ತಾಜಾ ಸುದ್ದಿ

ವಿಶೇಷ ವೇಷದೊಂದಿಗೆ ಅಷ್ಟಮಿಯಂದು ಜನರ ಮುಂದೆ ಬಂದ ರವಿ ಕಟಪಾಡಿ

Published

on

ಉಡುಪಿ, ಸೆ 07 (Zoom Karnataka): ರವಿ ಕಟಪಾಡಿ ಹೆಸರಲ್ಲೇ ಒಂಥರ ರೋಮಾಂಚನ. ಮೈ ಜುಂ ಎಣಿಸುವ ಅವರ ವೇಷಭೂಷಣ. ಪ್ರತೀ ವರ್ಷ ಅಷ್ಟಮಿ ದಿನಕ್ಕಾಗಿ ಅನೇಕರು ಕಾಯುತ್ತಿರುತ್ತಾರೆ. ಕಾರಣ ಜನರ ಮುಂದೆ ಬರುವ ವಿಶಿಷ್ಟ ವೇಷದ ರವಿಯಣ್ಣನವರನ್ನು ಕಣ್ತುಂಬಿಕೊಳ್ಳೋಕೆ. ಕಟಪಾಡಿಯ ರವಿಯಣ್ಣನಿಗೆ ಮಕ್ಕಳಂದ್ರೆ ವಿಶೇಷ ಮಮತೆ. ಪುಟಾಣಿಗಳೆಂದರೆ ಪಂಚ ಪ್ರಾಣ. ಮಧ್ಯಮವರ್ಗದ ಕುಟುಂಬದಿಂದ ಬಂದ ಅವರಿಗೆ ಕಷ್ಟದಲ್ಲಿರುವ ಮಕ್ಕಳ ಆರೋಗ್ಯ ಸುಧಾರಿಸಬೇಕೆಂಬ ಬಯಕೆ. ಅನಾರೋಗ್ಯಕ್ಕೀಡಾದ ಮಕ್ಕಳಿಗೆ ನೆರವಾಗುವಷ್ಟು ಅನುಕೂಲಕರ ಕುಟುಂಬಸ್ಥನಲ್ಲದಿದ್ದರೂ ಕೈ ಕಟ್ಟಿ ಕೂರದೆ, ತನ್ನ ಸಾಮಾರ್ಥ್ಯಕ್ಕೂ ಮೀರಿ ಮಕ್ಕಳಿಗಾಗಿ ದೇಹ ದಂಡಿಸುತ್ತಿದ್ದಾರೆ. ಕಳೆದ ೮ ವರ್ಷಗಳಿಂದ ಪ್ರತೀ ಕೃಷ್ಣಾಷ್ಟಮಿ ದಿನದಂದು ಒಂದಲ್ಲ ಒಂದು ದೈತ್ಯ ವೇಷವನ್ನು ತೊಟ್ಟು ಜನರ ಮುಂದೆ ಬಂದು ತಮ್ಮ ಬಳಗದ ಮೂಲಕ ಹಣ ಸಂಗ್ರಹಿಸಿ ಬಡ ಮಕ್ಕಳ ಚಿಕಿತ್ಸೆಗೆ ನೆರವಾಗುತ್ತಿದ್ದಾರೆ.

