ವಿಟ್ಲ :ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಗೆ ಸಂಬಂಧಪಟ್ಟ ವಿಧ್ಯಾರ್ಥಿನಿಯರ ನಿಲಯದಲ್ಲಿ ವಿದ್ಯಾರ್ಥಿನಿಯರಿಗೆ ತಾಲೂಕಿನ ಮಕ್ಕಳ ಕಲ್ಯಾಣಾಧಿಕಾರಿ, ನಿಲಯದ ಮೇಲ್ವಿಚಾರಕಿ, ಅಡಿಗೆ ಸಿಬ್ಬಂದಿಗಳು ವಿಧ್ಯಾರ್ಥಿನಿಯರ ಮೇಲೆ ದೌಜನ್ಯ
ವಿಟ್ಲ ಆ 12(Zoom Karnataka): ಬಂಟ್ವಾಳ ತಾಲೂಕಿನ ವಿಟ್ಲದಲ್ಲಿರುವ ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಗೆ ಸಂಬಂಧಪಟ್ಟ ವಿಧ್ಯಾರ್ಥಿನಿಯರ ನಿಲಯದಲ್ಲಿ ವಿಧ್ಯಾರ್ಥಿನಿಯರಿಗೆ ತಾಲೂಕಿನ ಮಕ್ಕಳ ಕಲ್ಯಾಣಾಧಿಕಾರಿ, ನಿಲಯದ ಮೇಲ್ವಿಚಾರಕಿ, ಅಡಿಗೆ ಸಿಬ್ಬಂದಿಗಳು ವಿದ್ಯಾರ್ಥಿನಿಯರ ಮೇಲೆ
ದೌಜನ್ಯ ಎಸಗಿದ್ದಾರೆ ಎಂದು ರಾಜ್ಯದ ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಯ ಸಚಿವರಿಗೆ ಬರೆದ ಪತ್ರ ಸಾಮಾಜಿಕ ಜಾಣತಾಣದಲ್ಲಿ ಹರಿದಾಡುತ್ತಿದೆ. ಅದೆಷ್ಟೋ ಬಡ ಮಕ್ಕಳು ತಮ್ಮ ಹೆತ್ತವರನ್ನು ಬಿಟ್ಟು ಸರಕಾರದ ಮೂಲಸೌಕರ್ಯಗಳನ್ನು ಹೊಂದಿದ ದಕ್ಷಿಣ ಕನ್ನಡ ಜಿಲ್ಲೆಗೆ ವಿದ್ಯಾಭ್ಯಾಸಕ್ಕಾಗಿ ಜಿಲ್ಲೆಯ ಶಾಲಾ ಕಾಲೇಜು ಸರಕಾರಿ ವಸತಿ ನಿಲಯದಲ್ಲಿ ವಾಸ್ತವ ಹೂಡುತ್ತಾರೆ. ವಿಧ್ಯಾರ್ಥಿ ನಿಲಯದಲ್ಲಿ ವಾಸ್ತವವಿರುವ ವಿಧ್ಯಾರ್ಥಿಗಳ ರಕ್ಷಣೆ ಕೂಡ ಅಧಿಕಾರಿ ವರ್ಗದವರ ಹೊಣೆಯಾಗಿರುತ್ತದೆ. ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿನಿಯರ
ವಿಧ್ಯಾರ್ಥಿ ನಿಲಯದಲ್ಲಿ ಇದ್ದಾರೆಯೇ.? ಅವರು ಆರೋಗ್ಯವಾಗಿ ಇದ್ದಾರೆಯೇ.? ಎಂದು ತಕ್ಷಣವೇ ಅಧಿಕಾರಿ ವರ್ಗದವರು ವಿಧ್ಯಾರ್ಥಿನಿಯರು ಬರೆದ ಪತ್ರದ ಬಗ್ಗೆ ಸತ್ಯಾಸತ್ಯತೆಯನ್ನು ಅರಿತು ವಿಧ್ಯಾರ್ಥಿನಿಯರಿಗೆ ನ್ಯಾಯವನ್ನು ಒದಗಿಸಿ ಕೊಡಬೇಕಾಗಿ ಕೋರುತ್ತಿದ್ದೇವೆ.