ಹಾಸನ ಆ 13(Zoom Karnataka): ಕಳೆದ ಮೂರು ದಿನಗಳ ಹಿಂದೆ ಬುಧವಾರದಂದು ಹಾಸನ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಕೊಲೆ ನಡೆದ ಜೆಡಿಎಸ್ ಮುಖಂಡ ಕೃಷ್ಣೇಗೌಡ ಹತ್ಯೆ ಪ್ರಕರಣದ ಆರೋಪದಲ್ಲಿ ಆರು ಜನರ ಬಂಧಿಸಲಾಗಿದೆ ಉಳಿದ ಮುಖ್ಯ ಆರೋಪಿ ಯೋಗಾನಂದ್ ಹಾಗೂ ಇತರೆ ೫ ಜನರನ್ನು ಶೀಘ್ರ ಬಂಧಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿ ಸಭಾಂಗಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಜೆಡಿಎಸ್ ಮುಖಂಡನ ಕೊಲೆ ಮಾಡಲು ಕಳೆದ ಆರು ತಿಂಗಳ ಹಿಂದೆಯೇ ಒಂದು ಪ್ಲಾನ್ ಮಾಡಿ ಹತ್ಯೆ ಮಾಡಿರೊ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿ, ಈ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಮೃತ ಕೃಷ್ಣೇಗೌಡ ಜೊತೆಗೆ ಮೊದಲು ಸ್ನೇಹ ಸಂಪಾದನೆ ಮಾಡಿ, ಒಂದು ಸ್ಥಳೀಯ ಚಾನಲ್ ಹಾಗು ಸಿನಿಮಾಗೆ ಹೂಡಿಕೆಯನ್ನು ಯೋಗಾನಂದ್ ಮಾಡಿಸಲಾಗಿತ್ತು. ಕೋಟಿ ಕೋಟಿ ಹೂಡಿಕೆ ಮಾಡಿಸಿ ವಂಚನೆ ಮಾಡಿದ ಆರೋಪದಲ್ಲಿ ಯೋಗಾನಂದ್ ಜೊತೆ ಕೃಷ್ಣೇಗೌಡ್ರು ಜಗಳ ಮಾಡಿಕೊಂಡಿದ್ದರು. ಹಣ ವಾಪಸ್ ಕೊಡುವಂತೆ ಒತ್ತಾಯಿಸಿ ಈ ವಿಚಾರದಲ್ಲಿ ೨೦೨೨ರ ನವೆಂಬರ್ ನಲ್ಲಿ ಯೋಗಾನಂದ್ ನನ್ನ ಅಪಹರಿಸಿ ಹಲ್ಲೆ ಮಾಡಿದ ಬಗ್ಗೆ ಹಾಸನ ಗ್ರಾಮಾಂತರ ಠಾಣೆಗೆ ಯೋಗಾನಂದ್ ದೂರು ನೀಡಿದ್ದರು. ಇದರ ಪ್ರತಿಯಾಗಿ ಯೋಗಾನಂದ್ ವಿರುದ್ಧ ವಂಚನೆ ಆರೋಪದಲ್ಲಿ ದೂರು ಕೃಷ್ಣೇಗೌಡ ಕೂಡ ಪೊಲೀಸ್ ಠಾಣೆಯಲ್ಲಿ ದುರು ದಾಖಲಿಸಿದ್ದರು. ಕೃಷ್ಣೇಗೌಡ ನನ್ನ ಕೊಲೆ ಮಾಡಿದರೆ ಕೊಟಿ ಕೋಟಿ ಹಣ ಕೊಡೋದು ಉಳಿಯಲಿದೆ ಎಂದು ಕೊಲೆಗೆ ಸ್ಕೆಚ್ ಮಾಡಲಾಗಿತ್ತು. ಆರು ತಿಂಗಳಿಂದ ಸಂಚು ರೂಪಿಸಿ ಹತ್ಯೆಗೆ ಪ್ಲಾನ್ ಮಾಡಿದ್ದ ಆರೋಪಿಗಳು. ಸುಫಾರಿ ಕೊಟ್ಟು ಅಗಸ್ಟ್ ೯ ರಂದು