ಮನೋರಂಜನೆ

ಬಹುಬಾಷಾ ನಟ ಖಳನಟನ ಪಾತ್ರದಲ್ಲಿ ಅಭಿನಯಿಸಿದ್ದ ಕಜಾನ್​ ಖಾನ್​ ಹೃದಯಾಘಾತದಿಂದ ನಿಧನ

Published

on

ಬಹುಬಾಷಾ ನಟ ಖಳನಟನ ಪಾತ್ರದಲ್ಲಿ ಅಭಿನಯಿಸಿದ್ದ ಕಜಾನ್​ ಖಾನ್​ ಹೃದಯಾಘಾತದಿಂದ ನಿಧನ

ಕೊಚ್ಚಿ, ಜೂ 13 (Zoom Karnataka): ಬಹುಬಾಷಾಯಲ್ಲಿ ಅಭಿನಯಿಸಿದ್ದ ಕನ್ನಡ ಚಿತ್ರಗಳಲ್ಲಿ ಖಳನಟನಾಗಿ ಮಿಂಚಿದ್ದ ಕಜಾನ್​ ಖಾನ್​ ಅವರು ಹೃದಯಾಘಾತದಿಂದ ಕೊಳೆಯುಸಿರೆಳೆದಿದ್ದಾರೆ.

ಹಬ್ಬ, ನಾಗದೇವತೆ ಹೀಗೆ ಕನ್ನಡ ಸಿನಿಮಾದಲ್ಲಿ ಅಭಿನಯಿಸಿದ್ದ ಕಜಾನ್​ ಖಾನ್ 1993 ರಲ್ಲಿ ಮೋಹನ್ ಲಾಲ್ ಅವರ ‘ಗಂಧರ್ವಂ’ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗವನ್ನು ಪ್ರವೇಶಿಸಿದ್ದರು.ಮಲಯಾಳಂ ನಟ ದಿಲೀಪ್ ಅಭಿನಯದ ‘ಸಿಐಡಿ ಮೂಸಾ’ ಚಿತ್ರದಲ್ಲಿನ ವಿಲನ್​ ಪಾತ್ರಕ್ಕಾಗಿ ಕಜನ್ ಖಾನ್ ಬಹಳ ಮೆಚ್ಚುಗೆಯನ್ನು ಪಡೆದರು.

ಕಜಾನ್​ ಖಾನ್​, ನಿಧನದ ಸುದ್ದಿಯನ್ನು ಮಲಯಾಳಂ ಚಿತ್ರರಂಗದ ಖ್ಯಾತ ಪ್ರೊಡಕ್ಷನ್ ಕಂಟ್ರೋಲರ್ ಮತ್ತು ನಿರ್ಮಾಪಕ ಎನ್. ಎಂ ಬಾದುಷಾ ಅವರು ಅಧಿಕೃತವಾಗಿ ಖಚಿತಪಡಿಸಿದ್ದಾರೆ.ಕಜಾನ್​ ಖಾನ್​ ಅವರು ಆ ಕಾಲದಲ್ಲಿಯೇ ದಕ್ಷಿಣ ಭಾರತದ ಹ್ಯಾಂಡ್​ಸಮ್​ ಖಳನಟ ಎಂಬ ಹೆಸರು ಪಡೆದುಕೊಂಡಿದ್ದರು.

ಕಜಾನ್ ಖಾನ್ ಅವರ ಹಠಾತ್ ನಿಧನವು ಮಲಯಾಳಂ, ತಮಿಳು ಮತ್ತು ಕನ್ನಡ ಚಿತ್ರರಂಗದ ಎಲ್ಲರಿಗೂ ದೊಡ್ಡ ಆಘಾತವನ್ನುಂಟು ಮಾಡಿದೆ.

Leave a Reply

Your email address will not be published. Required fields are marked *

Trending

Exit mobile version