ತಾಜಾ ಸುದ್ದಿ

ಗ್ಯಾರಂಟಿ ಯೋಜನೆಗೆ ಭಾರೀ ಹೊರೆ

Published

on

ಬೆಂಗಳೂರು, ಜೂ 01: ಕಾಂಗ್ರೆಸ್ ಭರವಸೆ ನೀಡಿರುವ ಐದು ಗ್ಯಾರಂಟಿ ಯೋಜನೆ ಜಾರಿಯು ರಾಜ್ಯದ ಬೊಕ್ಕಸಕ್ಕೆ ಭಾರೀ ಹೊರೆ ಉಂಟುಮಾಡಲಿದೆ. ಸಂಪನ್ಮೂಲ ಕ್ರೋಢಿಕರಣವು ಇಲಾಖೆಗೆ ಬಹು ದೊಡ್ದ ಸವಾಲಾಗಲಿದೆ.

ಒಂದೆಡೆ ಗ್ಯಾರಂಟಿ ಯೋಜನೆ ಮಾಡಿಯೇ ಮಾಡುತ್ತೇವೆಂದು ಸಿಎಂ ಸಿದ್ದರಾಮಯ್ಯ ಶಪಥ ಮಾಡಿದ್ದಾರೆ. ಹೀಗಾಗಿ ಆದಾಯಕ್ಕಾಗಿ ಕಂದಾಯ ಇಲಾಖೆ, ಮೇಲೆ ರಾಜ್ಯ ಸರ್ಕಾರ ಕಣ್ಣಿಟ್ಟಿದೆ. ಜತೆಗೆ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ರಾಜ್ಯ ಸರ್ಕಾರ ಸೆಸ್ ಹೆಚ್ಚಿಸುವ ಸಾಧ್ಯತೆ ಇದೆ

ಕಂದಾಯ, ಅಬಕಾರಿ, ನೋಂದಣಿ ಇಲಾಖೆಯಲ್ಲಿ ಹಣ ಸೋರಿಕೆಗೆ ಕ್ರಮ ವಹಿಸುವಂತೆ, ಇಲಾಖೆಯಲ್ಲಿ ಅನಗತ್ಯ ಹಣ ಸೋರಿಕೆ ತಡೆಗಟ್ಟುವಿಕೆಗೆ ತಿರ್ಮಾನ ಮಾಡಲಾಗಿದೆ. ರಾಜ್ಯದಲ್ಲಿ ಮರಳು ಪರವಾನಿಗೆ ಸೇರಿದಂತೆ ಹೊಸ ಸುಲ್ಕ ನಿಗದಿ ಮಾಡುವ ಸಾಧ್ಯತೆ ಇದೆ. ಅಬಕಾರಿ ಇಲಾಖೆಯಲ್ಲಿ ನೂತನ ಮಾದರಿಯ ಆದಾಯಕ್ಕೆ ಪ್ಲ್ಯಾನ್​ ಮಾಡಲಾಗಿದೆ.

ಅದರೂ ಸಂಪನ್ಮೂಲ ಕ್ರೋಢಿಕರಣವು ಅಂದುಕೊಂಡಷ್ಟು ಸುಲಭ ಸಾಧ್ಯವಿಲ್ಲದಿರುವುದರಿಂದ ಸಿದ್ದರಾಮಯ್ಯ ಸರ್ಕಾರಕ್ಕೆ ಹಗ್ಗದ ಮೇಲಿನ ನಡಿಗೆಯಂತಾಗಿದೆ.

Leave a Reply

Your email address will not be published. Required fields are marked *

Trending

Exit mobile version