ಮನೋರಂಜನೆ

ಜೂನ್ 10ರಿಂದ ಫ್ಯಾಮಿಲಿ ಗ್ಯಾಂಗ್‍ಸ್ಟಾರ್ಸ್, ಹೊಸ ರಿಯಾಲಿಟಿ ಶೋ ಪ್ರಸಾರವಾಗಲಿದೆ .

Published

on

ಕಲರ್ಸ್ ಕನ್ನಡದಲ್ಲಿ ಜೂನ್ 10ರಿಂದ ಫ್ಯಾಮಿಲಿ ಗ್ಯಾಂಗ್‍ಸ್ಟಾರ್ಸ್ ಕಾರ್ಯಕ್ರಮ ಪ್ರಸಾರವಾಗಲಿದೆ. ಯಾವ ರೀತಿ ಇರುತ್ತೆ ನೋಡಿ ಈ ರಿಯಾಲಿಟಿ ಶೋ.

ಕಲರ್ಸ್ ಕನ್ನಡ ಜನರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದಿರುತ್ತೆ. ವಾರದ ದಿನಗಳಲ್ಲಿ ಧಾರಾವಾಹಿ ಮೂಲಕ ಮನರಂಜನೆ ನೀಡಿದ್ರೆ, ವೀಕೆಂಡ್‍ನಲ್ಲಿ ರಿಯಾಲಿಟಿ ಶೋಗಳ ಮೂಲಕ ಜನರನ್ನು ಸೆಳೆಯುತ್ತಿದೆ.

ಜನರಿಗೆ ಕಚಗುಳಿ ಇಟ್ಟ ಗಿಚ್ಚಿ ಗಿಲಿಗಿಲಿ ಸೀಸನ್ 2 ಈ ವಾರ ಮುಕ್ತಾಯವಾಗಲಿದೆ. ಶನಿವಾರ ಮತ್ತು ಭಾನುವಾರ ಗ್ರ್ಯಾಂಡ್ ಫಿನಾಲೆ ಇದೆ. ಯಾರು ಗೆಲ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಈ ಶೋ ಮುಗಿಯುತ್ತಿರುವ ಕಾರಣ ಹೊಸ ಕಾರ್ಯಕ್ರಮ ಶುರುವಾಗಲಿದೆ.ಕಲರ್ಸ್ ಕನ್ನಡದಲ್ಲಿ ಜೂನ್ 10ರಿಂದ ಫ್ಯಾಮಿಲಿ ಗ್ಯಾಂಗ್‍ಸ್ಟಾರ್ಸ್ ಕಾರ್ಯಕ್ರಮ ಪ್ರಸಾರವಾಗಲಿದೆ. ಸೃಜನ್ ಲೋಕೇಶ್ ಅವರ ನಿರೂಪಣೆಯಲ್ಲಿ ಕಲರ್ಸ್ ಕುಟುಂಬಗಳ ಹಣಾಹಣಿ ನಡೆಯಲಿದೆ.

ಕಲರ್ಸ್ ಕನ್ನಡ ಚಾನೆಲ್ ಪ್ರೊಮೋ ಬಿಟ್ಟಿದೆ. ಅದರಲ್ಲಿ ಸೃಜನ್ ಲೋಕೇಶ್ ಅವರನ್ನು ರೌಡಿಗಳು ತಂದು ಕಟ್ಟಿ ಹಾಕಿರುತ್ತಾರೆ. ಟಾಕಿಂಗ್ ಸ್ಟಾರ್ ಸುಮ್ಮನೇ ಕೂತಿದ್ದಾರೆ. ಜಡ್ಜ್ ಆಗಿದ್ದಾರೆ ಅಲ್ವಾ ಅಷ್ಟೇ ಮುಗೀತು, ಇವನು ಮತ್ತೆ ಮೇಲೆ ಎದ್ದಳಲ್ಲ ಎಂದು ರೇಗಿಸುತ್ತಾ ಇರ್ತಾರೆ.

ಆಗ ಸೃಜನ್ ಲೋಕೇಶ್ ಅವರಿಗೆ ಫೋನ್ ಬರುತ್ತೆ. ಫ್ಯಾಮಿಲಿ ಕಾಲಿಂಗ್ ಅಂತ. ಸೃಜನ್ ಅವರು ಮಾತನಾಡಬೇಕು ಅಂತಾರೆ. ಆಗ ರೌಡಿಗಳು ಕೊನೆ ಆಸೆ ಮಾತನಾಡು ಅಂತಾರೆ. ಆಗ ಎಲ್ರೋ ಇದೀರಾ ಎಂದು ಕೇಳ್ತಾರೆ.ಸೃಜನ್ ಲೋಕೇಶ್ ಅವರನ್ನು ಕಾಪಾಡಲು, ಕಲರ್ಸ್ ಕನ್ನಡ ಧಾರಾವಾಹಿಯ ಎಲ್ಲಾ ನಾಯಕ, ನಾಯಕಿಯರ ಎಂಟ್ರಿ ಆಗುತ್ತೆ. ಎಲ್ಲಾ ಬಂದು ಸೃಜನ್ ಲೋಕೇಶ್ ಅವರನ್ನು ಕಾಪಾಡ್ತಾರೆ.ನಾನು ಒಬ್ಬನೇ ಬಂದ್ರೆನೇ ಹಾವಳಿ, ಇನ್ನು ಫ್ಯಾಮಿಲಿ ಕರೆದುಕೊಂಡು ಬರ್ತಾ ಇದ್ದೇನೆ. ಪ್ರತಿ ವಾರವೂ ದೀಪಾವಳಿ ಎಂದು ಸೃಜನ್ ಲೋಕೇಶ್ ಹೇಳ್ತಾರೆ. ಆಗ ಎಲ್ಲರೂ ಹೋಗ್ತಾರೆ.

ಕಲರ್ಸ್ ಸಂಸಾರಗಳ ಕಲರ್​ಫುಲ್ ಹಣಾಹಣಿ, ಬರ್ತಿದೆ ಹೊಸ ರಿಯಾಲಿಟಿ ಗೇಮ್ ಶೋ ಫ್ಯಾಮಿಲಿ ಗ್ಯಾಂಗ್‍ಸ್ಟಾರ್ಸ್ ಎಂದು ಪ್ರೊಮೋ ಮುಗಿಯುತ್ತೆ. ಇದರಲ್ಲಿ ಸೀರಿಯಲ್ ಸಂಸಾರಗಳೇ ಭಾಗವಹಿಸಲಿದ್ದಾರೆ.ಜೂನ್ 10 ರಿಂದ ಈ ರಿಯಾಲಿಟಿ ಶೋ ಶುರುವಾಗಲಿದ್ದು, ಹೊಸ ತರದ ಕಾರ್ಯಕ್ರಮ ಜನ ನೋಡಲು ಕಾತುರರಾಗಿದ್ದಾರೆ. ಹೇಗಿರುತ್ತೆ ಈ ಶೋ ಅಂತ ನೋಡೋಕೆ ಮುಂದಿನ ವಾರದವರೆಗೆ ಕಾಯಬೇಕು.

Leave a Reply

Your email address will not be published. Required fields are marked *

Trending

Exit mobile version