ತಾಜಾ ಸುದ್ದಿ

ಮಡಿಕೇರಿ,ಕೊಡಗು ಗಡಿಭಾಗದಲ್ಲಿ ಮತ್ತೆ ಪ್ರವಾಹದ ಭೀತಿ -ಹೈ ಅಲರ್ಟ್

Published

on

ಮಳೆಗಾಲ ಶುರುವಾಯ್ತು. ಕೊಡಗು ಹಾಗೂ ಗಡಿ ಭಾಗದಲ್ಲಿರುವ ಜನರ ಎದೆಯೊಳಗೆ ಢವ..ಢವವೂ ಜೋರಾಯ್ತು.

ಹೌದು, ಪ್ರತಿ ಮಳೆಗಾಲದಲ್ಲಿ ಕೊಡಗಿನಲ್ಲಿ ಒಂದಿಲ್ಲೊಂದು ದುರಂತಗಳು ಸಂಭವಿಸುತ್ತಿವೆ. ಮುಗ್ದಜೀವಗಳು ಬಲಿಯಾಗುತ್ತಿವೆ. ಇದೀಗ ಮಡಿಕೇರಿ, ಸಂಪಾಜೆ, ಮದೆನಾಡು, ಜೋಡುಪಾಲ, ಭಾಗಮಂಡಲ ಸೇರಿದಂತೆ ಹಲವು ಕಡೆ ಅಪಾಯ ಎದುರಾಗುವ ಸಾಧ್ಯತೆ ಇದೆ.ಈ ಕುರಿತಾಗಿ ಸರಕಾರಕ್ಕೆ ಕೊಡಗು ಜಿಲ್ಲಾಡಳಿತ ವರದಿಯನ್ನು ನೀಡಿದೆ. ಈ ಪ್ರಕಾರವಾಗಿ ನೋಡುವುದಾದರೆ ಮಡಿಕೇರಿ ತಾಲೂಕಿನ 768 ಕುಟುಂಬದ 2681 ಮಂದಿ ಅಪಾಯದಲ್ಲಿದ್ದಾರೆ. ಇವರನ್ನು ಸ್ಥಳಾಂತರ ಮಾಡುವುದಕ್ಕೆ ಜಿಲ್ಲಾಡಳಿತ ಎಲ್ಲ ಕ್ರಮವನ್ನು ತೆಗೆದುಕೊಂಡಿದ್ದು ಒಟ್ಟು 26 ಕ್ಯಾಂಪ್‌ಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಸೋಮವಾರಪೇಟೆ ತಾಲೂಕಿನ 4,162 ಜನರನ್ನು 30 ಕ್ಯಾಂಪ್‌ಗಳನ್ನು ತೆರೆದು ಶಿಫ್ಟ್‌ ಮಾಡಲು ನಿರ್ಧರಿಸಲಾಗಿದೆ. ಇನ್ನು ವಿರಾಜಪೇಟೆಯ 582 ಕುಟುಂಬಗಳ 2,049 ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲು ಚಿಂತಿಸಲಾಗಿದೆ. ಈ ಎಲ್ಲದರ ನಡುವೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್‌) ಈ ಸಲ ಮಳೆಗಾಲದಲ್ಲಿ ಕೊಡಗಿಗೆ ಬಂದಿರಲಿದ್ದು ತುರ್ತು ಸಂದರ್ಭದಲ್ಲಿ ನೆರವಾಗಲಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version