗಣೇಶೋತ್ಸವ, ಮದುವೆ, ರಾಜಕೀಯ ಸಮಾರಂಭ, ಮೆರವಣಿಗೆ, ಸಮಾವೇಶ, ಕಾರ್ಯಕ್ರಮಗಳಲ್ಲಿ ಅಪಾಯಕಾರಿ ಪಟಾಕಿ ಹೊಡೆಯುವುದನ್ನು ನಿಷೇಧಿಸಿದೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಈ ಸಂಬಂಧ ನಿರ್ಣಯ ಕೈಗೊಳ್ಳಲಾಗಿದ್ದು, ಸರ್ಕಾರದ ತೀರ್ಮಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮಗಳಿಗೆ ತಿಳಿಸಿದರು.
ರಾಜ್ಯದಲ್ಲಿ ಹಸಿರು ಪಟಾಕಿ ಬಳಕೆಗೆ ಮಾತ್ರ ಅವಕಾಶ. ಉಳಿದ ಪಟಾಕಿಗಳಿಗೆ ನಿಷೇಧ ಹೇರಲಾಗಿದೆ. ಹಾಗೆಯೇ ದೀಪಾವಳಿಗೆ ಹಸಿರು ಪಟಾಕಿ ಮಾತ್ರ ಬಳಸಲು ಅವಕಾಶವಿರುತ್ತದೆ ಎಂದು ಸ್ಪಷ್ಟಪಡಿಸಿದರು.
ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಹಸಿರು ಪಟಾಕಿ ನಿಯಾಮವಳಿಗಳಿಗೆ ವಿರುದ್ಧವಾಗಿ ಅಂಗಡಿಗಳಿದ್ದರೆ ಕ್ರಮ ಕೈಗೊಳ್ಳಲಾಗುವುದು. ಪರಿಶೀಲನೆ ಮಾಡಿ ಕ್ರಮಕ್ಕೆ ಸೂಚಿಸಿದ್ದೇವೆ. ಇನ್ನು ಮುಂದೆ ಪಟಾಕಿ ಅಂಗಡಿಗಳಿಗೆ ಲೈಸೆನ್ಸ್‌ಗಳಿಗೆ ಸುಪ್ರೀಂಕೋರ್ಟ್ ಆದೇಶದ ಪ್ರಕಾರವೇ ಲೈಸೆನ್ಸ್ ಕಡ್ಡಾಯ ಮಾಡಲಾಗಿದೆ ಎಂದರು.
ಹೌದು.. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಈ ಬಾರಿ ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಮತ್ತು ಸಿಡಿಸಲು ಸರ್ಕಾರ ಅನುಮತಿ ನೀಡಿದೆ. ಆದರೆ ಹಸಿರು ಪಟಾಕಿ ಎಂದರೇನು? ಎಂಬ ಬಗ್ಗೆ ಕೊಳ್ಳುವವರಲ್ಲಿ ಮಾತ್ರವಲ್ಲದೆ ಮಾರಾಟ ಮಾಡುವವರಿಗೂ ಗೊಂದಲಗಳು ಇರುವುದರಿಂದ ಈ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ಹಸಿರು ಪಟಾಕಿಗಳು ಪರಿಸರಕ್ಕೆ ಹಾನಿ ಉಂಟು ಮಾಡುವುದಿಲ್ಲ. ಹೀಗಾಗಿ ಈ ಪಟಾಕಿಯಿಂದ ವಾಯು ಮಾಲಿನ್ಯ ಉಂಟಾಗುವುದಿಲ್ಲ ಸರ್ಕಾರ ತಿಳಿಸಿದೆ. ಹಾಗಾದರೆ, ಹಸಿರು ಪಟಾಕಿ ಎಂದರೇನು…? ಅದನ್ನು ಪತ್ತೆ ಹಚ್ಚುವುದು ಹೇಗೆ? ಎಂಬುದಕ್ಕೆ ಇಲ್ಲಿದೆ ಮಾಹಿತಿ…
ಹಸಿರು ಪಟಾಕಿ ಎಂದರೇನು?
