ಕ್ರಿಕೆಟ್ ನ್ಯೂಸ್

ಅಕ್ಟೋಬರ್ ನಲ್ಲಿ ನಡೆಯಲಿದೆ ಏಕದಿನ ವಿಶ್ವ ಕಪ್ 2023ರ ಪಂದ್ಯ

Published

on

Zoom Karnataka ನವದೆಹಲಿ, ಜೂ. 15 : ಏಕದಿನ ವಿಶ್ವ ಕಪ್ 2023ರ ಕರಡು ವೇಳಾಪಟ್ಟಿ ಬಿಡುಗಡೆಯಾಗಿದೆ. ಅದರ ಪ್ರಕಾರ, ಅಕ್ಟೋಬರ್ 8 ರಂದು ಅಹಮದಾಬಾದ್ ನಲ್ಲಿ ಸಾಂಪ್ರದಾಯಿಕ ಎದುರಾಳಿ ತಂಡಗಳಾದ ಭಾರತ- ಪಾಕಿಸ್ತಾನ ಮುಖಾಮುಖಿಯಾಗಲಿವೆ.

ಭಾರತ ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಮೂಲಕ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ. ಆದರೆ ಒಂದು ವಾರದ ನಂತರ ಅಹಮದಾಬಾದ್ ನ ಪ್ರಧಾನಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಾಕಿಸ್ತಾನದ ವಿರುದ್ಧ ಬಹು ನಿರೀಕ್ಷಿತ ಪಂದ್ಯವನ್ನು ಆಡಲಿದೆ.

ಮುಂದಿನ ವಾರದ ಆರಂಭದಲ್ಲಿ ಅಂತಿಮ ವೇಳಾಪಟ್ಟಿ ಹೊರಬೀಳಲಿದೆ. ಇದಕ್ಕೂ ಮುಂಚೆ ಟೂರ್ನಿಯಲ್ಲಿ ಭಾಗವಹಿಸುವ ದೇಶಗಳಿಗೆ ಕರಡು ವೇಳಾಪಟ್ಟಿಯನ್ನು ಪ್ರತಿಕ್ರಿಯೆಗಾಗಿ ಕಳುಹಿಸಲಾಗಿದೆ ಎಂದು ಇಎಸ್ ಪಿಎನ್ ಕ್ರಿಕ್ ಇನ್ಫೋ ಸೋಮವಾರ ವರದಿ ಮಾಡಿದೆ. ಆರಂಭಿಕ ಡ್ರಾಫ್ಟ್ ಪ್ರಕಾರ, ಪಂದ್ಯಾವಳಿಯು ಅಕ್ಟೋಬರ್ 5 ರಂದು ಅಹಮದಾಬಾದ್‌ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್, ಕಳೆದ ಆವೃತ್ತಿಯ ರನ್ನರ್ ಅಪ್ ತಂಡ ನ್ಯೂಜಿಲೆಂಡ್ ಎದುರಿಸಲಿದೆ. ಈ ಕ್ರೀಡಾಂಗಣ ನವೆಂಬರ್ 19 ರಂದು ಫೈನಲ್‌ಗೆ ಆತಿಥ್ಯ ವಹಿಸಲಿದೆ.

ನವೆಂಬರ್ 15 ಮತ್ತು 16 ರಂದು ನಡೆಯಲಿರುವ ಸೆಮಿಫೈನಲ್ ಪಂದ್ಯಗಳ ಸ್ಥಳಗಳನ್ನು ಇನ್ನೂ ನಿರ್ಧರಿಸಲಾಗಿಲ್ಲ. 2011 ರಲ್ಲಿ ಸ್ವದೇಶದಲ್ಲಿ ಕೊನೆಯ ಬಾರಿಗೆ ODI ವಿಶ್ವಕಪ್ ಗೆದ್ದ ಆತಿಥೇಯ ಭಾರತ, ಕೋಲ್ಕತ್ತಾ, ಮುಂಬೈ, ನವದೆಹಲಿ ಮತ್ತು ಬೆಂಗಳೂರು ಸೇರಿದಂತೆ ಒಂಬತ್ತು ನಗರಗಳಲ್ಲಿ ಲೀಗ್ ಹಂತದ ಪಂದ್ಯಗಳನ್ನು ಆಡಲಿದೆ. ಅಕ್ಟೋಬರ್ 15 ರಂದು ಪಾಕಿಸ್ತಾನವನ್ನು ಎದುರಿಸಲಿದ್ದಾರೆ. ಇದೇ ವೇಳೆ ಪಾಕಿಸ್ತಾನವು ತನ್ನ ಲೀಗ್ ಪಂದ್ಯಗಳನ್ನು ಐದು ನಗರಗಳಲ್ಲಿ ಆಡಲಿದೆ.

Leave a Reply

Your email address will not be published. Required fields are marked *

Trending

Exit mobile version