ತಾಜಾ ಸುದ್ದಿ

ಬೆಂಗಳೂರು ಕಂಬಳಕ್ಕೆ ಸಾಥ್ ನೀಡಲಿದ್ದಾರೆ ಸ್ಟಾರ್ ಕಲಾವಿದರು

Published

on

ಬೆಂಗಳೂರು ,ಸೆ 26 (Zoom Karnataka) : ನೂರಾರು ವರ್ಷಗಳ ಇತಿಹಾಸವಿರುವ ಕಂಬಳ ನ.24ರಂದು ಬೆಂಗಳೂರಿನಲ್ಲೂ ನಡೆಯಲಿದೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ಬೆಂಗಳೂರು ಕಂಬಳದ ಸಿದ್ಧತೆ ಜೋರಾಗಿದೆ.

150ಕ್ಕೂ ಹೆಚ್ಚಿನ ಕೋಣಗಳು ಈ ಪೈಪೋಟಿಯಲ್ಲಿ ಭಾಗಿಯಾಗಲಿವೆ. ಸುಮಾರು 7 ಲಕ್ಷ ಜನ ಈ ಕಂಬಳದಲ್ಲಿ ಭಾಗಿಯಾಗುವ ನಿರೀಕ್ಷೆಯಲ್ಲಿದ್ದಾರೆ ಆಯೋಜಕರು. ನವೆಂಬರ್ ಅಂತ್ಯದಲ್ಲಿ ಬೆಂಗಳೂರು ಕಂಬಳ ಶುರುವಾಗಿದೆ.

ಬೆಂಗಳೂರು ಕಂಬಳಕ್ಕೆ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ , ಅನುಷ್ಕಾ ಶೆಟ್ಟಿ, ನಟ ಉಪೇಂದ್ರ, ರಿಷಬ್‌ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್ ಈ ಹೀರೋಗಳ ಜತೆ ಬಾಲಿವುಡ್, ಟಾಲಿವುಡ್ ನಟಿಯರೂ ಸೇರಿಕೊಳ್ಳಲಿದ್ದಾರೆ. ಬಣ್ಣದ ಲೋಕದ ಮಂದಿ ಜತೆ ರಾಜಕಾರಣಿಗಳು ಕೂಡ ಅಖಾಡಕ್ಕೆ ಇಳಿಯಲಿದ್ದಾರೆ. ಶಾಸಕ ಹ್ಯಾರಿಸ್, ಅಶ್ವತ್ ನಾರಾಯಣ, ಸಚಿವ ಸುಧಾಕರ್, ಸ್ಪೀಕರ್ ಖಾದರ್ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version