ಮನೋರಂಜನೆ

ಖಾಸಗಿ ಫೋಟೋ ಶೇರ್ ಮಾಡಿ ಟ್ರೊಲ್ ಗೆ ಗುರಿಯಾದ ನಟ

Published

on

ಮುಂಬೈ, ಮೇ 30 :  ಬಾಲಿವುಡ್ ನಟಿ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್  ಅವರ ಜೋಡಿ ತುಂಬಾ ಫೇಮಸ್ ಆಗಿದ್ದು, ಅದರಲ್ಲೂ ಸಿನಿಮಾಗಿಂತ ಖಾಸಗಿ ವಿಚಾರವಾಗಿಯೇ ಹೆಚ್ಚು ಸುದ್ದಿಯಲ್ಲಿರುತ್ತಾರೆ.  ಮಲೈಕಾ  ಅರ್ಜುನ್ ಕಪೂರ್ ಅವರ  ಅರೆಬೆತ್ತಲೆ ಫೋಟೋ ಹಂಚಿಕೊಂಡಿದ್ದರಿಂದ   ಸಖತ್ ಟ್ರೋಲ್  ಆಗುತ್ತಿದ್ದಾರೆ

2016ರಲ್ಲಿ ಮಲೈಕಾ ಮತ್ತು ಅರ್ಬಾಜ್ ಅವರ 19 ವರ್ಷಗಳ ದಾಂಪತ್ಯ ಕೊನೆ ಆದ ಬಳಿಕ ಅರ್ಜುನ್ ಹಾಗೂ ಮಲೈಕಾ ಸುತ್ತಾಟ ಆರಂಭಿಸಿದ್ದರಿಂದಲೇ ವಿಚ್ಛೇದನ ಆಯಿತು ಎನ್ನುವ ಆರೋಪ ಕೂಡ ಇದೆ. ಆದರೆ, ‘ನಮ್ಮ ನಡುವೆ ಯಾವುದೇ ಪ್ರೀತಿ ಇಲ್ಲ, ನಮ್ಮ ಮಧ್ಯೆ ಇರುವುದು ಒಳ್ಳೆಯ ಫ್ರೆಂಡ್​ಶಿಪ್’ ಎಂದು ಈ ಜೋಡಿ ಹೇಳುತ್ತಾ ಬಂತು.

ಇನ್ನೂ, ಮಲೈಕಾ ಅರೋರಾ ವಯಸ್ಸಿನಲ್ಲಿ ದೊಡ್ಡವರಾದ್ರೂ ಕೂಡ ಅವರ ಅಂದ ಚಂದ ಇನ್ನೂ ಹಾಗೆಯೇ ಇದೆ. ಈ ನಟಿ ಆಗಾಗ ತಮ್ಮ ಪ್ರಿಯತಮ ಅರ್ಜುನ್ ಕಪೂರ್ ಜೊತೆ ಹಾಗೂ ತಮ್ಮದೇ ಕೆಲವು ಗ್ಲ್ಯಾಮರಸ್ ಫೋಟೋ ಹಂಚಿಕೊಳ್ಳುವ ಮೂಲಕ ನಟಿ ಸದ್ದು ಮಾಡುತ್ತಿರುತ್ತಾರೆ. ಆದರೀಗ ಗೆಳೆಯ ಅರ್ಜುನ್ ಕಪೂರ್ ಅವರ ಖಾಸಗಿ ಫೋಟೋವನ್ನ ನಟಿ ಶೇರ್ ಮಾಡಿದ್ದು, ಈ ಫೋಟೋ ಇದೀಗ ಟ್ರೋಲಿಗರ ಕೈಗೆ ಸಿಕ್ಕಿ ಸಕ್ಕತ್‌ ಟ್ರೋಲ್‌ ಆಗಿದೆ. ಮಲೈಕಾ- ಅರ್ಜುನ್ ಕಪೂರ್ ರಿಲೇಷನ್‌ಶಿಪ್ ಇದೀಗ ಗುಟ್ಟಾಗಿ ಏನು ಉಳಿದಿಲ್ಲ. ಅರ್ಬಾಜ್ ಖಾನ್ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಮಲೈಕಾ, ಅರ್ಜುನ್ ಕಪೂರ್ ಜೊತೆ ಡೇಟ್ ಮಾಡುತ್ತಿದ್ದಾರೆ. ಲಿವಿಂಗ್ ರಿಲೇಷನ್‌ಶಿಪ್ನಲ್ಲೂ ಇದ್ದಾರೆ. ಆಗಾಗ ಇಬ್ಬರೂ ವಿದೇಶಕ್ಕೆ ಹೋಗಿ ಬರುತ್ತಾರೆ. ಅಷ್ಟರ ಮಟ್ಟಿಗೆ ಇಬ್ಬರ ಬಂಧ ಗಟ್ಟಿಯಾಗಿದೆ.

ಇನ್ನೂ ಈ ಫೊಟೋಗೆ ಭಾರೀ ನೆಗೆಟಿವ್ ಕಾಮೆಂಟ್ ಗಳು ಹೆಚ್ಚಾಗುತ್ತಿದ್ದಂತೆಯೇ ಸ್ವತಃ ಅರ್ಜುನ್ ಕಪೂರ್ ಅವರೇ ಅಖಾಡಕ್ಕೆ ಇಳಿದಿದ್ದರು. ಮೌನವಾಗಿ ಸಂಭ್ರಮಿಸಿ. ಶಾಂತಿ ಕಾಪಾಡಿಕೊಳ್ಳಿ ಎನ್ನುವಂತೆ ಅವರು ಕಾಮೆಂಟ್ ಮಾಡಿದ್ದರು. ಪರೋಕ್ಷವಾಗಿ ಅವರು ಟ್ರೋಲ್ ಮಾಡುತ್ತಿರುವವರಿಗೆ ಟಾಂಗ್ ಕೊಟ್ಟಿದ್ದರು. ಈ ಮೂಲಕ ಮಲೈಕಾ ಅರೋರಾ ಪರವಾಗಿ ನಿಂತುಕೊಂಡಿದ್ದರು. ಆದರೂ, ನೆಗೆಟಿವ್ ಕಾಮೆಂಟ್ ಗಳು ನಿಂತಿಲ್ಲ. ಟ್ರೋಲ್ ಮಾಡುವವರ ವಿರುದ್ಧ ಗರಂ ಆಗಿದ್ದಾರೆ.

‘ನನ್ನ ಲೇಝಿ ಬಾಯ್’ ಎಂದು ಅರ್ಜುನ್ ಖಾಸಗಿ ಫೋಟೋವನ್ನ ನಟಿ ಶೇರ್ ಮಾಡಿದ್ದಾರೆ. ಅರ್ಜುನ್ ಕಪೂರ್ ಮೈ ಮೇಲೆ ಬಟ್ಟೆ ಇಲ್ಲದೆ ಕಪ್ಪು ಬಣ್ಣದ ತಲೆದಿಂಬು ಇಟ್ಟುಕೊಂಡು ಕ್ಲಿಕ್ಕಿಸಿದ ಫೋಟೋವನ್ನು ಮಲೈಕಾ ಶೇರ್ ಮಾಡಿದ್ದು ಇದೀಗ ಈ ಫೋಟೋ ಟ್ರೋಲಿಗರ ಬಾಯಿಗೆ ಆಹಾರವಾಗಿದೆ. ನಟನ ಲುಕ್‌ಗೆ ನಾಚಿಕೆಗೇಡಿನ ಸಂಗತಿ ಎಂದು ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version