ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಕೊಲೆಸ್ಟ್ರಾಲ್ ಪ್ರಮಾಣ ಮಾಡಲು ಮತ್ತು ಹೃದಯದ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕೆಲವು ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ದೇಹದ ಕೊಬ್ಬು ಕರಗಿಸುವ ಮೂಲಕ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಅಷ್ಟೇ ಅಲ್ಲ, ಶೀತ, ಕೆಮ್ಮು ಮತ್ತು ಸೋಂಕಿಗೆ ಒಳಗಾಗಿದ್ದರೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಅಗಿಯುವ ಮೂಲಕ ಸೇವಿಸಬಹುದು. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಉತ್ತಮವಾಗಿಸಲು ಸಹಕರಿಸುತ್ತದೆ.
ಬೆಳ್ಳುಳ್ಳಿ ಸೇವನೆಯಿಂದ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ
ಬೆಳ್ಳುಳ್ಳಿ ನಮ್ಮ ರೋಗ ನಿರೋಧಕ ಶಕ್ತಿ ಯನ್ನು ಹೆಚ್ಚಿಸುವ ಗುಣವನ್ನು ಹೊಂದಿದ್ದು, ಇದರಲ್ಲಿ ಅಲಿಸಿನ್ ಎಂಬ ಸಂಯುಕ್ತ ಕಂಡುಬಂದಿದ್ದು, ಆಂಟಿ ಮೈಕ್ರೋಬಿಯಲ್ ಲಕ್ಷಣಗಳನ್ನು ಒದಗಿಸುತ್ತದೆ. ಹಸಿ ಬೆಳ್ಳುಳ್ಳಿಯನ್ನು ತಿನ್ನಬಹುದು ಅಥವಾ ಅಡುಗೆ ಯಲ್ಲಿ ಬೆಳ್ಳುಳ್ಳಿಯನ್ನು ಬಳಸುವುದರಿಂದ ಸೋಂಕು ಗಳನ್ನು ನಿವಾರಣೆ ಮಾಡುವ ಜೊತೆಗೆ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಬಹುದು. ಇದರಿಂದ ಹೃದಯದ ಆರೋಗ್ಯ ಕೂಡ ಉತ್ತಮ ಗೊಳ್ಳುತ್ತದೆ.
ಬೆಳಗ್ಗೆ ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ಸೇವನೆ ಏನೆಲ್ಲಾ ಲಾಭ ಕೊಡುತ್ತೆ ತಿಳಿಯಿರಿ
ಖಾಲಿ ಹೊಟ್ಟೆಯಲ್ಲಿ ಹಸಿ ಬೆಳ್ಳುಳ್ಳಿಯನ್ನು ಸೇವನೆ ಮಾಡುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಹೃದಯದ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ಬೆಳ್ಳುಳ್ಳಿ ಮತ್ತು ಜೇನು ತುಪ್ಪದ ಮಿಶ್ರಣ ಸೇವಿಸುವದರಿಂದ ಆಸಿಡ್ ರಿಫ್ಲಕ್ಸ್ ಮತ್ತು ರೆಗ್ಯುರಿಟೇಶನ್ ರೋಗಲಕ್ಷಣಗಳನ್ನು ನಿವಾರಿಸಲು ಸಹಕಾರಿ ಅಂತಾರೆ ವೈದ್ಯರು.
ಬೆಳ್ಳುಳ್ಳಿಯನ್ನು ಸೇವಿಸಲು ಸೂಕ್ತ ಮಾರ್ಗವೆಂದರೆ ಅದನ್ನು ಹಸಿಯಾಗಿ ಮತ್ತು ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಸೂಕ್ತ ಎನ್ನಲಾಗುತ್ತದೆ.