ಉದ್ಯೋಗ

ಸ್ವ ಉದ್ಯೋಗಕ್ಕೆ ಬ್ಯಾಂಕ್ ಮೂಲಕ ಸಾಲ ಅವಕಾಶ

Published

on

ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ ನಿರುದ್ಯೋಗಿ ಯುವಕ ಯುವತಿಯರಿಗೆ ಸ್ವ ಉದ್ಯೋಗ ಕೈಗೊಳ್ಳಲು ಬ್ಯಾಂಕುಗಳ ಮೂಲಕ ಸಾಲ/ ಸಹಾಯಧನ ಸೌಲಭ್ಯ ನೀಡುವ ಅವಕಾಶವಿದೆ.
ಈ ಯೋಜನೆಯಲ್ಲಿ ಸ್ವ ಉದ್ಯೋಗ ಕೈಗೊಳ್ಳಲು ಆಸಕ್ತರಿರುವ ಯುವಕ /ಯುವತಿಯರು ಅನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಹತೆ: ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಉತ್ಪಾದನಾ ಚಟುವಟಿಕೆಗಳಿಗೆ ಯೋಜನಾ ವೆಚ್ಚ 50 ಲಕ್ಷ ರೂ. ಸೇವಾ ಚಟುವಟಿಕೆಗಳಿಗೆ ಯೋಜನಾ ವೆಚ್ಚ 20 ಲಕ್ಷ ರೂ., ಉತ್ಪಾದನಾ ಚಟುವಟಿಕೆ 10 ಲಕ್ಷ ರೂ. ಮೇಲಿನ ಯೋಜನೆಗಳಿಗೆ ಕನಿಷ್ಠ 8ನೇ ತರಗತಿ ತೇರ್ಗಡೆ ಹೊಂದಿರಬೇಕು.
ಸೇವಾ ಚಟುವಟಿಕೆಗಳಿಗೆ 5 ಲಕ್ಷ ರೂ. ಮೇಲಿನ ಯೋಜನೆಗಳಿಗೆ ಕನಿಷ್ಠ 8ನೇ ತರಗತಿ ತೇರ್ಗಡೆ ಹೊಂದಿರಬೇಕು. ಈ ಯೋಜನೆಯಲ್ಲಿ ಹೊಸ ಘಟಕಗಳಿಗೆ ಮಾತ್ರ ಅವಕಾಶವಿರುತ್ತದೆ. ಇತರ ಸ್ವಯಂ ಉದ್ಯೋಗ ಯೋಜನೆಯಡಿಯಲ್ಲಿ ಸಹಾಯಧನವನ್ನು ಪಡೆದಿದ್ದಲ್ಲಿ ಈ ಯೋಜನೆ ಫಲಾನುಭವಿಯಾಗಲು ಅರ್ಹತೆ ಇರುವುದಿಲ್ಲ.
ಫಲಾನುಭವಿಗಳು ಭರಿಸಬೇಕಾದ ಪಾಲು ಹಾಗೂ ಲಭ್ಯವಿರುವ ಸಹಾಯಧನಗಳ ವರ್ಗೀಕರಣ ವಿವರ: ಲಾನುಭವಿಗಳು ಸಾಮಾನ್ಯ ವರ್ಗದಲ್ಲಿ ಲಾನುಭವಿಯ ವಂತಿಗೆ 10 ಶೇ. ಸಹಾಯಧನ, ನಗರವಾಸಿಗಳಿಗೆ 15 ಶೇ. ಹಾಗೂ ಗ್ರಾಮೀಣ ಪ್ರದೇಶದವರಿಗೆ 25 ಶೇ. ದೊರೆಯುವುದು.
ವಿಶೇಷ ವರ್ಗದಲ್ಲಿ (ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗ/ ಹಿಂದುಳಿದ ವರ್ಗ/ ಅಲ್ಪಸಂಖ್ಯಾತರು/ಮಹಿಳೆಯರು/ ಮಾಜಿ ಸೈನಿಕರು/ ಅಂಗವಿಕಲರು) ಲಾನುಭವಿಯ ವಂತಿಗೆ 5 ಶೇ. ಸಹಾಯಧನ ನಗರವಾಸಿಗಳಿಗೆ 25 ಶೇ. ಹಾಗೂ ಗ್ರಾಮೀಣ ಪ್ರದೇಶದವರಿಗೆ 35 ಶೇ. ದೊರೆಯುವುದು.
ಆನ್‌ಲೈನ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ. ಅರ್ಜಿ ಸಲ್ಲಿಸಿದ ನಂತರ ಅಭ್ಯರ್ಥಿಗಳ ದಾಖಲಾತಿಗಳನ್ನು ಪರಿಶೀಲನೆ ಮಾಡಿ ನಂತರ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಂಬಂಧಿಸಿದ ಬ್ಯಾಂಕ್‌ಗಳಿಗೆ ಕಳುಹಿಸಲಾಗುವುದು. ಅರ್ಜಿ ಸಲ್ಲಿಕೆ ನಂತರ ವಿವಿಧ ಹಂತಗಳ ಪ್ರಗತಿಯನ್ನು ಆನ್‌ಲೈನ್‌ನಲ್ಲಿ ಸ್ಟೇಟಸ್ ನೋಡಬಹುದು.
ಆನ್‌ಲೈನ್‌ನಲ್ಲಿ ಅರ್ಜಿ ಹಾಕಲು ಏಜೆನ್ಸಿ ಹೆಸರು ಡಿಐಸಿ ಎಂದು ನಮೂದಿಸಬೇಕು.
PMEGP WEBSITE: www.kviconline.gov.in/pmegpeportal
ಹೆಚ್ಚಿನ ಮಾಹಿತಿಗೆ ಜಂಟಿ ನಿರ್ದೇಶಕರ ಕಚೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಇಂಡಸ್ಟ್ರಿಯಲ್ ಎಸ್ಟೇಟ್, ಯೆಯ್ಯಡಿ, ದಕ್ಷಿಣ ಕನ್ನಡ, ಮಂಗಳೂರು ಕಚೇರಿ (0824 2214021.) ಸಂಪರ್ಕಿಸುವಂತೆ ಸೂಚಿಸಲಾಗಿದೆ.

Leave a Reply

Your email address will not be published. Required fields are marked *

Trending

Exit mobile version