ಮದ್ಯಾಹ್ನ ಆರೋಪಿಗಳು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದರು. ಕೊಲೆ ಆರೋಪದ ಹಿನ್ನೆಲೆಯಲ್ಲಿ ಆರು ಜನರ ಬಂಧಿಸಲಾಗಿದ್ದು, ಯೋಗಾನಂದ್ ಸ್ಥಳೀಯ ಚಾನಲ್ ನ ಪಾಲುದಾರ ಸುರೇಶ್, ಯೋಗಾನಂದ್ ಪತ್ನಿ ಸುಧಾರಾಣಿ, ಯೋಗಾನಂದ್ ಗೆಳತಿ ಅಶ್ವಿನಿ, ಯೋಗಾನಂದ್ ಮಾವ ಕೃಷ್ಣ ಕುಮಾರ್, ಸಂಬಂದಿ ಸಂಜಯ್ ಹಾಗು ಸಂಜಯ್ ಪತ್ನಿ ಚೈತ್ರ ಬಂದಿತ ಆರೋಪಿಗಳು. ಕೊಲೆಮಾಡಿ ತಲೆ ಮರೆಸಿಕೊಂಡು ಸಿಕ್ಕಿ ಬಿದ್ದಿದ್ದಾರೆ. ಕೊಲೆ ಸಂಚಿನ ಪ್ರಮುಖ ಆರೋಪಿ ಯೋಗಾನಂದ್ ಹಾಗು ಹತ್ಯೆ ಮಾಡಿದ ಆರೋಪಿಗಳು ಇದ್ದಾರೆ ಎಂದರು.ಚನ್ನರಾಯಪಟ್ಟಣ ತಾಲ್ಲೂಕು ಕೂರದಹಳ್ಳಿ ಗ್ರಾಮದ ಕಾರು ಚಾಲಕ ವೆಂಕಟೇಶ್ ಸಂಜೀವ ಬಿನ್ ಮಂಜೇಗೌಡ, ಕೆ.ಟಿ. ೨೩ ವರ್ಷ, ಹಾಸನದ ಚನ್ನಪಟ್ಟಣದ ಬೊಮ್ಮನಾಯಕನಹಳ್ಳಿ ರಸ್ತೆ, ಹೆಚ್ ಗ್ಯಾಸ್ ಗೋಡನ್ ಎದುರು ಇರುವ ಎಂ. ಸುರೇಶ್ ಬಿನ್ ತಬ್ಬೇಗೌಡ, ೪೪ ವರ್ಷ, ಚನ್ನರಾಯಪಟ್ಟಣ ತಾಲ್ಲೂಕು ಪಡುವನಹಳ್ಳಿ ಗ್ರಾಮದ ಟ್ರೈಲರ್ ಕೆಲಸ ಮಾಡುವ ಎಂ. ಕೃಷ್ಣಕುಮಾರ್ ೫೫ ವರ್ಷ, ಕೆ.ಎಸ್.ಆರ್.ಟಿ.ಸಿ. ಕ್ವಾಟ್ರಸ್ ರಸ್ತೆ ವಾಸಿ ಪಬ್ಲಿಕ್ ಸ್ಟಾರ್ ಪತ್ರಿಕೆಯ ಸಂಪದಾಕಿ ಪಿ.ಕೆ. ಸುಧಾರಾಣಿ ಕೋಂ ಹೆಚ್.ವಿ. ಯೋಗಾನಂದ ೩೪ ವರ್ಷ, ಚನ್ನರಾಯಪಟ್ಟಣ ತಾಲ್ಲೂಕು ಮುಡುವನಹಳ್ಳಿ ಗ್ರಾಮದ ಐ.ವಿ. ಚೈತ್ರಾ ಕೋಂ ಮಂಜುನಾಥ ಬಿ.ಕೆ. ೨೨ ವರ್ಷ, ಹಾಸನ ನಗರದ ಉದಯಗಿರಿ ೨ನೇ ಹಂತ ಹೋಂ ಗಾರ್ಡ್ ಆಫೀಸ್‌ನಲ್ಲಿ ಎಸ್‌ಡಿಎ ಕೆಲಸ ಎಂ. ಅಶ್ವಿನಿ ಕೋಂ ವಿಜಯಕಾಂತ್ ೩೬ ವರ್ಷ ಎಂಬುವರೆ ಹತ್ಯೆ ಪ್ರಕರಣದಲ್ಲಿ ಸೆರೆಯಾದ ಆರು ಜನ ಆರೋಪಿಗಳು ಎಂದು ಮಾಹಿತಿ ನೀಡಿದರು. ಮುಖ್ಯ ಆರೋಪಿ ಯೋಗಾನಂದ್ ಸೇರಿದಂತೆ ಉಳಿದ ಐದಾರು ಜನ ಆರೋಪಿಗಳ ಸೆರೆಗಾಗಿ ಪೊಲೀಸ್ ವಿಶೇಷ ತಂಡ ತನಿಖೆ ಮುಂದುವರೆಸಿದ್ದು, ಶೀಘ್ರ ಬಂದಿಸುವ ವಿಶ್ವಾಸವ್ಯಕ್ತಪಡಿಸಿದರು.