ವಿದೇಶ

ನಿದ್ರಿಸುತ್ತಿದ್ದ ವೇಳೆ ಅಗ್ನಿ ಅವಘಡದಲ್ಲಿ ಸಾವನ್ನಪಿದ್ದ ವಧು

Published

on

ವಾಷಿಂಗ್ಟನ್, ಮೇ 28 : ಬೆಳಗ್ಗಿನ ಜಾವ 4 ಗಂಟೆಯ ಸುಮಾರಿಗೆ ರೀಡ್ಸ್‌ಬರ್ಗ್ ಮನೆಯ ಎರಡನೇ ಮಹಡಿಯಲ್ಲಿ ವಧು  ನಿದ್ರಿಸುತ್ತಿದ್ದ ವೇಳೆ ಅಗ್ನಿ ಅವಘಡ ಸಂಭವಿಸಿ ಮೃತಪಟ್ಟಿದ್ದಾಳೆ. 

ಪೈಜ್ ರಡ್ಡಿ (19) ವರ್ಷದ ಯುವತಿ ಈ ಘಟನೆಯಲ್ಲಿ ಮೃತಪಟ್ಟ ವಧು., ಈ ಘಟನೆ ಅಮೇರಿಕಾದ ವಿಸ್ಕಾನ್ಸಿನ್‌ ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಮೇ 23ರಂದು ಬೆಳಗ್ಗಿನ ಜಾವ ಯುವತಿ ಪೈಜ್ ರಡ್ಡಿ ರೀಡ್ಸ್‌ಬರ್ಗ್ ಮನೆಯ ಎರಡನೇ ಮಹಡಿಯಲ್ಲಿ ನಿದ್ರಿಸುತ್ತಿದ್ದ ವೇಳೆ ಮನೆಗೆ ಬೆಂಕಿ ಹತ್ತಿಕೊಂಡಿದ್ದು, ಹೊಗೆಯಿಂದಾಗಿ ಉಸಿರುಗಟ್ಟಿ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫ‌ಲಕಾರಿಯಾಗದೆ ಯುವತಿ ಸಾವನ್ನಪ್ಪಿದ್ದಾಳೆ ಎಂದು ವರದಿಗಳು ತಿಳಿಸಿವೆ.

ಇನ್ನೂ ಈ ಘಟನೆಗೆ ಸೂಕ್ತ ಕಾರಣ ತಿಳಿದುಬಂದಿಲ್ಲ. ಅಲ್ಲದೇ ಘಟನೆ ನಡೆದ ಸಂದರ್ಭ ಇನ್ನೂ ಮೂವರು ಮನೆಯಲ್ಲಿದ್ದು, ಅಗ್ನಿಶಾಮಕ ದಳ ಬರುವಷ್ಟರಲ್ಲಿ ಬೆಂಕಿಯಿಂದ ಪಾರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version