ಮನೋರಂಜನೆ

ಕೇರಳ ಸ್ಟೋರಿʼ ಸಿನಿಮಾದ ನಟಿ ಅದಾ ಶರ್ಮಾ ಮೊಬೈಲ್ ನಂಬರ್ ನ್ನು ಕಿಡಿಗೇಡಿಗಳು ಲೀಕ್ ಮಾಡಿ ಕಿರುಕುಳ

Published

on

ಮುಂಬೈ, ಮೇ 25 : ಸುದೀಪ್ತೋ ಸೇನ್ ನಿರ್ದೇಶನದ ಸಿನಿಮಾ 200 ಕೋಟಿ ಕ್ಲಬ್‌ ಸೇರಿದ ಕೇರಳ ಸ್ಟೋರಿʼ ಸಿನಿಮಾದ ನಟಿ ಅದಾ ಶರ್ಮಾ ಅವರ ಮೊಬೈಲ್ ನಂಬರ್ ನ್ನು ಕಿಡಿಗೇಡಿಗಳು ಲೀಕ್ ಮಾಡಿ, ಮಾನಸಿಕ ಕಿರುಕುಳ ನೀಡಲಾರಂಭಿಸಿದ್ದಾರಂತೆ.

ನಟಿ ಅದಾ ಶರ್ಮಾ ಅವರ ವೈಯಕ್ತಿಕ ಫೋನ್‌ ನಂಬರ್‌ ನ್ನು ಹ್ಯಾಕರ್‌ ವೊಬ್ಬ ಲೀಕ್‌ ಮಾಡಿದ್ದಾನೆ ಎನ್ನಲಾಗಿದೆ. jhamunda_bolte ಎಂಬ ಬಳಕೆದಾರ ಇನ್ಸ್ಟಾಗ್ರಾಮ್‌ ನಲ್ಲಿ ನಟಿಯ ಫೋನ್‌ ನಂಬರ್‌ ಲೀಕ್‌ ಮಾಡಿದ್ದಾನೆ.

ಕೆಲವರು ನಟಿಯ ನಂಬರ್‌ ಪಡೆದು ನಟಿಗೆ ನಾನಾ ರೀತಿಯಲ್ಲಿ ಮೆಸೇಜ್‌ ಗಳನ್ನು ಮಾಡಿ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಮುಸ್ಲಿಂಮರ ವಿರುದ್ಧದ ಸಿನಿಮಾ ಬಂದರೆ ರಿಜೆಕ್ಟ್‌ ಮಾಡಿ ಎಂದು ಮತ್ತೊಂದು ಪೋಸ್ಟ್‌ ಮಾಡಿದ್ದಾನೆ. ಹೊಸ ನಂಬರ್‌ ಬಳಸಿದರೆ ಅದನ್ನು ಕೂಡ ಲೀಕ್‌ ಮಾಡುತ್ತೇನೆ ಎಂದು ಬೆದರಿಕೆಯನ್ನು ಹಾಕಿದ್ದಾನೆ.

ನಟಿಯ ಅಭಿಮಾನಿಗಳು ಅಕೌಂಟ್‌ ಬಗ್ಗೆ ಕೂಡಲೇ ರಿಪೋರ್ಟ್‌ ಮಾಡಿದ ಬಳಿಕ ಆತನ ಅಕೌಂಟ್‌ ಸ್ಥಗಿತಗೊಂಡಿದೆ. ಕೆಲವೇ ಕ್ಷಣವಿದ್ದ ನಟಿಯ ನಂಬರ್‌ ಪೋಸ್ಟ್‌ ವೈರಲ್‌ ಆಗಿದೆ.ಆದರೆ ನಟಿ ಅದಾ ಶರ್ಮಾ ಈ ಬಗ್ಗೆ ಇನ್ನು ಯಾವ ಪ್ರತಿಕ್ರಿಯೆ ನೀಡಿಲ್ಲ.

ಅದಾ ಶರ್ಮಾ, ಚಿತ್ರ ಬಿಡುಗಡೆ ವೇಳೆ “ಇದೊಂದು ಉಗ್ರ ಸಂಘಟನೆ ವಿರೋಧಿ ಸಿನಿಮಾ, ಉಗ್ರ ಸಂಘಟನೆಗಳು ಬೆದರಿಕೆ ಹಾಕುವ ಆತಂಕವಿದೆ. ಬೇರೆ ಜನರಿಗೆ ಯಾಕೆ ಸಮಸ್ಯೆಯಾಗುತ್ತಿದೆ ಎಂದು ಅರ್ಥವಾಗುತ್ತಿಲ್ಲ’ ಎಂದಿದ್ದರು.

Leave a Reply

Your email address will not be published. Required fields are marked *

Trending

Exit mobile version