Zoom Karnataka : ಉಡುಪಿ ಜೂ,08 :
ಕರಾವಳಿ ಜಿಲ್ಲೆಗಳ ಪ್ರವಾಸದಲ್ಲಿರುವ ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ ಇಂದು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿದ್ದಾರೆ. ಕೊಲ್ಲೂರು ಮೂಕಾಂಬಿಕಾ ದೇವಳದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಅಡಿಗರ ನೇತ್ರತ್ವದಲ್ಲಿ ನೆಡೆದ ಚಂಡಿಹೋಮ ಹಾಗೂ ಇತರೆ ವಿಶೇಷ ಪೂಜೆಯಲ್ಲಿ ಭಾಗಿಯಾದರು. ಇವರ ಆತ್ಮೀಯರು ಮತ್ತು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹಾಕಯ್ ಅಕ್ಷಯ ಎಂ . ಇವರೊಂದಿಗೆ ಭಾಗಿಯಾಗಿದ್ದರು. ಗೃಹ ಸಚಿವರು ಜೂನ್ 6 ರ ಮಂಗಳವಾರದಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಭೇಟಿ ನೀಡಿ ಸಭೆಯನ್ನು ನಡೆಸಿದ್ದರು.