ಹಸಿರು ಪಟಾಕಿ ಎಂದರೆ ಸಾಮಾನ್ಯ ಪಟಾಕಿಗಿಂತ ಕಡಿಮೆ ಮಾಲಿನ್ಯ ಮಾಡುವ ಪಟಾಕಿ. CSIR ಮತ್ತು NEERI ಸಂಶೋಧನಾ ಸಂಸ್ಥೆಗಳು ಜಂಟಿಯಾಗಿ ಹಸಿರು ಪಟಾಕಿಯನ್ನು ಅಭಿವೃದ್ದಿ ಪಡಿಸಿವೆ. ಸುಪ್ರೀಂಕೋರ್ಟ್ ತೀರ್ಪಿನ ಹಿನ್ನಲೆಯಲ್ಲಿ 2018ರಲ್ಲಿ ಹಸಿರು ಪಟಾಕಿಗಳನ್ನು ಅಭಿವೃದ್ಧಿ ಮಾಡಲಾಯಿತು. ಲಿಥಿಯಂ, ಲೆಡ್ (ಸೀಸ), ಆರ್ಸೆನಿಕ್ ಮತ್ತು ಬೇರಿಯಂನಂಥ ಹಾನಿಕಾರಕ ಕಮಿಕಲ್ಗಳನ್ನು ಹಸಿರು ಪಟಾಕಿಯಲ್ಲಿ ಬಳಸುವುದಿಲ್ಲ. ಹಸಿರು ಪಟಾಕಿಯು ಕಡಿಮೆ ಹೊಗೆಯನ್ನು ಹರಡುತ್ತದೆ. ಈ ಪಟಾಕಿ ಸಾಮಾನ್ಯ ಪಟಾಕಿಗಿಂತ ಶೇ. 30ರಷ್ಟು ಮಾತ್ರ ಮಾಲಿನ್ಯ ಮಾಡುತ್ತದೆ. ಹಸಿರು ಪಟಾಕಿಗಳು ಧೂಳೆಬ್ಬಿಸುವುದಿಲ್ಲ.
ಅಲ್ಲದೇ ಇವು ಕಡಿಮೆ ಮಾಲಿನ್ಯಕಾರಕ ಕಚ್ಚಾ ವಸ್ತುಗಳನ್ನು ಬಳಸಿ ಹಸಿರು ಕ್ರ್ಯಾಕರ್‌ಗಳನ್ನು ತಯಾರಿಸಲಾಗುತ್ತದೆ. ಹಸಿರು ಪಟಾಕಿಗಳಿಂದ ಹೊರಹೊಮ್ಮುವ ಧೂಳು ನಿಗ್ರಹಿಸಲ್ಪಡುತ್ತದೆ, ಇದರಿಂದಾಗಿ ಪಟಾಕಿಗಳ ಕಣಗಳು ಗಾಳಿಯಲ್ಲಿ ಕಡಿಮೆ ಹೊರಸೂಸಲ್ಪಡುತ್ತವೆ. ಸಾಮಾನ್ಯ ಕ್ರ್ಯಾಕರ್‌ಗಳನ್ನು ಸಿಡಿಸುವುದರಿಂದ ಸುಮಾರು 160 ಡೆಸಿಬಲ್‌ಗಳಷ್ಟು ಶಬ್ದ ಉಂಟಾಗುತ್ತದೆ, ಆದರೆ ಹಸಿರು ಪಟಾಕಿಗಳನ್ನು 110-125 ಡೆಸಿಬಲ್‌ಗಳಿಗೆ ಇಳಿಸಲಾಗುತ್ತದೆ. ಹಸಿರು ಪಟಾಕಿಗಳನ್ನು ತಯಾರಿಸುವ ತಯಾರಕರು ಹಸಿರು ಕ್ರ್ಯಾಕರ್ ಸೂತ್ರೀಕರಣದತ್ತ ಗಮನ ಹರಿಸಬೇಕು.
ಈ ಪಟಾಕಿ ಕಂಪನಿಗಳು ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ಸಿದ್ಧಪಡಿಸಿದ ಹಸಿರು ಪಟಾಕಿ ಸೂತ್ರೀಕರಣದ ಎಲ್ಲಾ ಷರತ್ತುಗಳನ್ನು ಅನುಸರಿಸಬೇಕು. ದೇಶದಲ್ಲಿ ಮೂರು ರೀತಿಯ ಹಸಿರು ಪಟಾಕಿಗಳಿವೆ. SWAS ಸ್ಟಾರ್ (STAR) ಮತ್ತು SAFAL (SAFAL).