ಧಾರ್ಮಿಕ

ರಾಜ್ಯದ ನಂ 1 ಶ್ರೀಮಂತ ದೇಗುಲ ಕುಕ್ಕೆ ಸುಬ್ರಹ್ಮಣ್ಯ

Published

on

ಬೆಂಗಳೂರು, ಜು 1(Zoom Karnataka): ವಾರ್ಷಿಕ 123.64 ಕೋಟಿ ಆದಾಯ ಹೊಂದಿರುವ ಕುಕ್ಕೆಯ ಸುಬ್ರಹ್ಮಣ್ಯ ದೇವಾಲಯ ರಾಜ್ಯದ ಶ್ರೀಮಂತ ಮುಜರಾಯಿ ದೇವಾಲಯ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

2022-23 ಅವಧಿಯಲ್ಲಿ ದೇವಾಲಯಗಳು ಗಳಿಸಿರುವ ಒಟ್ಟು ಆದಾಯ ಮತ್ತು ಒಟ್ಟು ವೆಚ್ಚದ ಪಟ್ಟಿಯನ್ನು ಮುಜರಾಯಿ ಇಲಾಖೆ ಬಿಡುಗಡೆ ಮಾಡಿದ್ದು ಇದರಲ್ಲಿ ನಾಗಾರಾಧನೆಯ ಪ್ರಸಿದ್ದ ಕ್ಷೇತ್ರ ಕಡಬ ತಾಲೂಕಿ ನಲ್ಲಿರುವ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮೊದಲ ಅಗ್ರ ಸ್ಥಾನ ಪಡೆದಿದೆ. ಕೊಲ್ಲೂರಿನ ಶ್ರೀ ಮೂಕಾ೦ಬಿಕಾ ದೇವಸ್ಥಾನ, ಮೈಸೂರಿನ ಚಾಮುಂಡಿ ಬೆಟ್ಟಿದಲ್ಲಿರುವ ಶ್ರೀ
ಚಾಮುಂಡೇಶ್ವರಿ ದೇವಸ್ಥಾನ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನವನ್ನು ಪಡೆದಿದೆ.

ಕುಕ್ಕೆ ದೇವಸ್ಥಾನದ 2022-23ನೇ ಸಾಲಿನ ಆದಾಯ 123.64 ಕೋಟಿ ರೂ. ಆಗಿದ್ದು ವೆಚ್ಚ 63.77 ಕೋಟಿ ರೂ.ಗಳಾಗಿವೆ. ಕೊಲ್ಲೂರು ಶ್ರೀ ಮೂಕಾ೦ಬಿಕಾ ದೇವಸ್ಥಾನದ ಆದಾಯ 59.47 ಕೋಟಿ
ರೂ.ವೆಚ್ಚ 33.32 ಕೋಟಿ ರೂ.ಗಳಾಗಿದ್ದು, ಮೈಸೂರು ಚಾಮುಂಡೇಶ್ವರಿ ದೇವಸ್ಥಾನದ ಆದಾಯ 52.40 ಕೋಟಿ ರೂ. ವೆಚ್ಚ 52.40 ಕೋಟಿ ರೂ. ಆಗಿದೆ.

ನಾಲ್ಕನೇ ಸ್ಥಾನದಲ್ಲಿ ಎಡೆಯೂರು ಶ್ರೀ ಸಿದ್ದಲಿ೦ಗೇಶ್ವರ ದೇವಸ್ಥಾನ, ಐದನೇ ಸ್ಥಾನದಲ್ಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವಿದೆ.

ನ೦ಜನಗೂಡು ಶ್ರೀಕ೦ಠೇಶ್ವರ ಸ್ವಾಮಿ ದೇವಾಲಯದ ಸವದತ್ತಿ ಶ್ರೀ ರೇಣುಕಾ ಎಲ್ಲಮ್ಮ ದೇವಸ್ಥಾನ, ಮಂದರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ದೊಡ್ಡಬಳ್ಳಾಪುರ ಘಾಟಿ ಸುಬ್ರಹ್ಮಣ್ಯ ಸ್ವಾಮಿ, ಬೆಂಗಳೂರು ಬನಶಂಕರಿ ದೇವಸ್ಥಾನ ಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆದುಕೊಂಡಿದೆ.

Leave a Reply

Your email address will not be published. Required fields are marked *

Trending

Exit mobile version