ರಾಜ್ಯ ಸುದ್ದಿ

77ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ಯಡವಟ್ಟು; ಉಲ್ಟಾ ಹಾರಿದ ರಾಷ್ಟ್ರ ಧ್ವಜ!

Published

on

ಕಲಬುರಗಿ, ಆ 15(Zoom Karnataka):77ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಧ್ವಜಾರೋಹಣ ವೇಳೆ ಕಲಬುರಗಿಯಲ್ಲಿ ಜೆಡಿಎಸ್​ ಮುಖಂಡರು ಯಡವಟ್ಟು ಮಾಡ್ಕೊಂಡಿದ್ದಾರೆ. ಜೆಡಿಎಸ್ ಕಚೇರಿಯಲ್ಲಿ ಧ್ವಜಾರೋಹಣ ವೇಳೆ ರಾಷ್ಟ್ರ ಧ್ವಜ ಉಲ್ಟಾ ಹಾರಿಸಿದ್ದಾರೆ.

ಕಲಬುರಗಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷ‌ ಸುರೇಶ್ ಮಹಾಗಾಂವಕರ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯುತ್ತಿತ್ತು. ಈ ವೇಳೆ ಉಲ್ಟಾ ಧ್ವಜಾರೋಹಣ ಮಾಡಿದ್ದಾರೆ. ಬಳಿಕ ಎಚ್ಚೆತ್ತುಕೊಂಡ ಅವರು ಧ್ವಜ ಅವರೋಹಣ ಮಾಡಿ ಮತ್ತೆ ಆರೋಹಣ ಮಾಡಿದ್ದಾರೆ.

ಅಂದಹಾಗೆಯೇ ಇಂದು 77ನೇ ಸ್ವಾತಂತ್ರ್ಯ ದಿನಾಚರಣೆಯಾಗಿದೆ. ದೇಶದ ಉದ್ದಗಲಕ್ಕೂ ಸಂಭ್ರಮಾಚರಣೆ ಮನೆ ಮಾಡಿದೆ. ಮನೆ ಮನೆಗಳಲ್ಲೂ, ಸರ್ಕಾರಿ ಶಾಲೆ, ಕಚೇರಿಗಳಲ್ಲಿ ಇಮದು ಧ್ವಜರೋಹಣ ಮಾಡಿತ್ತಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಮಣಿಕ್​ ಷಾ ಮೈದಾನದಲ್ಲಿ ಧ್ವಜಾರೋಹಣ ಮಾಡಿದರೆ. ಪ್ರಧಾನಿ ಮೋದಿ ಕೆಂಪು ಕೋಟೆ ಮೇಲೆ ತಿರಂಗ ಹಾರಿಸಿದ್ದಾರೆ

ADVT

Leave a Reply

Your email address will not be published. Required fields are marked *

Trending

Exit mobile version