ಮಂಗಳೂರು ಆ 15(Zoom Karnataka): ದೇಶದೆಲ್ಲೆಡೆ ಇಂದು ಸ್ವಾತಂತ್ರ್ಯೋತ್ಸವದ ಸಂಭ್ರಮ ಗರಿಗೆದರಿದೆ. ಈ ಶುಭ ಸಂದರ್ಭದಲ್ಲಿ ದ.ಕ.ಜಿಲ್ಲೆಯ ದೇವತೆಯರಿಗೂ ದೇಶದ ಹೆಮ್ಮೆಯ ತ್ರಿವರ್ಣ ಧ್ವಜದ ಅಲಂಕಾರದಲ್ಲಿ ಸಿಂಗಾರಗೊಳಿಸಿ ದೇಶಪ್ರೇಮ ಮೆರೆಯಲಾಗಿದೆ.
ಕಟೀಲು ಶ್ರೀ ದುರ್ಗಾಪರಮೇಶ್ವರಿ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಹಾಗೂ ಮಂಗಳೂರಿನ ಶ್ರೀ ಮಂಗಳಾದೇವಿಯರು ತ್ರಿವರ್ಣ ಧ್ವಜದಲಂಕಾರದಲ್ಲಿ ಕಂಗೊಳಿಸಿದ್ದಾರೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಗೆ ತ್ರಿವರ್ಣ ಧ್ವಜದ ಸೀರೆಯನ್ನು ಉಡಿಸಲಾಗಿದ್ದು, ತ್ರಿವರ್ಣ ಧ್ವಜದ ಮಾಲೆಯ ಅಲಂಕಾರವನ್ನೂ ಮಾಡಲಾಗಿದೆ. ಬಪ್ಪನಾಡಿನ ದುರ್ಗೆಯ ಪ್ರಭಾವಳಿಯನ್ನು ತ್ರಿವರ್ಣ ಧ್ವಜದಿಂದಲೇ ಅಲಂಕಾರ ಮಾಡಲಾಗಿದೆ.
ಅದೇ ರೀತಿ ಮಂಗಳೂರಿನ ಅಧಿದೇವತೆ ಶ್ರೀ ಮಂಗಳಾದೇವಿಗೆ ತಿರಂಗದ ಸೀರೆಯನ್ನೇ ಉಡಿಸಲಾಗಿದ್ದು, ತ್ರಿವರ್ಣ ಧ್ವಜದ ಹೂಗಳಿಂದಲೇ ಅಲಂಕಾರ ಮಾಡಲಾಗಿದೆ. ಒಟ್ಟಿನಲ್ಲಿ ದ.ಕ.ಜಿಲ್ಲೆಯ ದೇವತೆಗಳಿಗೆ ದೇಶಪ್ರೇಮ ಬೀರುವ ಅಲಂಕಾರ ಮಾಡಿದ್ದು, ಭಕ್ತರಲ್ಲೂ ದೇಶಭಕ್ತಿ ಜಾಗೃತಿ ಮೂಡಿಸುವಂತಾಗಿದೆ.