ಕರಾವಳಿ

ಬಂಟ್ವಾಳದಲ್ಲಿ ರಾಜ ಧರ್ಮದ ಬಿಜೆಪಿಗರು ಭ್ರಷ್ಟಾಚಾರದಲ್ಲಿ ದೇವಸ್ಥಾನವನ್ನು ಬಿಟ್ಟಿಲ್ಲ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಮಗಾರಿಗಳು ಆಗದೇನೆ ಕಾಮಗಾರಿ ಆಗಿದೆ ಎಂದು ಬಿಂಬಿಸಿ ನಾಮಫಲಕಗಳನ್ನು ಹಾಕಿ ಸರಕಾರದ ಬೊಕ್ಕಸವನ್ನು ದೋಚಿದ್ದಾರೆ.

Published

on


ಬಂಟ್ವಾಳ ಬಂಟ್ವಾಳದಲ್ಲಿ ರಾಜ ಧರ್ಮದ ಬಿಜೆಪಿಗರು ಭ್ರಷ್ಟಾಚಾರದಲ್ಲಿ ದೇವಸ್ಥಾನವನ್ನು ಬಿಟ್ಟಿಲ್ಲ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಮಗಾರಿಗಳು ಆಗದೇನೆ ಕಾಮಗಾರಿ ಆಗಿದೆ ಎಂದು ಬಿಂಬಿಸಿ ನಾಮಫಲಕಗಳನ್ನು ಹಾಕಿ ಸರಕಾರದ ಬೊಕ್ಕಸವನ್ನು ದೋಚಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಉಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಶ್ರೀ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನ

ಕಕ್ಕೆ ಪದವು ಹಾಗೂ ಶ್ರೀ ಬ್ರಹ್ಮಬೈದಕಳ ಗರಡಿ ಕಕ್ಕೆ ಪದವು ಈ ಪುಣ್ಯ ಸಾನಿಧ್ಯದಲ್ಲಿ ನೆಲೆಸಿರುವ ಧರ್ಮದೈವಗಳ ಉತ್ಸವದ ಸಂದರ್ಭದಲ್ಲಿ ದೈವಗಳಿಗೆ ಬರುವ ಭಂಡಾರದ ಗುತ್ತಿನ ಮನೆಗೆ ಹಾದು ಹೋಗುವ ರಸ್ತೆಗೆ ಬಂಟ್ವಾಳದ ಶಾಸಕ ರಾಜೇಶ್ ನಾಯ್ಕ್ ರವರ ಶಿಫಾರಸಿನ ಮೇರೆಗೆ 2019 ನೇ ಸಾಲಿನಲ್ಲಿ ಪ್ರಕೃತಿ ವಿಕೋಪದ ಅಡಿಯಲ್ಲಿ 10 ಲಕ್ಷದ ಅನುದಾನವನ್ನು ಕೆ ಆರ್ ಐ ಡಿ ಎಲ್(K.R.I.D.L)ಇಲಾಖೆ ಮಂಗಳೂರು ಅನುದಾನವನ್ನು ಮಂಜೂರಾತಿ ಮಾಡಿದೆ. ಯಾವುದೇ ಕಾಮಗಾರಿಯನ್ನು ಮಾಡದೆ 10 ಲಕ್ಷದ ಅನುದಾನವನ್ನು ನುಂಗಿದವರು ಯಾರು.

ಕಾಮಗಾರಿ ಅದ ಮೇಲೆ ಹಾಕಲಾಗುವ ನಾಮಫಲಕವನ್ನು ತಂದು ಹಾಕಲಾಗಿದೆ. ದೇವಸ್ಥಾನದ ಅಭಿವೃದ್ಧಿಯ ಹೆಸರಿನಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ ಬಂಟ್ವಾಳದ ಬಿಜೆಪಿಗರು. ದೇವಸ್ಥಾನದ ಹೆಸರಿನಲ್ಲಿ ರಸ್ತೆಯ ಅಭಿವೃದ್ಧಿಯಲ್ಲಿ ಹಣವನ್ನು ನುಂಗಿದ್ದಾರೆ ಬಂಟ್ವಾಳದ ಬಿಜೆಪಿಗರು.

ಬಂಟ್ವಾಳದಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗಾಗಿ ಹಲವು ಇಲಾಖೆಗಳಿಂದ ಮಂಜುರಾತಿ ಯಾದ ಅನುದಾನ. ಹಾಗೂ ಕಾಮಗಾರಿಯನ್ನು ಸಂಪೂರ್ಣ ವೀಕ್ಷಣೆ ಮಾಡಿ ಮರು ತನಿಖೆಯನ್ನು ಮಾಡಿ. ಕಾಮಗಾರಿ ಮಾಡದೆ ಸರಕಾರಕ್ಕೆ ಆದ ನಷ್ಟವನ್ನು ವಿಶೇಷ ಅಧಿಕಾರಿಗಳ ಮುಖಾಂತರ ತನಿಖೆ ನಡೆಸುವಂತೆ ಸರಕಾರಕ್ಕೆ ಮನವಿಯನ್ನು ಮಾಡುತ್ತಿದ್ದೇವೆ.

Leave a Reply

Your email address will not be published. Required fields are marked *

Trending

Exit mobile version