ಪ್ರತಿ ಬಾರಿಯಂತೆ ಈ ಬಾರಿಯೂ ಕೂಡಾ ಕಟಪಾಡಿಯ ನಮ್ಮಣ್ಣನ ಸಮಾಜ ಸೇವೆ ಮುಂದುವರೆದಿದೆ. ವಿಶೇಷ ವೇಷ ತೊಡುವ ಸೇವಕ ರವಿ ಕಟಪಾಡಿ ಈ ಬಾರಿ ಮತ್ತೊಮ್ಮೆ ಜನರ ಮುಂದೆ ಬಂದಿರುವುದು ಸೀ ಪೋಕ್ ಎಂಬ ಆಂಗ್ಲ ಚಲನಚಿತ್ರದ ವೇಷವನ್ನು ಧರಿಸಿ. ಉದ್ಯಾವರ, ಉಡುಪಿ, ಮಲ್ಪೆ, ಪಡುಕೆರೆ ಮತ್ತು ಇತರ ಪ್ರದೇಶಗಳಲ್ಲಿ ರವಿ ಕಟಪಾಡಿ ಫ್ರೆಂಡ್ಸ್ ತಂಡ ತಿರುಗಾಟ ನಡೆಸಲಿ. ಜನರನ್ನು ರಂಜಿಸಲಿದ್ದಾರೆ. ಈ ಬಾರಿ ಕುಂದಾಪುರ ಮೂಲದ ೨ ವರ್ಷದ ಮಗುವಿನ ಚಿಕಿತ್ಸೆಗೆ ಹಣವನ್ನು ಸಂಗ್ರಹಿಸಿ ನೀಡಲು ನಿರ್ಧರಿಸಿದ್ದಾರೆ. ಸತತ ೪೦ ಗಂಟೆಗಳ ಕಾಲ ಅನ್ನ ಆಹಾರವಿಲ್ಲದೆ ದೇಹ ದಂಡಿಸಿ ಕೊಟ್ಯಾಂತರ ರೂ. ಸಂಗ್ರಹಿಸಿ ನೂರಾರು ಮಕ್ಕಳಿಗೆ ನೆರವಾಗಿರುವ ರವಿಯಣ್ಣನ ಬಗ್ಗೆ ಅನೇಕ ಜನ ಅಪಪ್ರಚಾರ ನಡೆಸಿದ್ದಾರೆ. ಇದರಿಂದ ನೊಂದ ಕಟಪಾಡಿಯ ನಮ್ಮಣ್ಣ ಈ ಬಾರಿ ದೈತ ವೇಷ ಧರಿಸಿದರೂ ಜನರ ಮುಂದೆ ಕೈ ಚಾಚದೆ ಖುಷಿಯಿಂದ ಇವರ ಬಳಿ ಬಂದು ಯಾರಾದ್ರು ಹಣ ನೀಡಿದ್ದಲ್ಲಿ ಸ್ವೀಕರಿಸುವೆ ಎಂದಿದ್ದಾರೆ.

ಮಂಗಳವಾರ ರಾತ್ರಿ ೯ ಗಂಟೆಗೆ ವೇಷಕ್ಕಾಗಿ ಕುಳಿತಿದ್ದು, ಬುಧವಾರ ಬೆಳಿಗ್ಗೆ ೯ ಗಂಟೆಗೆ ವೇಷ ಪೂರ್ಣಗೊಂಡಿದೆ. ಸರಿ ಸುಮಾರು ೪೦ಗಂಟೆಗಳ ಕಾಲ ರವಿಯವರು ಅನ್ನಾಹಾರ ಇಲ್ಲದೆ ವೇಷ ಧರಿಸಿ ಇರಲಿದ್ದಾರೆ. ಇಲ್ಲಿಯ ತನಕ 1ಕೋಟಿಗೂ ಮಿಕ್ಕಿ ಧನ ಸಂಗ್ರಹಿಸಿರುವ ಅವರು, 113 ಮಕ್ಕಳಿಗೆ ಮುದ್ದಿನ ಅಣ್ಣನಾಗಿ ಬಾಳಿಗೆ ಬೆಳಕಾಗಿದ್ದಾರೆ. ದಿನಗೂಲಿ ಕಾರ್ಮಿಕರಾದರೂ ಬಡ ಮಕ್ಕಳಾ ಮೇಲೆ ರವಿಯಣ್ಣನಿಗಿರುವ ಕಾಳಜಿ ಹಾಗೂ ಅವರು ಮಾಡುವ ಕಾರ್ಯಕ್ಕೆ ನಮ್ಮದೊಂದು ಸಲಾಂ.

Leave a Reply

Your email address will not be published. Required fields are marked *

Trending

Exit mobile version