ಕರಾವಳಿ

ಐರ್ಲೆಂಡ್ ಡಬ್ಲಿನ್ ನಲ್ಲಿ ‘ಐರಿಶ್ ತುಳುನಾಡು ಸಂಘ’ ಹುಟ್ಟುಹಾಕಿದ ತುಳುವರು

Published

on

ಡಬ್ಲಿನ್, ಜೂ 29(Zoom Karnataka): ಐರ್ಲೆಂಡ್ ನಲ್ಲಿ ಡಬ್ಲಿನ್ ಮತ್ತು ಸುತ್ತಮುತ್ತಲಿನ ಪ್ರದೇಶದ ಎಲ್ಲಾ ತುಳುವರು ಸೇರಿ “ಐರಿಶ್ ತುಳುನಾಡು ಸಂಘ”ವನ್ನು ಹುಟ್ಟುಹಾಕಿದ್ದು, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಗುಣಶೀಲ ಶೆಟ್ಟಿ, ಸ್ಟೆಲ್ಲಾ ಕೊರ್ಡಾ, ಮೋಹನ್ ಮತ್ತು ಹೇಮಲತಾ ದೀಪ ಬೆಳಗಿಸುವುದರೊಂದಿಗೆ ಸುಧಾ ಗುರುನಂದನ್ ಶ್ಲೋಕ ಪಠಿಸುವುದರೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಭಾರತದ ಹಿತೈಷಿಗಳಾದ ಕೋಸ್ಟಲ್‌ವುಡ್ ಬರಹಗಾರ-ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್, ಸ್ಯಾಂಡಲ್‌ವುಡ್ ಸಂಗೀತ ನಿರ್ದೇಶಕ ಗುರುಕಿರಣ್, ದಾಯ್ಜಿವಲ್ಡ್ ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ, ನಟರಾದ ಪ್ರಕಾಶ್ ತೂಮಿನಾಡ್, ಶಿವದ್ವಾಜ್, ರೂಪಶ್ರೀ ವರ್ಕಾಡಿ, ವಿಜಯ್ ಶೋಭರಾಜ್ ಪಾವೂರು ಮತ್ತು ಹಿನ್ನೆಲೆ ಗಾಯಕ ರಮೇಶ್ ಚಂದ್ರ ವೀಡಿಯೊ ಸಂದೇಶಗಳ ಮೂಲಕ ನೂತನ ಸಂಘಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಇಲ್ಯಾಸ್ ಹುಸೇನ್, ಸಜಿತ್ ಶೆಟ್ಟಿ, ಚೈತ್ರಾ ಶೆಟ್ಟಿ, ಗೌತಮ್ ಶೆಟ್ಟಿ ಮತ್ತು ಪ್ರಾರ್ಥನಾ ರೈ ಉತ್ತಮವಾಗಿ ನಿರ್ವಹಿಸಿದ್ದು, ಇಲ್ಯಾಸ್ ಹುಸೇನ್ ಕಾರ್ಯಕ್ರಮ ನಿರೂಪಿಸಿದರು. ಚೈತ್ರಾ ಶೆಟ್ಟಿ ವಂದಿಸಿದರು.
ಐರ್ಲೆಂಡ್‌ನಲ್ಲಿ ನೆಲೆಸಿರುವ ಕರಾವಳಿ ಭಾಗದ ಜನರಿಗೆ ಸಾಮಾನ್ಯ ವೇದಿಕೆಯನ್ನು ಒದಗಿಸುವ ಉದ್ದೇಶದಿಂದ ಐರಿಶ್ ತುಳುನಾಡು ಸಂಘವನ್ನು ರಚಿಸಲಾಗಿದ್ದು, ಸಂಘದ ಮೂಲಕ ತುಳುನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಆಚರಿಸಲು ಮತ್ತು ಸದಸ್ಯರ ನಡುವೆ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವುದು ಸಂಘದ ಪ್ರಮುಖ ಉದ್ದೇಶವಾಗಿದೆ.
ಕಲೆ, ಸಾಂಸ್ಕೃತಿಕ ಪ್ರದರ್ಶನಗಳು, ನಾಟಕ, ಸಂಗೀತ ಮತ್ತು ನೃತ್ಯ, ಮತ್ತು ವೈವಿಧ್ಯಮಯ ಪಾಕಗಳು ಹೀಗೆ ತಾಯ್ನಾಡಿನ ಸಂಪ್ರದಾಯಗಳ ಆಚರಣೆಗಳನ್ನು ಒಟ್ಟಾಗಿ ಆಚರಿಸಲು ಸಂಘ ಅವಕಾಶ ಕಲ್ಪಿಸುತ್ತದೆ.
ಐರಿಶ್ ತುಳುನಾಡು ಸಂಘವು ಒಂದು ಸಮುದಾಯವಾಗಿ ಒಗ್ಗೂಡುವ ಮೂಲಕ, ಅವರು ತಮ್ಮ ಅನುಭವಗಳು,ಹವ್ಯಾಸ, ಟ್ಯಾಲೆಂಟ್ ಗಳನ್ನು ಹಂಚಿಕೊಳ್ಳಲು, ಪ್ರದರ್ಶಿಸಲು ವೇದಿಕೆಯಾಗುವುದಲ್ಲದೇ ಬಹುಸಂಸ್ಕೃತಿಯ ಕುರಿತು ಜ್ಞಾನ ಮತ್ತು ಆಚರಣೆಗಳನ್ನುಆಚರಿಸುವ ಮೂಲಕ, ಸಂಸ್ಥೆಯು ಸಮುದಾಯಗಳ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತದೆ.

Leave a Reply

Your email address will not be published. Required fields are marked *

Trending

Exit mobile version